ಗಲಭೆಕೊರರ ಕಾರ್ಯಕ್ರಮಕ್ಕೆ ಉಪಸ್ಥಿತರಿರುವ ಪೊಲೀಸ ಅದಿಕಾರಿಗಳು ಅಪರಾಧವನ್ನು ಹೇಗೆ ತಾನೆ ತಡೆಯುತ್ತಾರೆ?
ಮುಂಬಯಿ – ೨೦೧೨ ರಲ್ಲಿ ಆಜಾದ ಮೈದಾನದಲ್ಲಿ ನಡೆದ ಗಲಭೆಯಲ್ಲಿ ಭಾಗಿಯಾಗಿದ್ದ ರಝಾ ಅಕಾಡೆಮಿಯ ‘ಇಫ್ತಾರ ಕೂಟ’ ದಲ್ಲಿ ಮುಂಬೈ ಪೊಲೀಸ ಕಮಿಶನರ ಸಂಜಯ ಪಾಂಡೆ ಉಪಸ್ಥಿತರಿದ್ದರು. ಬಿಜೆಪಿ ಶಾಸಕ ನಿತೇಶ ರಾಣೆ ಅವರು ಸಂಜಯ ಪಾಂಡೆ ಇಫ್ತಾರ ಕೂಟದಲ್ಲಿರುವ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ. (ರಝಾ ಅಕಾಡೆಮಿ ರೂವರಿಯಾಗಿದ್ದ ಆಜಾದ ಮೈದಾನದಲ್ಲಿ ನಡೆದ ಗಲಭೆಯಲ್ಲಿ ಜಿಹಾದಿಗಳು ಮಹಿಳಾ ಪೊಲೀಸರ ಬಟ್ಟೆ ಹರಿದಿದ್ದಾರೆ. ಮ್ಯಾನಮಾರನಲ್ಲಿ ಮಸೀದಿ ಧ್ವಂಸ ಮಾಡಿರುವ ವದಂತಿಗಳನ್ನು ಹರಡುವ ಮೂಲಕ ರಝಾ ಅಕಾಡೆಮಿ ಮಹಾರಾಷ್ಟ್ರದ ವಿವಿಧ ಜಿಲ್ಲಗಳಲ್ಲಿ ಗಲಭೆಗೆ ಕಾರಣವಾಯಿತು. ಇಂತಹ ಸಮಾಜ ವಿರೋಧಿ ರಾಷ್ಟ್ರ ವಿರೋಧಿ ಸಂಘಟನೆಗಳ ಕಾರ್ಯಕ್ರಮದಲ್ಲಿ ಪೊಲೀಸ ಆಯುಕ್ತರೇ ಹಾಜರಿರುವದಾದರೆ ಈ ಪ್ರಕರಣ ಗಂಭಿರವಾಗಿದೆ. ಈ ಪ್ರಕರಣದಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು! – ಸಂಪಾದಕ)
ದೇಶ ವಿರೋಧಿ ಚಟುವಟಿಕೆಗಳನ್ನು ಪ್ರೊತ್ಸಾಹಿಸುವ ನೀತಿಯನ್ನು ಸರಕಾರ ಹೊಂದಿದೆಯೇ? – ಶಾಸಕ ನಿತೇಶ ರಾಣೆ, ಬಿಜೆಪಿ
ज्या ‘रझा अकादमीने’आझादमैदानात अमर जवान मुर्ती तोडली व महिला पोलिस भगिनींशी गैरवर्तन केले अशा देशविरोधी कृती करणाऱ्यांच्या इफ्तारमध्ये सामिल होऊन त्यांना अधिकृतरित्या प्रोत्साहित करणे हे महाविकास आघाडीचं धोरण राबविण्याचा अधिकाऱ्यांवरती दबाव आहे का?@OfficeofUT @BJP4Maharashtra pic.twitter.com/8IQDhvmwBJ
— nitesh rane (@NiteshNRane) April 18, 2022
ರಝಾ ಅಕಾಡೆಮಿ ನಿರಂತರವಾಗಿ ದೇಶವಿರೋಧಿ ನಿಲುವು ತಳೆದಿದೆ. ಒಂದುಕಡೆ, ರಾಜ್ಯ ಗೃಹ ಸಚಿವ ದಿಲೀಪ ವಲ್ಸೆ ಪಾಟೀಲ ಅವರು ಶಾಸಕಾಂಗದಲ್ಲಿ ರಜಾ ಅಕಾಡೆಮಿಯನ್ನು ನಿಷೇಧಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳುತ್ತಾರೆ; ಆದರೆ ಮತ್ತೊಂದೆಡೆ ರಝಾ ಅಕಡೆಮಿಯ ‘ಇಫ್ತಾರ ಕೂಟ’ ದಲ್ಲಿ ಅವರ ಅಧಿಕಾರಿಗಳು ಹಾಜರಾಗಿರುತ್ತಾರೆ. ಆಜಾದ ಮೈದಾನದ ಅಮರ ಜವಾನ ಸ್ಮಾರಕವನ್ನು ಒಡೆದವರ ಮತ್ತು ಮಹಿಳಾ ಪೊಲೀಸ ಸಹೋದರಿಯರ ಮೇಲೆ ದೌರ್ಜನ್ಯ ಎಸಗಿದ ರಝಾ ಅಕಾಡೆಮಿಯ ಇಫ್ತಾರ ಕೂಟದಲ್ಲಿ ಅಧಿಕೃತವಾಗಿ ಭಾಗವಹಿಸುವ ಆ ಮಾನಸಿಕತೆಯನ್ನು ಪ್ರೋತ್ಸಾಹಿಸುವ ಮಹಾವಿಕಾಸ ಅಘಾಡಿ ನೀತಿಯನ್ನು ಜಾರಿಗೆ ತರಲು ಅಧಿಕಾರಿಗಳ ಮೇಲೆ ಒತ್ತಡವಿದೆಯೇನು?