ಭಾರತದಲ್ಲಿ ನುಸುಳುವ ಕುರಿತು ಬಾಂಗ್ಲಾದೇಶದ ಯು-ಟ್ಯೂಬರ್ ನ ಆಘಾತಕಾರಿ ವೀಡಿಯೊ ವೈರಲ್

(ಯುಟ್ಯೂಬ್ ಚಾನೆಲ್‌ನಲ್ಲಿ ನಿರಂತರವಾಗಿ ವೀಡಿಯೊಗಳನ್ನು ಪ್ರಸಾರ ಮಾಡುವವರನ್ನು ಯೂಟ್ಯೂಬರ್ ಎಂದು ಹೇಳುತ್ತಾರೆ.)


ನವದೆಹಲಿ – ಹಲವು ವರ್ಷಗಳಿಂದ, ಭಾರತದಲ್ಲಿ ಅನಧಿಕೃತವಾಗಿ ವಾಸಿಸುವ ಬಾಂಗ್ಲಾದೇಶಿ ನುಸುಳುಕೋರರ ಕುರಿತ ಚರ್ಚೆಯ ವಿಷಯವಾಗಿದೆ. ಇದರಿಂದ ರಾಜಕೀಯ ಆರೋಪ- ಪ್ರತ್ಯಾರೋಪ ಮಾಡುತ್ತಿರುವುದು ಕಂಡು ಬಂದಿದೆ. ಈ ಬೆನ್ನೆಲೆಯಲ್ಲಿ ಇಂಟರ್‍‌ನೆಟ್‌ನಲ್ಲಿ ಸಧ್ಯ ಬಾಂಗ್ಲಾದೇಶಿ ಯೂ-ಟ್ಯೂಬರನ ಒಂದು ವಿಡಿಯೋ ಸಾಕಷ್ಟು ಸಂಚಲನ ಮೂಡಿಸಿದೆ. ಈ ಯೂ-ಟ್ಯೂಬರ ವಿಡಿಯೋದಲ್ಲಿ ಬಾಂಗ್ಲಾದೇಶದಿಂದ ಭಾರತದಲ್ಲಿ ಯಾವುದೇ ಪಾಸಪೋರ್ಟ ಅಥವಾ ಯಾವುದೇ ವೀಸಾ ಇಲ್ಲದೇ ಹೇಗೆ ಹೋಗುವುದು ಎಂಬುದರ ಕುರಿತು ಹೇಳಿದ್ದಾರೆ.

1. ವಿಶೇಷವೆಂದರೆ ಸಂಪೂರ್ಣ ವಿಡಿಯೋದಲ್ಲಿ ಈ ಯೂ-ಟ್ಯೂಬರ ಈ ರಸ್ತೆಯಲ್ಲಿನ ಭಾರತದ ವಿವಿಧ ಸ್ಥಳಗಳನ್ನು ವಿವರಿಸುತ್ತಿರುವುದು ಕಾಣಿಸುತ್ತಿದೆ.

2. ಈ ಮಾರ್ಗ ಬಾಂಗ್ಲಾದೇಶದ ಸುನಾಮಗಂಜ ಜಿಲ್ಲೆಯ ಒಂದು ಗ್ರಾಮದಿಂದ ಹೋಗುತ್ತಿರುವ ಬಗ್ಗೆ ಈ ಯೂ-ಟ್ಯೂಬರ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ದೇಶದ ಗಡಿಯಲ್ಲಿ ಅನಧಿಕೃತವಾಗಿ ದಾಟಿ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣದಲ್ಲಿ ಈ ಯೂ-ಟ್ಯೂಬರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಲಾಗುತ್ತಿದೆ.

3. ಈ ಕಾರಣದಿಂದ ಮತ್ತೊಮ್ಮೆ ಭಾರತದಲ್ಲಿ ಅನಧಿಕೃತವಾಗಿ ವಾಸಿಸುವ ಬಾಂಗ್ಲಾದೇಶಿ ಸೂತ್ರಗಳು ಮುನ್ನೆಲೆಗೆ ಬರುವ ಸಾಧ್ಯತೆಯಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಕಳೆದ ಅನೇಕ ದಶಕಗಳಿಂದ ಬಾಂಗ್ಲಾದೇಶೀಗಳು ಭಾರತದೊಳಗೆ ನುಸುಳುತ್ತಿದ್ದಾರೆ. ಅದನ್ನು ತಡೆಯಲು ಸರಕಾರ, ಆಡಳಿತ ಮತ್ತು ಪೊಲೀಸರು ಏನನ್ನೂ ಮಾಡುತ್ತಿಲ್ಲ ಹಾಗಾಗಿ ನುಸುಳುವಿಕೆ ಹೆಚ್ಚಾಗುತ್ತಿದೆ. ಇದರಿಂದ ಇನ್ನು ಮುಂದೆ ಬಾಂಗ್ಲಾದೇಶಿಯರು ಈ ರೀತಿ ವಿವಿಧ ವಿಡಿಯೋಳನ್ನು ಪ್ರಸಾರ ಮಾಡಿ ಭಾರತದಲ್ಲಿ ಹೇಗೆ ನುಸುಳುವುದು?’ ಎನ್ನುವ ತರಬೇತಿಯನ್ನು ಬಾಂಗ್ಲಾದೇಶೀಯರಿಗೆ ನೀಡಿದರೆ ಆಶ್ಚರ್ಯವೇನಿಲ್ಲ !