ಪಂಡರಪುರ: ಮೊದಲ ಮಳೆಗಾಲದಲ್ಲೇ ಶ್ರೀವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಸೋರಿಕೆ !

ಪಂಡರಪುರ – ಶ್ರೀ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ೭೨ ಕೋಟಿ ರೂಪಾಯಿ ಖರ್ಚು ಮಾಡಿ ದೇವಾಲಯದ ಸಂರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ೧೫ ರಿಂದ ಈ ಕಾರ್ಯ ಆರಂಭವಾಗಿದ್ದು ಜೂನ್ ೨ ವರೆಗೆ ಭಕ್ತರಿಗಾಗಿ ಪಾದಸ್ಪರ್ಶ ದರ್ಶನ ಆರಂಭಿಸಲಾಗಿದೆ. ಆದರೆ ನಿನ್ನೆ ರಾತ್ರಿಯಿಡೀ ಬಿದ್ದಿ ಮಳೆಯಿಂದಾಗಿ ದೇವಸ್ಥಾನದ ಅನೇಕ ಸ್ಥಾನಗಳಲ್ಲಿ ಛಾವಣಿ ಸೋರಿದೆ. ದರ್ಶನಕ್ಕಾಗಿ ಬಂದ ಭಕ್ತರು ದೇವಸ್ಥಾನದ ಮುಖ್ಯ ಸಭಾ ಮಂಟಪ, ಸೋಳಕಾಂಬಿ, ಬಾಜಿರಾವ ಪಡಸಾಲೆ ಇಂತಹ ಅನೇಕ ಸ್ಥಳಗಳಲ್ಲಿ ಛಾವಣಿಯ ಮೇಲೆ, ಗೋಡೆಯ ಮೇಲೆ ಮತ್ತು ಕಂಬಗಳ ಮೇಲೆ ನೀರು ಸೋರಿರುವುದು ಕಂಡು ಬರುತ್ತಿದೆ. ಇದರಿಂದ ಪುರಾತತ್ವ ಇಲಾಖೆ ಹಾಗೂ ದೇವಸ್ಥಾನ ಆಡಳಿತದ ಕಡೆಯಿಂದ ನಡೆಯುತ್ತಿರುವ ಕಾರ್ಯ ಯೋಗ್ಯ ರೀತಿಯಲ್ಲಿ ನಡೆದಿದೆಯೇ ? ವಾಟರ್ ಪ್ರೂಫ್ ಕೋಟಿಂಗ್ ಯೋಗ್ಯ ರೀತಿಯಲ್ಲಿ ಮಾಡಲಾಗಿದೆಯೇ ? ಎಂದು ಭಕ್ತರಿಂದ ಪ್ರಶ್ನೆಗಳು ಕೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಇದರಿಂದ ದೇವಸ್ಥಾನದ ಸಂವರ್ಧನೆಗಾಗಿ ನಡೆದ ಕೆಲಸವೆಲ್ಲಾ ಕಳಪೆ ಮಟ್ಟದ್ದಾಗಿದೆ ಎಂದು ಭಕ್ತರಿಗೆ ಅನಿಸುತ್ತಿದೆ. ಇದಕ್ಕೆ ಜವಾಬ್ದಾರರಾದ ಪುರಾತತ್ವ ಇಲಾಖೆ ಮತ್ತು ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ !