ಮಂಗಳೂರು – ಮಂಗಳೂರಿನ ಜೈಲಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ 150 ಪೊಲೀಸರೊಂದಿಗೆ ನಡೆಸಿದ ದಾಳಿಯಲ್ಲಿ ಕೈದಿಗಳ ಬಳಿ 25 ಮೊಬೈಲ್, 1 ಬ್ಲೂಟೂತ್, 5 ಇಯರ್‌ಫೋನ್‌ಗಳು, 1 ಪೆನ್ ಡ್ರೈವ್, 5 ಚಾರ್ಜರ್‌ಗಳು, 1 ಕತ್ತರಿ ಮತ್ತು ಗಾಂಜಾ ಪತ್ತೆಯಾಗಿದೆ. ಈ ವಸ್ತುಗಳು ಕಾರಾಗೃಹದಲ್ಲಿರುವ ಕೈದಿಗಳಿಗೆ ಹೇಗೆ ತಲುಪಿದವು ?, ಇದರ ತನಿಖೆ ನಡೆಸಲಾಗುತ್ತಿದೆ.
ಸಂಪಾದಕೀಯ ನಿಲುವುಕಾರಾಗೃಹಗಳಲ್ಲಿ ಕೈದಿಗಳ ಬಳಿ ಮೊಬೈಲ್, ಮಾದಕ ಪದಾರ್ಥ, ಶಸ್ತ್ರಾಸ್ತ್ರಗಳು ಇತ್ಯಾದಿಗಳು ತಲುಪುತ್ತವೆ, ಇದು ಈಗ ಹೊಸ ವಿಷಯವಲ್ಲ; ಆದರೆ, ಯಾರೂ ಇದಕ್ಕೆ ಶಾಶ್ವತ ಪರಿಹಾರ ಕೈಗೊಂಡಂತೆ ಕಾಣುತ್ತಿಲ್ಲ, ಹಾಗೆಯೇ ಇದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಿರುವುದು ಎಂದಿಗೂ ಬೆಳಕಿಗೆ ಬಂದಿಲ್ಲ. ಹಾಗಾಗಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುತ್ತವೆ ! |