ಜಾಲ್ನಾದಲ್ಲಿ ೩ ವರ್ಷದಲ್ಲಿ ಬೀದಿ ನಾಯಿಗಳಿಂದ ೫ ಸಾವಿರದ ೫೦೦ ಜನರ ಮೇಲೆ ದಾಳಿ !

ನಗರದ ವಿವಿಧ ರಸ್ತೆಗಳಲ್ಲಿ ರಾಜಾರೋಷವಾಗಿ ಸಂಚರಿಸುವ ಬೀದಿ ನಾಯಿಗಳು ವಾಹನ ಸವಾರರ ಮೇಲೆ ಮುಗಿಬೀಳುತ್ತಿವೆ. ಓಡಾಡುವ ನಾಗರಿಕರೊಂದಿಗೆ ಶಾಲೆಗೆ ಹೋಗುವ ಚಿಕ್ಕ ಮಕ್ಕಳನ್ನು ಹಿಂಬಾಲಿಸುತ್ತದೆ. ನಗರದಲ್ಲಿ ನಿತ್ಯ ೬ ರಿಂದ ೧೧ ಮಂದಿಗೆ ಬೀದಿ ನಾಯಿಗಳು ಕಚ್ಚುತ್ತಿವೆ.

ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಥಳಿಸಿದ ಪ್ರಕರಣದಲ್ಲಿ ತಪ್ಪಿತಸ್ಥ !

ಸೀಲಂಪುರ ಪ್ರದೇಶದ ಆಮ್ ಆದ್ಮಿ ಪಕ್ಷದ ಶಾಸಕ ಅಬ್ದುಲ್ ರೆಹಮಾನ್ ಮತ್ತು ಅವರ ಪತ್ನಿ ಅಸ್ಮಾ ಅವರನ್ನು ಥಳಿಸಿದ ಹಾಗೂ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.

ನೀವು ಜವಾನನಾಗಲೂ ಅರ್ಹರಲ್ಲ ! – ಉಚ್ಚ ನ್ಯಾಯಾಲಯದ ನ್ಯಾಯಾಧಿಶರಿಂದ ಉಪನಿರ್ದೇಶಕರಿಗೆ ಛೀಮಾರಿ

ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವ ಕಾನೂನುದ್ರೋಹಿ ಅಧಿಕಾರಿಗಳಿಗೆ ಕೇಲವ ಛೀಮಾರಿ ಹಾಕದೇ ಶಿಕ್ಷೆಗೆ ಒಳಗಾಗಿಸಬೇಕೆಂದು ಸಾಮಾನ್ಯ ಜನರು ನಿರೀಕ್ಷಿಸುತ್ತಾರೆ !

ಕಾಂಗ್ರೆಸ್ ನಾಯಕ ಸಚಿನ್ ಪಾಯಲಟ್ ಇವರ ಸ್ವಪಕ್ಷದ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನ ನಾಯಕ ಸಚಿನ್ ಪಾಯಲಟ್ ಇವರು ರಾಜ್ಯದಲ್ಲಿನ ಅವರ ಪಕ್ಷದ ಸರಕಾರದ ವಿರುದ್ಧ ಹುತಾತ್ಮ ಸ್ಮಾರಕದ ಹತ್ತಿರ ಮೌನ ಆಚರಿಸುತ್ತಾ ಪ್ರತಿಭಟನೆ ನಡೆಸಿದರು.

ಸಾಸಾರಾಮ (ಬಿಹಾರ)ದಲ್ಲಿ ಮುಸಲ್ಮಾನರು ನಡೆಸಿದ ದಂಗೆಯ ನಂತರ ಹಿಂದೂಗಳ ಪಲಾಯನ !

ಶ್ರೀರಾಮನವಮಿಯ ಸಮಯದಲ್ಲಿ ನಡೆದ ದಂಗೆಯ ನಂತರ ಇಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವರು ಪಲಾಯನ ಮಾಡಿದ್ದಾರೆ. ಇಲ್ಲಿಯವರೆಗೂ ಒತ್ತಡದ ಸ್ಥಿತಿಯಿದೆ. ನಾಲಂದದಲ್ಲಿಯೂ ಇದೆ ಸ್ಥಿತಿಯಿದೆ.

ಲಂಚ ಪ್ರಕರಣದಲ್ಲಿ ಕರ್ನಾಟಕದ ಭಾಜಪದ ಶಾಸಕ ಮಾಡಾಳು ವಿರೂಪಾಕ್ಷಪ್ಪನವರ ಬಂಧನ

ರಾಜ್ಯದ ಭಾಜಪ ಶಾಸಕ ಮಾಡಾಳು ವಿರುಪಾಕ್ಷಪ್ಪರನ್ನು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಳೆದ ತಿಂಗಳು ಅವರ ಪುತ್ರ ಪ್ರಶಾಂತನನ್ನು ಒಬ್ಬ ಗುತ್ತಿಗೆದಾರನಿಂದ ಲಂಚವನ್ನು ಪಡೆಯುವಾಗ ಬಂಧಿಸಲಾಗಿತ್ತು.

ಭಾಜಪ ಶಾಸಕನ ಮಗನನ್ನು ೪೦ ಲಕ್ಷ ರೂಪಾಯಿ ಲಂಚ ಪಡೆಯುವಾಗ ಬಂಧನ

ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು, ಲೋಕಾಯುಕ್ತವನ್ನು ಮತ್ತೆ ತರುವ ಉದ್ದೇಶ ರಾಜ್ಯದಲ್ಲಿನ ಭ್ರಷ್ಟಾಚಾರ ಬೇರು ಸಹಿತ ಕಿತ್ತು ಹಾಕುವುದಿದೆ, ಎಂದು ಹೇಳಿದರು.

ಉತ್ತರ ಪ್ರದೇಶ ವಿಧಾನಸಭೆಯಿಂದ ೬ ಪೊಲೀಸರಿಗೆ 1 ದಿನದ ಜೈಲುಶಿಕ್ಷೆ !

ಉತ್ತರಪ್ರದೇಶದ ವಿಧಾನಸಭೆಯಲ್ಲಿ ಭಾಜಪದ ಅಂದಿನ ಶಾಸಕ ಸಲಿಲ್ ಬಿಷ್ನೋಯಿ ಇವರು ೧೯ ವರ್ಷಗಳ ಹಿಂದೆ ಶಾಸಕರ ವಿಶೇಷ ಅಧಿಕಾರ ಭಂಗ ಆಗಿರುವ ಬಗ್ಗೆ ದೂರು ನೀಡಿದ್ದರು. ಇದರ ಬಗ್ಗೆ ಆಲಿಕೆ ನಡೆದು ಈ ಪ್ರಕರಣದಲ್ಲಿ ಶಾಸಕರ ಜೊತೆ ಅಸಭ್ಯವಾಗಿ ವರ್ತಿಸಿದ ೬ ಪೊಲೀಸರಿಗೆ ಒಂದು ದಿನದ ಜೈಲು ಶಿಕ್ಷೆ ವಿಧಿಸಿದೆ.

ಡಿ.ಎಮ್.ಕೆ ಸರಕಾರದಿಂದ ಒಂದು ದೇವಸ್ಥಾನದ ಧಾರ್ಮಿಕ ಪರಿಷತ್ತಿನ ಆಯೋಜನೆಗೆ ನಿರ್ಬಂಧ !

ತಮಿಳುನಾಡಿನ ಡಿ.ಎಮ್.ಕೆ ಸರಕಾರದ ಹಿಂದೂದ್ವೇಷ ! ತಮಿಳುನಾಡಿನಲ್ಲಿ ಡಿ.ಎಮ್.ಕೆ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪರಿಣಾಮಕಾರಿ ಹಿಂದೂ ಸಂಘಟನೆಯಿಂದಲೇ ಅವುಗಳನ್ನು ತಡೆಯಲು ಸಾಧ್ಯ !

ಐ.ಎ.ಎಸ್. ಅಧಿಕಾರಿ ರೋಹಿಣಿ ಮತ್ತು ಐ.ಪಿ.ಎಸ್. ಅಧಿಕಾರಿ ರೂಪ ಇವರ ವರ್ಗಾವಣೆ !

ರಾಜ್ಯದಲ್ಲಿನ ಭಾರತೀಯ ಪೊಲೀಸ್ ಸೇವೆಯಲ್ಲಿನ (ಐ.ಪಿ.ಎಸ್.) ಅಧಿಕಾರಿ ರೂಪ ಮೌದಗಿಲ ಇವರು, ಭಾರತೀಯ ಸರಕಾರಿ ಸೇವೆಯಲ್ಲಿನ (ಐ.ಎ.ಎಸ್.) ಅಧಿಕಾರಿ ರೋಹಿಣಿ ಸಿಂಧೂರಿ ಇವರು ಅನೇಕ ಪುರುಷ ಐ.ಎ.ಎಸ್. ಅಧಿಕಾರಿಗಳ ಜೊತೆ ಆಕೆಯ ಖಾಸಗಿ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.