ತಮಿಳುನಾಡಿನಲ್ಲಿ ನಕಲಿ ಮದ್ಯ ಸೇವಿಸಿ 36 ಮಂದಿ ಸಾವು, 70 ಮಂದಿ ಆಸ್ಪತ್ರೆಗೆ ದಾಖಲು

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಕಲ್ಲಾಕುರಿಚಿ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ 36 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 70ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಂದೆಡೆ, ಪುದುಚೇರಿಯಲ್ಲಿ ವಿಷಪೂರಿತ ಮದ್ಯ ಸೇವಿಸಿ 15 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು 49 ವರ್ಷದ ಗೋವಿಂದರಾಜ ಅಲಿಯಾಸ್ ಕನ್ನುಕುಟ್ಟಿ ಎಂಬಾತನನ್ನು ಬಂಧಿಸಿದ್ದಾರೆ. ಅವನಿಂದ ಸುಮಾರು 200 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಮದ್ಯದ ಮಾದರಿಗಳನ್ನು ತಕ್ಷಣವೇ ಪರೀಕ್ಷೆಗಾಗಿ ವಿಲ್ಲುಪುರಂಗೆ ಕಳುಹಿಸಲಾಗಿದ್ದು ಅದರಲ್ಲಿ ವಿಷಕಾರಿ ಮೀಥೇನ್‌ನ ಪ್ರಮಾಣ ಹೆಚ್ಚಿರುವುದು ಬೆಳಕಿಗೆ ಬಂದಿದೆ.

ಅಪರಾಧಿಗಳಿಗೆ ಕರುಣೆ ತೋರಿಸುವುದಿಲ್ಲ! – ಮುಖ್ಯಮಂತ್ರಿ ಸ್ಟಾಲಿನ್

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ” ಮೈಗಳ್ಳ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ. ಅವರು ಎಕ್ಸ್ ನಲ್ಲಿ ಮಾಡಿರುವ ಪೋಸ್ಟನಲ್ಲಿ, ಒಂದು ವೇಳೆ ಜನರು ಇಂತಹ ಅಕ್ರಮ ಮದ್ಯ ತಯಾರಿಕೆಯ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಬರೆದಿದ್ದಾರೆ. (ಸಾರ್ವಜನಿಕರು ದೂರು ನೀಡುವ ಮೊದಲು ಪೊಲೀಸರಿಗೆ ಇದರ ಮಾಹಿತಿ ಏಕೆ ಸಿಗುವುದಿಲ್ಲ ಎಂಬುದಕ್ಕೆ ಸ್ಟಾಲಿನ್ ಅವರು ಉತ್ತರಿಸಬೇಕು! – ಸಂಪಾದಕರು) ಇಂತಹ ಅಪರಾಧಿಗಳಿಗೆ ಯಾವುದೇ ಕರುಣೆ ತೋರಿಸುವುದಿಲ್ಲ ಎಂದವರು ಹೇಳಿದರು. (ಮುಖ್ಯಮಂತ್ರಿಯಾಗಿರುವ ಕಾರಣ ಸ್ಟಾಲಿನ್ ಅವರೂ ಕೂಡ ಇಂತಹ ಘಟನೆಗಳಿಗೆ ಜವಾಬ್ದಾರರಾಗಿದ್ದಾರೆ. ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವರೇ?- ಸಂಪಾದಕರು.

ಸಂಪಾದಕೀಯ ನಿಲುವು

ವಿಷಪೂರಿತ ಮದ್ಯ ಸೇವಿಸಿ ಜನರು ಸಾವನ್ನಪ್ಪುವ ಘಟನೆ ಅನೇಕ ಬಾರಿ ನಡೆದಿದೆ; ಆದರೆ ಅದನ್ನು ಶಾಶ್ವತವಾಗಿ ತಡೆಯಲು ಕೇಂದ್ರಮಟ್ಟದಲ್ಲಿ ಅಥವಾ ರಾಜ್ಯಮಟ್ಟದಲ್ಲಿ ಯಾವುದೇ ಕ್ರಮಗಳನ್ನು ಕೈಕೊಂಡಿಲ್ಲ. ಹಾಗಾಗಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಇದು ಎಲ್ಲ ಪಕ್ಷಗಳ ಸರಕಾರಗಳಿಗೂ ನಾಚಿಕೆಗೇಡಿನ ವಿಷಯ!

ಸನಾತನ ಧರ್ಮವನ್ನು ನಷ್ಟಗೊಳಿಸುವ ಬಗ್ಗೆ ಭಾಷಣ ಬಿಗಿಯುವ ದ್ರವಿಡಡಿಎಂಕೆ ಪಕ್ಷವು ಮೊದಲು ಇಂತಹ ಅಪರಾಧಗಳನ್ನು ನಷ್ಟಪಡಿಸಿ ತೋರಿಸಲಿ !