ಚಿತ್ರದುರ್ಗದ ಸರಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ‘ಪ್ರೀ ವೆಡ್ಡಿಂಗ್ ಶೂಟಿಂಗ್’ ಮಾಡಿದ ವೈದ್ಯರ ವಜಾ

(‘ಪ್ರೀ ವೆಡ್ಡಿಂಗ್ ಶೂಟಿಂಗ್’ ಎಂದರೆ ಮದುವೆಗೆ ಮೊದಲು ವಧು-ವರರು ಮಾಡಿದ ಶೂಟಿಂಗ್)

ಚಿತ್ರದುರ್ಗ – ಇಲ್ಲಿನ ಭರಮಸಾಗರ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಆಪರೇಷನ್ ಥಿಯೇಟರ್‌ನಲ್ಲಿ (ಒಟಿ) ‘ಪ್ರೀ ವೆಡ್ಡಿಂಗ್ ಶೂಟಿಂಗ್’ ಮಾಡಿದ್ದರಿಂದ ಅವರನ್ನು ವಜಾಗೊಳಿಸಲಾಗಿದೆ. ಈ ವೈದ್ಯರು ತಮ್ಮ ಪತ್ನಿಯೊಂದಿಗೆ ಇಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವೇಳೆ ಕ್ಯಾಮೆರಾಮೆನ್ ಮತ್ತು ತಂತ್ರಜ್ಞರು ನಗುತ್ತಿದ್ದರು.

ವೈದ್ಯರ ಇಂತಹ ಅಶಿಸ್ತನ್ನು ಸಹಿಸುವುದಿಲ್ಲ ! – ಆರೋಗ್ಯ ಸಚಿವರು

ಘಟನೆಯ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇವರು ವೈದ್ಯರಿಗೆ ಛೀಮಾರಿ ಹಾಕಿದ್ದಾರೆ. ಸರಕಾರಿ ಆಸ್ಪತ್ರೆಗಳು ಜನರ ಆರೋಗ್ಯದ ಕಾಳಜಿಗಾಗಿಯೇ ಹೊರತು ವೈಯಕ್ತಿಕ ಕೆಲಸಕ್ಕಲ್ಲ ಎಂದು ‘ಎಕ್ಸ್’ನಲ್ಲಿ ಬರೆಸಿದ್ದಾರೆ. ವೈದ್ಯರ ಇಂತಹ ಒರಟುತನವನ್ನು ಸಹಿಸುವುದಿಲ್ಲ. ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿದ್ದ ವೈದ್ಯನನ್ನು ವಜಾ ಮಾಡಲಾಗಿದೆ. ಎಲ್ಲಾ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ಸರಕಾರಿ ಸೇವಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ಆಪರೇಷನ್ ಥಿಯೇಟರ್ ಕೆಲ ತಿಂಗಳು ಮುಚ್ಚಿತ್ತು

ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ ರೇಣು ಪ್ರಸಾದ್ ಮಾತನಾಡಿ, ಅಭಿಷೇಕ್ ಎಂಬ ಈ ವೈದ್ಯರ ತಿಂಗಳ ಹಿಂದೆ ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ವೈದ್ಯಾಧಿಕಾರಿಯಾಗಿ ನೇಮಿಸಲಾಗಿದೆ. ವಿವಾಹ ಪೂರ್ವ ಚಿತ್ರೀಕರಣ ನಡೆದ ಆಪರೇಷನ್ ಥಿಯೇಟರ್ ಸೆಪ್ಟೆಂಬರ್ ತಿಂಗಳಿನಿಂದ ಬಳಕೆಯಾಗುತ್ತಿಲ್ಲ. ಸದ್ಯ ಅಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

‘ಎಲ್ಲಿ ಏನು ಮಾಡಬೇಕು ?’, ಇದರ ಅರಿವೇ ಇಲ್ಲದ ವೈದ್ಯರು !