Gandaki Bridge Collapse : ಬಿಹಾರದ ಸಿವಾನದ ಗಂಡಕಿ ನದಿಯ ಸೇತುವೆಯ ಕೆಲವು ಭಾಗ ಕುಸಿದಿದೆ!

ಬಿಹಾರ: 15 ದಿನಗಳಲ್ಲಿ 7 ಸೇತುವೆಗಳ ಕುಸಿತ!

ಸಿವಾನ (ಬಿಹಾರ) – ಗಂಡಕಿ ನದಿಯ ಸೇತುವೆಯ ಕೆಲವು ಭಾಗ ಕುಸಿದ ಘಟನೆ ಜುಲೈ 3 ರಂದು ಬೆಳಿಗ್ಗೆ ಸಂಭವಿಸಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಂಡಕಿ ನದಿಯ ಮೇಲಿನ ಈ ಒಂದು ಸಣ್ಣ ಸೇತುವೆವು ಅನೇಕ ಹಳ್ಳಿಗಳನ್ನು ಮಹಾರಾಜಗಂಜನೊಂದಿಗೆ ಸೇರಿಸುತ್ತದೆ. ಕಳೆದ 15 ದಿನಗಳಲ್ಲಿ ಬಿಹಾರದಲ್ಲಿ ಸೇತುವೆ ಕುಸಿದ ಇದು 7 ನೇ ಘಟನೆಯಾಗಿದೆ, ಮತ್ತು ಕಳೆದ 11 ದಿನಗಳಲ್ಲಿ ಸಿವಾನ್ ಜಿಲ್ಲೆಯಲ್ಲಿ ನಡೆದ ಎರಡನೇ ಘಟನೆಯಾಗಿದೆ.

1. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ; 1982-83ರಲ್ಲಿ ಈ ಸೇತುವೆಯ ನಿರ್ಮಾಣವಾಗಿತ್ತು. ಕಳೆದ ಕೆಲವು ದಿನಗಳಿಂದ ಇದರ ದುರಸ್ತಿ ಕಾರ್ಯ ನಡೆಯುತ್ತಿತ್ತು. ಆದರೆ ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಸೇತುವೆಯ ನಿರ್ಮಾಣ ದುರ್ಬಲಗೊಂಡಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.

2. ಇದಕ್ಕೂ ಮುನ್ನ, ಜೂನ್ 22 ರಂದು ದಾರುಂಡಾ ಪ್ರದೇಶದ ನದಿಯ ಮೇಲಿನ ಸೇತುವೆಯ ಕೆಲವು ಭಾಗವು ಕುಸಿದಿತ್ತು. ಕಳೆದ ಎರಡು ವಾರಗಳಲ್ಲಿ ಬಿಹಾರದ ಮಧುಬಾಮಿ, ಅರಾರಿಯಾ, ಪೂರ್ವ ಚಂಪಾರಣ ಮತ್ತು ಕಿಶನಗಂಜ ಈ ಜಿಲ್ಲೆಗಳಲ್ಲಿಯೂ ಸೇತುವೆ ಕುಸಿದ ಘಟನೆಗಳು ಸಂಭವಿಸಿವೆ.

ಸಂಪಾದಕೀಯ ನಿಲುವು

ಜಂಗಲರಾಜ’ ಎಂದು ಕುಖ್ಯಾತಿ ಪಡೆದಿರುವ ಬಿಹಾರ ಈಗ `ಕುಸಿದ ಸೇತುವೆಗಳ ರಾಜ್ಯ’ ಎಂದೂ ಕುಖ್ಯಾತವಾಗುತ್ತಿದೆ. ಇದರ ಬಗ್ಗೆ ಸರಕಾರಕ್ಕಾಗಲಿ, ಆಡಳಿತ ವರ್ಗಕ್ಕಾಗಲೀ ನಾಚಿಕೆಯಿಲ್ಲ.