ಒಡಿಶಾ ಸರಕಾರಕ್ಕೆ ಉಚ್ಚ ನ್ಯಾಯಾಲಯದ ಆದೇಶ
ಭುವನೇಶ್ವರ (ಒಡಿಶಾ) – ಒಡಿಶಾ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ವೈದ್ಯರು ನೀಡುವ ಔಷಧಗಳ ಚೀಟಿ (ಪ್ರಿಸ್ಕ್ರಿಪ್ಷನ್) ಅಥವಾ ರೋಗಿಯ ವರದಿಗಳನ್ನು ಬರೆಯುವ ವಿಷಯದಲ್ಲಿ ಸುತ್ತೋಲೆಗಳನ್ನು ಹೊರಡಿಸುವಂತೆ ಆದೇಶಿಸಿದೆ. ಇದರಲ್ಲಿ ವೈದ್ಯರು ಓದಲು ಬರುವಂತಹ ಅಕ್ಷರಗಳಲ್ಲಿ ಮಾಹಿತಿಯನ್ನು ಬರೆಯಲು ಅಥವಾ ದೊಡ್ಡ ಅಕ್ಷರಗಳಲ್ಲಿ ಬೆರಳಚ್ಚು ಮಾಡುವಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿಯವರೆಗೆ ದೇಶದ ಕೆಲವು ನ್ಯಾಯಾಲಯಗಳು ವೈದ್ಯರಿಗೆ ಈ ಸಂದರ್ಭದಲ್ಲಿ ಸೂಚನೆಗಳನ್ನೂ ನೀಡಿದ್ದಾರೆ.
ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಒಂದು ವಿಚಾರಣೆ ವೇಳೆಗೆ ವೈದ್ಯರು ಬರೆದ ಶವಪರೀಕ್ಷೆಯ ವರದಿಯನ್ನು ಓದಲು ಕಷ್ಟವಾಗುತ್ತಿತ್ತು. ವೈದ್ಯರು ಬರೆದ ವಿವರಗಳು ಸರಿಯಾಗಿ ತಿಳಿಯುತ್ತಿರಲಿಲ್ಲ, ಇದರಿಂದ ನ್ಯಾಯಮೂರ್ತಿಗಳು ಮೇಲಿನಂತೆ ಆದೇಶ ನೀಡಿದ್ದಾರೆ.
Doctors Should Write In Capital Letters Or Legible Handwriting : Orissa High Courthttps://t.co/TpCCFPkTEZ
— Live Law (@LiveLawIndia) January 9, 2024
ಸಂಪಾದಕರ ನಿಲುವು* ವೈದ್ಯರು ಚೀಟಿಗಳನ್ನು ಬರೆಯುವಾಗ ಅದನ್ನು ಓದಲು ಬರುವಂತೆ ಬರೆಯಬೇಕೆಂದು ಸರಕಾರಕ್ಕೆ ಸುತ್ತೋಲೆ ಹೊರಡಿಸುವಂತೆ ನ್ಯಾಯಾಲಯಕ್ಕೆ ಆದೇಶ ನೀಡಬೇಕಾಗಿರುವುದು ವೈದ್ಯರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ! |