Bihar Bridge Collapse: ಬಿಹಾರದಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆ ಉದ್ಘಾಟನೆಗೂ ಮುನ್ನವೇ ಧ್ವಂಸ !

ಬಿಹಾರದಲ್ಲಿ ಇದಕ್ಕೂ ಮೊದಲು ಸೇತುವೆಗಳು ಕುಸಿದಿವೆ !

ಅರರಿಯಾ (ಬಿಹಾರ) – ಇಲ್ಲಿನ ಬಕ್ರಾ ನದಿಗೆ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಸೇತುವೆ ಜೂನ್ 18 ರಂದು ಕುಸಿದಿದೆ. ಸೇತುವೆ ಶೀಘ್ರದಲ್ಲೇ ಉದ್ಘಾಟನೆ ಆಗುವುದಿತ್ತು; ಆದರೆ ಅದಕ್ಕೂ ಮುನ್ನವೇ ಕುಸಿದು ಬಿತ್ತು. ಈ ಸೇತುವೆಯ 3 ಪಿಲ್ಲರ್‌ಗಳು ನದಿಯಲ್ಲಿ ಮುಳುಗಿ ಸೇತುವೆ ಕುಸಿದಿದೆ. ಇದಾದ ಬಳಿಕ ಸೇತುವೆ ನಿರ್ಮಾಣ ಸಂಸ್ಥೆ ಹಾಗೂ ಆಡಳಿತ ಮಂಡಳಿ ಸ್ಥಳಕ್ಕೆ ಆಗಮಿಸಿದೆ. ಜಿಲ್ಲೆಯ ಗ್ರಾಮೀಣ ನಿರ್ಮಾಣ ಇಲಾಖೆ ಈ ಸೇತುವೆಯನ್ನು ನಿರ್ಮಿಸಿದೆ ಎಂದು ಶಾಸಕ ವಿಜಯ್ ಮಂಡಲ್ ಹೇಳಿದರು.

ಬಿಹಾರದಲ್ಲಿ ಸೇತುವೆ ಕುಸಿದ ಘಟನೆಗಳು

1. ಜೂನ್ 2023 ರಲ್ಲಿ, ಸುಲ್ತಂಗಂಜ್‌ನಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದಿತ್ತು. ಈ ಸೇತುವೆ ನಿರ್ಮಾಣಕ್ಕೆ 1 ಸಾವಿರದ 700 ಕೋಟಿ ಖರ್ಚು ಮಾಡಲಾಗಿದೆ. ಇಲ್ಲಿ ಹಿಂದಿನ ಸೇತುವೆ 2022 ರಲ್ಲಿ ಕುಸಿದಿದೆ.

2. ಮಾರ್ಚ್ 2024 ರಲ್ಲಿ, ಸುಪೌಲ್‌ನಲ್ಲಿ ಕೋಸಿ ನದಿಗೆ ಅಡ್ಡಲಾಗಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಚಪ್ಪಡಿ ಕುಸಿದಿತ್ತು. ಈ ವೇಳೆ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದನು.

ಸಂಪಾದಕೀಯ ನಿಲುವು

ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಸೇತುವೆಗಳು 100 ವರ್ಷಗಳಿಗೂ ಹೆಚ್ಚು ಕಾಲ ಉಳಿದುಕೊಂಡಿವೆ; ಆದರೆ ಸ್ವಾತಂತ್ರ್ಯಾನಂತರ ಭಾರತೀಯರು ಕಟ್ಟಿದ ಸೇತುವೆಗಳು ಕೆಲ ವರ್ಷಗಳು ಬಿಡಿ ಉದ್ಘಾಟನೆಗೂ ಮುನ್ನವೇ ಕುಸಿದು ಬೀಳುತ್ತಿರುವುದು ನಾಚಿಕೆಗೇಡಿನ ಸಂಗತಿ !