ಐ.ಎ.ಎಸ್. ಅಧಿಕಾರಿ ರೋಹಿಣಿ ಮತ್ತು ಐ.ಪಿ.ಎಸ್. ಅಧಿಕಾರಿ ರೂಪ ಇವರ ವರ್ಗಾವಣೆ !

ರಾಜ್ಯದಲ್ಲಿನ ಭಾರತೀಯ ಪೊಲೀಸ್ ಸೇವೆಯಲ್ಲಿನ (ಐ.ಪಿ.ಎಸ್.) ಅಧಿಕಾರಿ ರೂಪ ಮೌದಗಿಲ ಇವರು, ಭಾರತೀಯ ಸರಕಾರಿ ಸೇವೆಯಲ್ಲಿನ (ಐ.ಎ.ಎಸ್.) ಅಧಿಕಾರಿ ರೋಹಿಣಿ ಸಿಂಧೂರಿ ಇವರು ಅನೇಕ ಪುರುಷ ಐ.ಎ.ಎಸ್. ಅಧಿಕಾರಿಗಳ ಜೊತೆ ಆಕೆಯ ಖಾಸಗಿ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ತಮಿಳುನಾಡಿನ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದಲ್ಲಿನ ಕೆಲವು ವಿಷಯಗಳ ಸೋರಿಕೆ ಆಗಿದ್ದರಿಂದ ಕೋಲಾಹಲ

ಜನವರಿ ೯ ರಂದು ತಮಿಳುನಾಡು ವಿಧಾನಸಭೆಯ ಅಧಿವೇಶನದ ಮೊದಲು ದಿನ ರಾಜ್ಯಪಾಲ ರವಿ ಇವರು ಅವರ ಭಾಷಣದಲ್ಲಿನ ಕೆಲವು ವಿಷಯಗಳ ಸೋರಿಕೆ ಮಾಡಿದ್ದರಿಂದ ಮತ್ತು ಕೆಲವು ಹೊಸ ಸೂತ್ರಗಳನ್ನು ಮಂಡಿಸಿರುವುದರಿಂದ ದೊಡ್ಡ ಕೋಲಾಹಲವೆದ್ದಿತು.

ಬಂಗಾಲದ ಒಂದು ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಾರಿನಲ್ಲಿ ಹಾವು ಪತ್ತೆ !

ಬಂಗಾಲದ ಬೀರಭೂಮ ಜಿಲ್ಲೆಯ ಮಯೂರೇಶ್ವರ ಪ್ರದೇಶದ ಒಂದು ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ನೀಡಿದ ಬಳಿಕ ಸುಮಾರು 30 ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಸಲಾಯಿತು.

ದೆಹಲಿ ಮಹಾಪೌರ ಸ್ಥಾನದ ಚುನಾವಣೆ ಮೊದಲೇ ರಂಪಾರಾದ್ಧಾಂತ !

ದೆಹಲಿ ಮಹಾನಗರ ಪಾಲಿಕೆಯ ಮಹಾಪೌರ, ಉಪ ಮಹಾಪೌರ ಮತ್ತು ಸ್ಥಾಯಿ ಸಮಿತಿಯ ೬ ಸದಸ್ಯರ ಚುನಾವಣೆಯ ಮೊದಲೇ ಪಾಲಿಕೆಯ ಸಭಾಗೃಹದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಭಾಜಪದ ನಗರಸೇವಕರು ರಂಪಾರಾದ್ಧಾಂತ ಮಾಡಿದ್ದಾರೆ.

ಸರಕಾರಿ ನೌಕರಿ ಪಡೆಯುವುದಕ್ಕಾಗಿ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ !

ಸರಕಾರಿ ನೌಕರಿ ಪಡೆಯಲು ಯುವಕರು ಲಂಚ ನೀಡಬೇಕಾಗುತ್ತದೆ ಹಾಗೂ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ, ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ. ಪ್ರಿಯಾಂಕ ಖರ್ಗೆ ಇವರು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಇವರ ಮಗ ಆಗಿದ್ದಾರೆ.

ಮದ್ಯಪಾನ ನಿಷೇಧಿತ ಗುಜರಾತಿನಲ್ಲಿ ವಿಷಯುಕ್ತ ಸರಾಯಿ ಸೇವಿಸಿದ 28 ಜನರ ಅಪಮೃತ್ಯು

ಜಿಲ್ಲೆಯ ರೋಜಿದ ಗ್ರಾಮದಲ್ಲಿ ವಿಷಯುಕ್ತ ಸರಾಯಿ ಸೇವಿಸಿದ್ದರಿಂದ ಇಲ್ಲಿಯವರೆಗೆ 28 ಜನರು ಸಾವನ್ನಪ್ಪಿದ್ದಾರೆ, ಮತ್ತು 30 ಜನರು ಈಗಲೂ ಅಸ್ವಸ್ಥರಾಗಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಔಷಧೋಪಚಾರ ನೀಡಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು 10 ಜನರನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿದ 19 ಸಂಸದರು 1 ವಾರದ ಮಟ್ಟಿಗೆ ಅಮಾನತ್ತು.

ಕೇವಲ ಅಮಾನತ್ತು ಬೇಡ, ಅವರಿಂದ ಅಧಿವೇಶನದ ಸಮಯವನ್ನು ವ್ಯರ್ಥಗೊಳಿಸಿದ ಬಗ್ಗೆ ದಂಡವನ್ನು ವಸೂಲು ಮಾಡಬೇಕು. ಇದರೊಂದಿಗೆ ಅವರಿಗೆ ಕೊಡಲಾಗುವ ವೇತನ ಮತ್ತು ಭತ್ಯೆಯನ್ನು ಹಿಂಪಡೆದುಕೊಳ್ಳಬೇಕು.

ಜಾಮತಾಡಾ (ಝಾರಖಂಡ) ಜಿಲ್ಲೆಯಲ್ಲಿನ ೧೦೦ಕ್ಕೂ ಹೆಚ್ಚಿನ ಉರ್ದೂ ಶಾಲೆಗಳಲ್ಲಿ ಕಾನೂನುಬಾಹಿರವಾಗಿ ರವಿವಾರದ ಹೊರತು ಶುಕ್ರವಾರದಂದು ರಜೆ ನೀಡಲಾಗುತ್ತಿದೆ !

ಜಿಲ್ಲೆಯಲ್ಲಿನ ೧೦೦ಕ್ಕೂ ಹೆಚ್ಚಿನ ಶಾಲೆಗಳಲ್ಲಿ ರವಿವಾರದ ಬದಲು ಶುಕ್ರವಾರದಂದು ರಜೆ ನೀಡಲಾಗುತ್ತಿರುವ ವಾರ್ತೆಯನ್ನು ದಿನಪತ್ರಿಕೆಯಾದ ‘ಜಾಗರಣ’ವು ಪ್ರಕಟಿಸಿದೆ. ಶಿಕ್ಷಣ ವಿಭಾಗವು ಹೇಳುವಂತೆ, ಈ ಎಲ್ಲ ಶಾಲೆಗಳು ಉರ್ದೂ ಆಗಿರುವುದರಿಂದ ಶಿಕ್ಷಕರ ಸೌಲಭ್ಯಕ್ಕಾಗಿ ಇಂತಹ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಹರ್ಷನ ಹತ್ಯೆಯ ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ !

ಹಿಜಾಬ್ ನಿಷೇಧ ಪ್ರಕರಣದಲ್ಲಿ ಹತ್ಯೆಗೀಡಾದ ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯ ಆರೋಪಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಿಂದಿ ಭಾಷೆಗಿಂತ ಇಂಗ್ಲಿಷ್ ಗೆ ಹೆಚ್ಚು ಬೆಲೆಯಿದೆ ! – ತಮಿಳುನಾಡಿನ ಶಿಕ್ಷಣ ಸಚಿವರು

ಹಿಂದಿ ಭಾಷೆಗಿಂತ ಇಂಗ್ಲಿಷ್ ಭಾಷೆಗೆ ಹೆಚ್ಚು ಬೆಲೆಯಿದೆ, ಆದ್ದರಿಂದ ಹಿಂದಿ ಇದು ಐಚ್ಛಿಕವಾಗಬೇಕು. ಆದರೆ ಅನಿವಾರ್ಯ ಆಗಬಾರದು. ಯಾರು ಹಿಂದಿ ಮಾತನಾಡುತ್ತಾರೆ, ಅವರು ಕ್ಷುಲ್ಲಕ ಕೆಲಸದಲ್ಲಿದ್ದಾರೆ (ನೌಕರಿ). ಹಿಂದಿ ಮಾತನಾಡುವ ಜನರು ನಮ್ಮ ಕಡೆ ಪಾನಿಪುರಿ ಮಾರುತ್ತಾರೆ, ಎಂಬ ಸಂತಾಪಜನಕ ಹೇಳಿಕೆ ತಮಿಳುನಾಡಿನ ಶಿಕ್ಷಣ ಸಚಿವರು ಪೋನಮುಡಿ ನೀಡಿದರು.