ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರ ಪ್ರಶ್ನೆಗಳು

ಮಸೀದಿಯಲ್ಲಿ ಶ್ರೀ ಸತ್ಯನಾರಾಯಣನನ್ನು ಪೂಜಿಸುತ್ತಾರೇನು? ಇನ್ನೂ ಹಿಂದೂಗಳು ತಲೆಬಾಗಬೇಕೇ ?

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ

ಶಿವಮೊಗ್ಗ (ಕರ್ನಾಟಕ) – ಯಾವುದೇ ಕಾಲದಲ್ಲಿ ಬದಲಾವಣೆ ಒಮ್ಮುಖವಾಗಿರಲು ಸಾಧ್ಯವಿಲ್ಲ. ನಮ್ಮ ಗುರುಗಳು ಮುಸ್ಲಿಮರನ್ನು ಮಠಕ್ಕೆ ಕರೆತಂದು ಸ್ವಾಗತಿಸಿದರು; ಆದರೆ ಯಾವುದೇ ಮಸೀದಿಯಲ್ಲಿ ಮಠಾಧೀಶರನ್ನು ಶ್ರೀ ಸತ್ಯನಾರಾಯಣ ಪೂಜೆ ಅಥವಾ ಹಿಂದೂ ಹಬ್ಬ ಆಚರಿಸಲು ಅಹ್ವಾನಿಸಿದ ಉದಾಹರಣೆ ಇಲ್ಲ. ಹೀಗೆ ಒಂದೇ ಕಡೆಗೆ ಏಕೆ ಮತ್ತು ಎಲ್ಲಿಯವರೆಗೆ ಬಾಗುತ್ತಿರುತ್ತಿರಿ? ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರು ಈ ಪ್ರಶ್ನೆಯನ್ನು ಮಂಡಿಸಿದರು. ರಾಜ್ಯದ ಮಾಜಿ ಮಂತ್ರಿ ಈಶ್ವರಪ್ಪನವರ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸ್ವಾಮಿಜಿಯವರು ಮುಂದುವರಿಸುತ್ತಾ…

1. ಪ್ರತಿಯೊಬ್ಬರೂ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ; ಆದರೆ ಒಂದೆಡೆ ನಮ್ಮ ಆಚರಣೆಗೆ ವಿರೋಧ ವ್ಯಕ್ತವಾಗಿದೆ. ಇದು ಯಾವ ನ್ಯಾಯ ಅಂತ ಅರ್ಥವಾಗುತ್ತಿಲ್ಲ. ನಮ್ಮ ಮೇಲೆ ಇಷ್ಟೆಲ್ಲಾ ದಾಳಿಗಳು ನಡೆಯುತ್ತಿರುವಾಗ ಹಿಂದೂಗಳು ಸದಾ ತಲೆಬಾಗಬೇಕು ಎಂದು ಬಯಸುವುದು ಯಾವ ನ್ಯಾಯ?

2. ಇಬ್ಬರ ಸಹಕಾರದಿಂದ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸರಕಾರದ ಭಯ ಹೋಗಿದೆ ಅನ್ನಿಸುತ್ತದೆ. ಹಿಂದೂಗಳು ಭಯಪಡಬೇಕಾದಂತಹ ಘಟನೆಗಳು ನಡೆಯುತ್ತಿವೆ. ಇನ್ನೂ ಮುಂದೆ ನಡೆಯದಿರುವ ಹಾಗೆ ಸರಕಾರ ಕ್ರಮ ಕೈಗೊಳ್ಳಬೇಕು.

3. ಶ್ರೀರಾಮನವಮಿ ಮತ್ತು ಹನುಮಾನ್ ಜಯಂತಿಯ ಮೆರವಣಿಗೆಗಳ ಮೇಲೆ ಕಲ್ಲು ತೂರಾಟವಾಗಿದನ್ನು ನೋಡಿದ ಅನೇಕ ಜನರು ದುಃಖಿತರಾಗಿದ್ದರು. ಶ್ರೀರಾಮ ಮತ್ತು ಹನುಮಂತರು ಹುಟ್ಟಿದ ದೇಶದಲ್ಲಿ ಇದು ನಡೆಯುತ್ತಿದೆ. ಬಹುಸಂಖ್ಯಾತರಾಗಿರುವ ಹಿಂದೂಗಳ ಹಬ್ಬಗಳ ಮೇಲೆ ದಾಳಿ ನಡೆಸುವುದು ಸರಿಯಲ್ಲ. ಇಂತಹ ಘಟನೆಗಳು ನಡೆಯುತ್ತಿರುವಾಗ ಏಕೀಕರಣದ ಬಗ್ಗೆ ಮಾತನಾಡುವುದು ಅರ್ಥಹೀನ. ಭವಿಷ್ಯದಲ್ಲಿ ಇಂತಹ ವಿರೋಧ ನಡೆಯಕೂಡದು.