ಚೆನ್ನೈನಲ್ಲಿ ಬಿಜೆಪಿ ಮಹಿಳಾ ನಾಯಕಿಯ ಪತಿಯ ಮೇಲೆ ಮಾರಣಾಂತಿಕ ಹಲ್ಲೆ

ಚೆನ್ನೈ (ತಮಿಳುನಾಡು) – ಬಿಜೆಪಿ ಮಹಿಳಾ ಮುಖಂಡೆ ನಾದಿಯಾ ಅವರ ಪತಿ ಶ್ರೀನಿವಾಸನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಶ್ರೀನಿವಾಸನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಯಕ್ತಿಕ ದ್ವೇಷವೇ ಈ ದಾಳಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಹಲವು ವರ್ಷಗಳ ಹಿಂದೆ ನಡೆದ ಒಂದು ಕೊಲೆಯಲ್ಲಿ ಭಾಗಿಯಾದ ಕಾರಣ ಶ್ರೀನಿವಾಸನ್ ಮೇಲೆ ಈ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.

ದಾಳಿಕೋರರು ಶ್ರೀನಿವಾಸನ್ ಅವರನ್ನು ಬೆನ್ನತ್ತಿ, ಅವರ ಮೇಲೆ ಹರಿತವಾದ ಆಯುಧಗಳಿಂದ ಹಲವು ಬಾರಿ ಹಲ್ಲೆ ನಡೆಸಿದ್ದಾರೆ. ಶ್ರೀನಿವಾಸನ್ ಸತ್ತಿದ್ದಾರೆ’ ಎಂದು ತಿಳಿದುಕೊಂಡು ಅವರು ಅಲ್ಲಿಂದ ಓಡಿ ಹೋದರು. ಈ ಘಟನೆ ಅಣ್ಣಾನಗರದಲ್ಲಿ ನಡೆದಿದ್ದು, ಘಟನೆಯ ಸ್ಥಳದಲ್ಲಿ ಉಪಸ್ಥಿತರಿದ್ದ ಕೆಲವು ಜನರು ಇದರ ಚಿತ್ರೀಕರಣ ಮಾಡಿ ಅದರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರು. ಈ ವೀಡಿಯೊದ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಅವರನ್ನು ಬಂಧಿಸಲಾಯಿತು. ರಾಜೇಶ, ಪ್ರಶಾಂತ, ಪ್ರಕಾಶ, ಶ್ರೀನಿವಾಸನ್, ಸರವಣನ್ ಮತ್ತು ರಾಜೇಶ ಆರೋಪಿಗಳ ಹೆಸರುಗಳಾಗಿವೆ.

ಸಂಪಾದಕೀಯ ನಿಲುವು

ಡಿಎಂಕೆ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಮೂರಾಬಟ್ಟೆ !