ಕರುಳಿನ ಕ್ಯಾನ್ಸರ್‌ಗೆ ಮೊದಲನೇ ಬಾರಿ ಲಸಿಕೆಯನ್ನು ಕಂಡುಹಿಡಿದಿರುವ ಬ್ರಿಟನ್ನಿನ ಭಾರತೀಯ ಮೂಲದ ವೈದ್ಯರು !

  • ಶೀಘ್ರದಲ್ಲಿಯೇ ಪರೀಕ್ಷೆ ನಡೆಸಲಾಗುವುದು!

  • ಶಸ್ತ್ರಚಿಕಿತ್ಸೆ ಮಾಡುವ ಆವಶ್ಯಕತೆ ಇರುವುದಿಲ್ಲ !

ಲಂಡನ್ (ಬ್ರಿಟನ್) – ಬ್ರಿಟನ್‌ನಲ್ಲಿರುವ ಭಾರತೀಯ ಮೂಲದ ಖ್ಯಾತ ವೈದ್ಯರಾದ ಟೋನಿ ಧಿಲ್ಲೋನರವರು ಕರುಳಿನ ಕರ್ಕರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಭರವಸೆಯ ಆಶಾಕಿರಣವಾಗಿದ್ದಾರೆ. ಅವರು 4 ವರ್ಷಗಳ ಕಾಲ ಕೆಲಸ ಮಾಡಿ ಕರ್ಕರೋಗದ ಮೇಲೆ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಮುಂಬರುವ ಸಮಯದಲ್ಲಿ ಈ ಲಸಿಕೆಯ ಪರೀಕ್ಷೆ ನಡೆಸಲಾಗುವುದು.

1. ಡಾ ಟೋನಿ ಧಿಲ್ಲೋನರವರು ರಾಯಲ್ ಸರೆ ಎನ್.ಎಚ್.ಎಸ್. ಫೌಂಡೇಶನ್ ಟ್ರಸ್ಟ್‌ನಲ್ಲಿ ಆಂಕೊಲಾಜಿಸ್ಟ್‌ (ಕರ್ಕರೋಗಕ್ಕೆ ಚಿಕಿತ್ಸೆ ನೀಡುವ ವೈದ್ಯರು) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಲಸಿಕೆಯ ಪರೀಕ್ಷೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರು ಈ ವಿಷಯದಲ್ಲಿ ಆಸ್ಟ್ರೇಲಿಯಾದ ಪ್ರೊಫೆಸರ್ ಟಿಮ್ ಪ್ರೈಸ್ ರವರೊಂದಿಗೆ ಕೆಲಸ ಮಾಡಿದ್ದಾರೆ.

2. ಆಸ್ಟ್ರೇಲಿಯಾದಲ್ಲಿನ ಡಿಲೇಡನಲ್ಲಿರುವ ರಾಯಲ್ ಸರೆ ಹಾಗೂ ಸೌತಥಪ್ಟನ್ ವಿಶ್ವವಿದ್ಯಾಲಯದ ಕ್ಯಾನ್ಸರ್ ರಿಸರ್ಚ್ ಕ್ಲಿನಿಕಲ್ ಟ್ರಯಲ್ಸ್ ಯೂನಿಟ್ ನ ಮೂಲಕ ಈ ಪರೀಕ್ಷೆಯನ್ನು ನಡೆಸಲಾಗುವುದು. ಕ್ವೀನ್ ಎಲಿಜಬೆತ್ ಆಸ್ಪತ್ರೆ ಇದಕ್ಕೆ ಸಹಕಾರ ನೀಡಲಿದೆ.

‘ಯಾವುದೇ ರೀತಿಯ ಕರುಳಿನ ಕರ್ಕರೋಗಕ್ಕೆ ಇದು ಮೊದಲನೇ ಲಸಿಕೆಯಾಗಲಿದೆ. ಇದು ಯಶಸ್ವಿಯಾಗುವುದು ಎಂದು ನಾವು ಆಶಿಸುತ್ತೇವೆ. ಇದರಿಂದ ಅನೇಕ ರೋಗಿಗಳ ಶರೀರದಿಂದ ಈ ಕರ್ಕರೋಗವು ಸಂಪೂರ್ಣವಾಗಿ ಇಲ್ಲವಾಗುತ್ತದೆ. ರೋಗಿಗಳಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಆವಶ್ಯಕತೆ ಇರುವುದಿಲ್ಲ.’ – ಡಾ. ಟೋನಿ ಧಿಲ್ಲೊನ

44 ರೋಗಿಗಳಿಗೆ ಪರೀಕ್ಷೆ ಮಾಡಲಾಗುವುದು!

44 ರೋಗಿಗಳ ಮೇಲೆ ಈ ಲಸಿಕೆಯ ಪರೀಕ್ಷೆ ನಡೆಸಲಾಗುವುದು. ಲಸಿಕೆಯ ಮೇಲಿನ ಅಧ್ಯಯನವು 18 ತಿಂಗಳ ವರೆಗೆ ನಡೆಯಲಿದೆ. ಈ ಪರೀಕ್ಷೆಯನ್ನು ಆಸ್ಟ್ರೇಲಿಯಾದ 6 ಮತ್ತು ಬ್ರಿಟನ್‌ನ 4 ಸ್ಥಳಗಳಲ್ಲಿರುವ ರೋಗಿಗಳ ಮೇಲೆ ನಡೆಸಲಾಗುವುದು. ಪರೀಕ್ಷೆಯು ಯಶಸ್ವಿಯಾದರೆ, ಲಸಿಕೆಯನ್ನು ಬಳಸಲು ಪರವಾನಿಗೆ ನೀಡಲಾಗುತ್ತದೆ ಅಥವಾ ಅದರ ಮೇಲೆ ದೊಡ್ಡ ಅಧ್ಯಯನವನ್ನು ನಡೆಸಲಾಗುವುದು. ಜಗತ್ತಿನಾದ್ಯಂತ ಪ್ರತಿ ವರ್ಷ ಕರುಳಿನ ಕರ್ಕರೋಗದ 12 ಲಕ್ಷ ಪ್ರಕರಣಗಳು ಕಂಡು ಬರುತ್ತಿವೆ. ಕರುಳಿನ ಕರ್ಕರೋಗದಿಂದ ಸಾವನ್ನಪ್ಪುವವರ ಸಂಖ್ಯೆಯು ಶೇ. 50 ರಷ್ಟಿದೆ.