ವರದಿಗಾರ ಪ್ರೀತಂ ನಾಚಣಕರ ಮುಂಬಯಿ,
ಮುಂಬಯಿ, ಆಗಸ್ಟ್ ೧(ವಾರ್ತೆ) – ರಾಯಗಡ ಜಿಲ್ಲೆಯಲ್ಲಿನ ಇರಶಾಳವಾಡಿಯಲ್ಲಿ ೨೦೨೩ ರಲ್ಲಿ ಭೂಕುಸಿತ ನಡೆದು ೮೪ ಜನರು ಸಾವನ್ನಪ್ಪಿದ್ದರು. ಈ ಅಪಘಾತದ ನಂತರ ಕೂಡ ರಾಜ್ಯದ ವಿಪತ್ತು ನಿರ್ವಹಣೆ ಇಲಾಖೆಗೆ ಎಚ್ಚರವಾಗಿಲ್ಲ, ಹೀಗೆ ಅನಿಸುತ್ತದೆ.
ಹೌದು ರಾಜ್ಯದಲ್ಲಿ ಭೂಕುಸಿತದ ಅಪಾಯ ಸಂಭವಿಸುವ ೪೦೦ ಸ್ಥಳಗಳಿವೆ; ಆದರೆ ಜನರನ್ನು ಸ್ಥಳಾಂತರಿಸಲಾಗಿದೆಯೇ? ಇದರ ಬಗ್ಗೆ ಅರ್ಧ ಮಳೆಗಾಲ ಮುಗಿದರೂ, ವಿಪತ್ತು ನಿರ್ವಹಣೆ ಇಲಾಖೆಯಿಂದ ವರದಿ ಪಡೆಯಲಾಗಿಲ್ಲ, ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆದ್ದರಿಂದ ರಾಜ್ಯದಲ್ಲಿ ಮತ್ತೊಮ್ಮೆ ಇರಶಾಳವಾಡಿ ಅಂತಹ ಘಟನೆ ನಡೆದು ಯಾರಾದರೂ ದುರಾದೃಷ್ಟಕರದಿಂದ ಸಾವನ್ನಪ್ಪಿದರೆ ಅದಕ್ಕೆ ವಿಪತ್ತು ನಿರ್ವಹಣೆ ಇಲಾಖೆಯ ನಿರ್ಲಕ್ಷತನವೇ ಕಾರಣ ಎಂದು ಹೇಳಲಾಗುತ್ತಿದೆ.
೧. ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಮೇ ೨೦ ರಂದು ರಾಜ್ಯದಲ್ಲಿನ ಎಲ್ಲಾ ಸರಕಾರಿ ಅಧಿಕಾರಿಗಳ ಜೊತೆಗೆ ಮಾನ್ಸೂನ್ ಗೂ ಮುನ್ನ ವರದಿಯ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಭೂಕುಸಿತದ ಕ್ಷೇತ್ರಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಆದೇಶ ನೀಡಿದ್ದರು.
No review taken of the relocation of citizens from 400 landslide-prone areas.
Disorderly and anti-people administration of Maharashtra’s Disaster Management Department.
Despite the Central Government warning about landslides in Kerala, the CPI(M) government in Kerala remained… pic.twitter.com/Xwo9TvAfjJ
— Sanatan Prabhat (@SanatanPrabhat) August 1, 2024
೨. ಈ ಆದೇಶದ ಪ್ರಕಾರ ಎಷ್ಟು ಜಿಲ್ಲೆಗಳು ಕಾರ್ಯಾಚರಣೆ ನಡೆಸಿರಬಹುದು ಅಥವಾ ಕೆಲವು ಸ್ಥಳಗಳಲ್ಲಿ ಸರಕಾರ ಸೂಚನೆ ನೀಡಿದ್ದರೂ ಕೂಡ ಸ್ಥಳಾಂತರವಾಗಲು ನಾಗರಿಕರು ಕೂಡ ನಿರಾಕರಿಸಿರಬಹುದು; ಆದರೆ ಮಳೆಗಾಲದ ಅರ್ಧ ಸಮಯ ಕಳೆದಿದ್ದರೂ, ರಾಜ್ಯದ ವಿಪತ್ತು ನಿರ್ವಹಣೆ ಇಲಾಖೆಯು ಇದರ ಬಗ್ಗೆ ವರದಿ ಪಡೆದಿಲ್ಲ.
೩. ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿ ರಾಜ್ಯದ ವಿಪತ್ತು ನಿರ್ವಹಣೆ ಇಲಾಖೆಯ ಅಧಿಕಾರಿಯನ್ನು ಭೇಟಿ ಮಾಡಿದಾಗ, ‘ಕಾರ್ಯಾಚರಣೆಯ ಬಗ್ಗೆ ಜಿಲ್ಲಾ ಆಡಳಿತದಿಂದ ಮಾಹಿತಿ ತರಿಸ ಬೇಕಾಗುವುದು’, ಎಂದು ಹೇಳಿದರು.
೪. ಎರಡು ದಿನಗಳ ಹಿಂದೆ ಕೇರಳದ ವಾಯನಾಡನಲ್ಲಾದ ಭೂಕುಸಿತದಲ್ಲಿ ಮೃತರ ಸಂಖ್ಯೆ ೨೫೦ ಕ್ಕೆ ತಲುಪಿದೆ. ‘ಇದನ್ನು ಅರ್ಥಮಾಡಿಕೊಂಡಾದರೂ ರಾಜ್ಯದ ವಿಪತ್ತು ನಿರ್ವಹಣೆ ಇಲಾಖೆಯು ಭೂಕುಸಿತದ ಅಪಾಯ ಸಂಭವಿಸುವ ಸ್ಥಳಗಳಿಂದ ಜನರನ್ನು ಸ್ಥಳಾಂತರ ಗೊಳಿಸಿದ್ದಾರೆಯೇ ? ಇದರ ಬಗ್ಗೆ ವರದಿ ಪಡೆದು ಎಲ್ಲಿ ಜನರ ಸ್ಥಳಾಂತರ ಆಗಿಲ್ಲ, ಅಲ್ಲಿ ನಿಗಾ ವಹಿಸುವುದು’, ಆವಶ್ಯಕವಾಗಿದೆ ಎಂದು ಜನರ ಅಭಿಪ್ರಾಯವಾಗಿದೆ.
ಸಂಪಾದಕೀಯ ನಿಲುವುಮಹಾರಾಷ್ಟ್ರದ ವಿಪತ್ತು ನಿರ್ವಹಣೆ ಇಲಾಖೆಯ ಅವ್ಯವಸ್ಥೆ ಮತ್ತು ಜನದ್ರೋಹಿ ಕಾರ್ಯವೈಖರಿ |