ಆರ್.ಜಿ. ಕರ್ ಕಾಲೇಜಿನ ವೈದ್ಯರು, ತರಬೇತಿ ವೈದ್ಯರು ಮತ್ತು ಸಿಬ್ಬಂದಿಗಳು ಹೀಗೆ 10 ಜನರ ಅಮಾನತ್ತು !
ಕೋಲಕಾತಾ (ಬಂಗಾಳ) – ರಾಧಾ ಗೋವಿಂದ್ ಕರ್ (ಆರ್.ಜಿ. ಕರ್) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಕಳೆದ ಎರಡು ತಿಂಗಳಿಂದ ಓರ್ವ 31 ವರ್ಷದ ಮಹಿಳಾ ತರಬೇತಿ ವೈದ್ಯೆಯ ಮೇಲಿನ ಅಮಾನುಷ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಮಾಡಿರುವ ಬಗ್ಗೆ ಚರ್ಚೆಯಲ್ಲಿದೆ. ಈಗ ಈ ಆಸ್ಪತ್ರೆ ಮತ್ತೆ ಚರ್ಚೆಗೆ ಬಂದಿದೆ; ಕಾರಣ ಅಲ್ಲಿನ ವೈದ್ಯರು, ಇಂಟರ್ನಿಗಳು(ತರಬೇತಿ) ಮತ್ತು ಹೌಸ ಸ್ಟಾಫ್ (ಸಿಬ್ಬಂದಿ) ಸೇರಿದಂತೆ 10 ಜನರನ್ನು ಅಮಾನತ್ತುಗೊಳಿಸಲಾಗಿದೆ. ಅವರ ಮೇಲೆ ಲೈಂಗಿಕ ದುರ್ನಡತೆ, ಹಿಂಸಾಚಾರ, ‘ಬೆದರಿಕೆಯ ಸಂಸ್ಕೃತಿ’ಯನ್ನು ಪ್ರೋತ್ಸಾಹಿಸುವುದು ಮತ್ತು ಬಲವಂತವಾಗಿ ಹಣ ಸುಲಿಗೆ ಮಾಡಿರುವ ಆರೋಪಗಳಿವೆ.
1. ವರದಿಗಳ ಪ್ರಕಾರ, ಅಮಾನತ್ತುಗೊಂಡಿರುವವರು ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಇವರ ಆಪ್ತರಾಗಿದ್ದಾರೆ.
2. ಅಮಾನತ್ತುಗೊಂಡಿರುವ ವ್ಯಕ್ತಿಗಳು ಇತರರನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವ ಅಥವಾ ಅವರನ್ನು ವಸತಿಗೃಹದಿಂದ ಹೊರಹಾಕುವ ಬೆದರಿಕೆ ಹಾಕುತ್ತಿದ್ದರು. ಇದರೊಂದಿಗೆ ಅವರು ಕೆಲವು ಕಿರಿಯ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ರಾಜಕೀಯ ಪಕ್ಷದಲ್ಲಿ ಸಹಭಾಗಿಯಾಗುವಂತೆ ಒತ್ತಡ ಹೇರುತ್ತಿದ್ದರು. ಇಷ್ಟೇ ಅಲ್ಲದೇ ದೂರುಗಳು ಬಂದರೆ ದಾಖಲಿಸಿಕೊಂಡು ವಿದ್ಯಾರ್ಥಿಗಳ ಮೇಲೆ ಸುಳ್ಳು ಆರೋಪಗಳು ದಾಖಲಾಗುತ್ತಿತ್ತು. ಇದರಲ್ಲಿ ದೈಹಿಕ ಹಿಂಸೆಯೂ ಒಳಗೊಂಡಿರುತ್ತಿತ್ತು.
3. ಅಮಾನತ್ತುಗೊಂಡಿರುವವರು ಕಿರಿಯರಿಗೆ ರಾತ್ರಿ ತಡವಾಗಿ ಮಾದಕ ವಸ್ತುಗಳು ಮತ್ತು ಮಧ್ಯವನ್ನು ಖರೀದಿಸುವಂತೆ ಒತ್ತಡ ಹೇರುವುದು ಮತ್ತು ಮಕ್ಕಳ `ಕಾಮನ ರೂಮ’ ನಲ್ಲಿ ಅಶ್ಲೀಲ ಕೃತ್ಯಗಳನ್ನು ಮಾಡಲು ಒತ್ತಡ ಹೇರುತ್ತಿದ್ದ ಆರೋಪವಿದೆ.
4. ಇದರಲ್ಲಿ ಯಾವ ವ್ಯಕ್ತಿಯ ಮೇಲೆ ಮಹಿಳೆಯ ವಿರುದ್ಧ ಲೈಂಗಿಕ ದೌರ್ಜನದ ಪುರಾವೆಗಳು ಇರುವುದು ಕಂಡು ಬಂದಿದೆಯೋ, ಅವನನ್ನು ಮುಂದಿನ ವಿಚಾರಣೆ ಮತ್ತು ಕ್ರಮಕ್ಕಾಗಿ ಆಂತರಿಕ ದೂರು ಸಮಿತಿಯ ಬಳಿಗೆ ಕಳುಹಿಸಲಾಗಿದೆ.
6. ಅಮಾನತ್ತುಗೊಂಡಿರುವ ಆಶಿಷ ಪಾಂಡೆಯು ಡಾ. ಸಂದೀಪ ಘೋಷರ ಹತ್ತಿರದ ಹೌಸ ಸ್ಟಾಫ್ ಸದಸ್ಯನಾಗಿದ್ದಾನೆ. ಇವನಿಗೆ ಕೇಂದ್ರೀಯ ತನಿಖಾ ದಳ ಆರ್ಥಿಕ ಅವ್ಯವಹಾರ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು.
ಸಂಪಾದಕೀಯ ನಿಲುವುಅನಾಚಾರದ ಅಡ್ಡೆಯಾಗಿದ್ದ ಆರ್.ಜಿ. ಕರ್ ಕಾಲೇಜು ! ಅಲ್ಲಿನ ಮಹಿಳಾ ವೈದ್ಯೆಯ ಮೇಲೆ ಬಲಾತ್ಕಾರ ಮಾಡಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬರದೇ ಇರುತ್ತಿದ್ದರೇ, ಅಲ್ಲಿನ ಅವ್ಯವಹಾರಗಳು ಬಹಿರಂಗವಾಗುತ್ತಿರಲಿಲ್ಲ ! |