ಮಹಾಕುಂಭ ಮೇಳದಲ್ಲಿ 132 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಪ್ರಯಾಗರಾಜ್ – ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಬಂದಿದ್ದ 10 ಸಾವಿರಕ್ಕೂ ಹೆಚ್ಚು ನಾಗರಿಕರು ಬೆಳಗಿನ ಕೊರೆಯುವ ಚಳಿಯನ್ನು ಸಹಿಸಲಾರದೆ ಪರದಾಡಿದರು. ಈ ಪೈಕಿ 132 ರೋಗಿಗಳನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಮಹಾಕುಂಭ ಮೇಳಕ್ಕಾಗಿ ಸ್ಥಾಪಿಸಲಾದ ಸೆಂಟ್ರಲ್ ಆಸ್ಪತ್ರೆ ಮತ್ತು ಹತ್ತಿರದ ಸ್ವರೂಪರಾಣಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಯಾಗರಾಜ್‌ನಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಅತಿ ಶೀತ ವಾತಾವರಣವನ್ನು ಸಹಿಸಲಾಗದೇ ಅವರು ಪ್ರಾಣ ಕಳೆದುಕೊಂಡರು, ಎಂದು ಹೇಳಲಾಗುತ್ತಿದೆ. ಆದರೂ ಈ ನಾಲ್ವರು ಜನರು ಮಹಾಕುಂಭ ಮೇಳಕ್ಕೆ ಬಂದಿದ್ದರೇ ?, ಎಂದು ದೃಢೀಕರಿಸಲು ಸಾಧ್ಯವಾಗಲಿಲ್ಲ.