ಗರ್ಭಕಂಠದ ಅರ್ಬುದರೋಗ ಮತ್ತು ಅದಕ್ಕೆ ಉಪಾಯ !

ಡಾ. ಶಿಲ್ಪಾ ಚಿಟಣೀಸ-ಜೋಶಿ

೧. ನಮ್ಮ ದೇಶದಲ್ಲಿ ಗರ್ಭಕಂಠದ ಅರ್ಬುದರೋಗದ ಪ್ರಮಾಣ ಎಲ್ಲಕ್ಕಿಂತ ಹೆಚ್ಚಿರುವುದರಿಂದ ಭಾರತೀಯ ಸ್ತ್ರೀಯರು ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಆವಶ್ಯಕವಾಗಿದೆ !

‘ಡಾಕ್ಟರ, ನೀವು ಹೋದ ವರ್ಷ ನನ್ನ ಗರ್ಭಕಂಠದ ಮೇಲೆ ಒಂದು ಹುಣ್ಣಾಗಿದೆ ಎಂದು ಹೇಳಿದ್ದಿರಿ. ನೀವು ನನಗೆ ಬಂದು ಪರೀಕ್ಷಣೆಯನ್ನು ಮಾಡಿಸಿಕೊಳ್ಳಲೂ ಹೇಳಿದ್ದಿರಿ; ಆದರೆ ನನಗೆ ಪರೀಕ್ಷಣೆಗೆ ಬರಲು ಆಗಲೇ ಇಲ್ಲ. ಈಗ ನನಗೆ ತುಂಬಾ ತೊಂದರೆಯಾಗುತ್ತಿದೆ’, ಈ ರೀತಿ ರೋಗಿ ಮಹಿಳೆಯರ ಮಾತುಗಳಿರುತ್ತವೆ. ಇದೊಂದು ಪ್ರಾತಿನಿಧಿಕ ಉದಾಹರಣೆಯಾಗಿದೆ. ಇಂತಹ ಅನೇಕ ಸ್ತ್ರೀಯರಿರುತ್ತಾರೆ. ಅವರಿಗೆ ಸ್ತ್ರೀರೋಗತಜ್ಞರು ಗರ್ಭಾಶಯಕಂಠದ, ಅಂದರೆ ‘ಸರ್ವಿಕ್ಸ್‌’ನ ಅರ್ಬುದರೋಗ ಇಲ್ಲವಲ್ಲ ಎಂಬುದನ್ನು ನೋಡಲು ಪರೀಕ್ಷಣೆಯನ್ನು ಮಾಡಿಸಿಕೊಳ್ಳಲು ಮೇಲಿಂದ ಮೇಲೆ ಹೇಳುತ್ತಾರೆ, ಆದರೆ ಸ್ತ್ರೀಯರು ಅದರ ಕಡೆಗೆ ಅನೇಕ ವರ್ಷಗಳ ವರೆಗೆ ದುರ್ಲಕ್ಷ ಮಾಡುತ್ತಾರೆ. ನಿಜ ಹೇಳಬೇಕೆಂದರೆ ಈ ಪರೀಕ್ಷೆಯನ್ನು ಸ್ತ್ರೀಯರ ಲೈಂಗಿಕ ಜೀವನ ಪ್ರಾರಂಭವಾದಾಗಿನಿಂದ ಪ್ರತಿವರ್ಷ ಮಾಡಿಸಿಕೊಳ್ಳುವುದು ಆವಶ್ಯಕವಾಗಿರುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಪ್ರತಿಯೊಬ್ಬ ಸ್ತ್ರೀಯರ ಗರ್ಭಕಂಠದ ತಪಾಸಣೆಯನ್ನು ಪ್ರತಿ ವರ್ಷ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಗರ್ಭಕಂಠದ ಅರ್ಬುದ (ಕ್ಯಾನ್ಸರ್) ರೋಗದ ಪ್ರಮಾಣವು ಎಲ್ಲಕ್ಕಿಂತ ಹೆಚ್ಚಿದೆ. ಆದರೂ ಭಾರತೀಯ ಸ್ತ್ರೀಯರು ಈ ಪರೀಕ್ಷಣೆಯನ್ನು ಮಾಡಿಸಿಕೊಳ್ಳುವುದನ್ನು ಮುಂದೂಡುತ್ತಿರುತ್ತಾರೆ. ಒಂದು ಸಲ ಅವರ ಹೆರಿಗೆಯಾದರೆ, ‘ಅವರು ಸ್ತ್ರೀರೋಗತಜ್ಞರ ಬಳಿ ಹೋಗುವುದೇ ಇಲ್ಲ’, ಈ ವೃತ್ತಿಯು ಬಹುತೇಕ ಮಹಿಳೆಯರಲ್ಲಿ ಕಂಡುಬರುತ್ತದೆ.

೨. ಗರ್ಭಕಂಠದ ಅರ್ಬುದರೋಗ ಏಕೆ ಆಗುತ್ತದೆ ? ಮತ್ತು ಅದರ ತ್ವರಿತ ಪತ್ತೆ ಹಚ್ಚುವುದು ಹೇಗೆ ?

ಗರ್ಭಕಂಠದ ಮೇಲೆ ಒಳಗಿನ ಮತ್ತು ಹೊರಗಿನ ಹೀಗೆ ಎರಡು ರೀತಿಯ ಕೋಶಗಳ ಸಂಗಮವಿರುತ್ತದೆ. ಅದಕ್ಕೆ ‘ಟ್ರಾನ್ಸಿಶನ್‌ ಝೋನ್’ (ಸಂಸರ್ಗ ಕ್ಷೇತ್ರ) ಎಂದು ಹೇಳುತ್ತಾರೆ. ಈ ಭಾಗದಲ್ಲಿ ಗಾಯಗಳಂತಹ ಹುಣ್ಣುಗಳಾಗುತ್ತವೆ. ಯೋನಿಯಲ್ಲಿ ಎಲ್ಲ ರೀತಿಯ ಜೀವಜಂತುಗಳಿರುವುದರಿಂದ ಈ ಹುಣ್ಣುಗಳಿಗೆ ತಕ್ಷಣ ಜಂತುಸಂಸರ್ಗ (ಇನಫೆಕ್ಷನ್) ಆಗಿ ರೋಗಿಗೆ ಯೋನಿಮಾರ್ಗದಲ್ಲಿ ತುರಿಕೆ ಬರುವುದು, ಉರಿಯುವುದು, ಬಿಳಿ ಸ್ರಾವ (ಬಿಳಿಮುಟ್ಟು) ಹೋಗುವುದು ಇಂತಹ ತೊಂದರೆಗಳು ಪ್ರಾರಂಭವಾಗುತ್ತವೆ. ಇದಕ್ಕಾಗಿ ಯೋನಿಯಲ್ಲಿ ಇಟ್ಟುಕೊಳ್ಳುವ ಮಾತ್ರೆಗಳ ೩ ದಿನಗಳ ಅಥವಾ ೫ ದಿನಗಳ ಒಂದು ‘ಕೋರ್ಸ’ ಮಾಡ ಲಾಗುತ್ತದೆ. ಅದನ್ನು ಸರಿಯಾಗಿ ಪೂರ್ಣಗೊಳಿಸುವುದು ಅತ್ಯಂತ ಆವಶ್ಯಕವಾಗಿರುತ್ತದೆ. ಇಲ್ಲದಿದ್ದರೆ ಆಗಾಗ ಜಂತುಸಂಸರ್ಗ ಆಗುತ್ತಿರುತ್ತದೆ. ಕೆಲವೊಮ್ಮೆ ಯೋನಿಮಾರ್ಗದಲ್ಲಿನ ಜಂತು ಸಂಸರ್ಗ ಮೇಲಿಂದ ಮೇಲೆ ಆಗತೊಡಗುತ್ತದೆ, ಆಗ ರೋಗಿ ಮತ್ತು ಅವಳ ಯಜಮಾನ ಇಬ್ಬರಿಗೂ ಹೊಟ್ಟೆಗೆ ತೆಗೆದುಕೊಳ್ಳುವ ಔಷಧಿಗಳನ್ನು ಕೊಡಲಾಗುತ್ತದೆ; ಏಕೆಂದರೆ ಸೋಂಕು ಲೈಂಗಿಕ ಸಂಬಂಧದಿಂದ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅನೇಕ ಬಾರಿ ಪುರುಷರಿಗೆ ಯಾವುದೇ ತೊಂದರೆ ಇರುವುದಿಲ್ಲ; ಅವರು ಕೇವಲ ಸೋಂಕಿನ (ಇನಫೆಕ್ಷನ್‌ನ) ವಾಹಕ ರಾಗಿರುತ್ತಾರೆ (ಕ್ಯಾರಿಯರ್‌). ಆದುದರಿಂದ ಅವರಿಗೂ ಔಷಧಿಗಳನ್ನು ಕೊಡದೇ ಅವರ ಪತ್ನಿ ಗುಣಮುಖ ಆಗುವುದಿಲ್ಲ. ಕೆಲವು ಪುರುಷರು ಔಷಧಿ ತೆಗೆದುಕೊಳ್ಳಲು ತಯಾರಿರುವುದಿಲ್ಲ. ಅವರಿಗೆ ತುಂಬಾ ತಿಳಿಸಿ ಹೇಳಬೇಕಾಗುತ್ತದೆ.

೩. ಗರ್ಭಕಂಠದ ಅರ್ಬುದರೋಗದ ಸೋಂಕು ಪರೀಕ್ಷೆ ಲಭ್ಯವಿದೆ

ಗರ್ಭಕಂಠದ (ಸರ್ವಿಕ್ಸದ) ಅರ್ಬುದರೋಗವು ಯೋನಿಯಲ್ಲಿರುವ ‘ಹ್ಯೂಮನ್‌ ಪಾಪಿಲೋಮ್’ ಎಂಬ ವಿಷಾಣುಗಳಿಂದಾಗುತ್ತದೆ. ಈ ವಿಷಾಣುಗಳ ಸೊಂಕು ಗರ್ಭಕಂಠಕ್ಕೆ ಇದೆಯೇ ? ಎಂಬುದನ್ನು ನೋಡಲು ಮತ್ತು ಈ ಭಾಗದಲ್ಲಿನ ಕೋಶಗಳ ಅರ್ಬದರೋಗವನ್ನು ಪರಿಶೀಲಿಸಲು ‘ಎಚ್‌.ಪಿ.ವಿ. + ಎಲ್‌.ಬಿ.ಸಿ.’ ಈ ಪರೀಕ್ಷೆಗಳು ಲಭ್ಯವಿವೆ. ಈ ಪರೀಕ್ಷೆಗಳನ್ನು ಒಂದು ಸಲ ಮಾಡಿದ ಮೇಲೆ ಅದು ‘ನೆಗೆಟಿವ್’ ಬಂದರೆ, ೫ ವರ್ಷಗಳ ತನಕ ಪುನಃ ಪರೀಕ್ಷೆಯನ್ನು ಮಾಡಬೇಕಾಗುವುದಿಲ್ಲ. ‘ಎಚ್‌.ಪಿ.ವಿ.’ ಈ ವಿಷಾಣುಗಳ ಸೊಂಕು ಸ್ತ್ರೀಯರಲ್ಲಿ ಲೈಂಗಿಕ ಸಂಬಂಧ ಪ್ರಾರಂಭವಾದ ನಂತರವೇ ಆಗುತ್ತದೆ. ವಿದೇಶಗಳಲ್ಲಿ ಲೈಂಗಿಕ ಸಂಬಂಧ ಪ್ರಾರಂಭವಾದ ಮೇಲೆ ‘ಪಾಪ್‌ ಸ್ಮಿಯರ್’ ಎಂಬ ಪರೀಕ್ಷಣೆ ಯನ್ನು ನಿಯಮಿತವಾಗಿ ಮಾಡಲಾಗುತ್ತದೆ. ‘ಎಚ್‌.ಪಿ.ವಿ. + ಎಲ್‌.ಬಿ.ಸಿ.’ ಈ ಪರೀಕ್ಷೆಯೂ ಪಾಪ್‌ ಸ್ಮಿಯರ್‌ನಂತೆಯೇ ಇದೆ; ಆದರೆ ಹೆಚ್ಚು ತಪ್ಪುರಹಿತವಾಗಿದೆ.

೪. ಗರ್ಭಕಂಠದ ಅರ್ಬುದರೋಗದ ಬಗ್ಗೆ ಸ್ತ್ರೀಯರಲ್ಲಿ ಜಾಗರೂಕತೆಯನ್ನು ಮೂಡಿಸುವುದು ಆವಶ್ಯಕ !

ಚಿಕ್ಕ ವಯಸ್ಸಿನಲ್ಲಿ ಮದುವೆ, ಬೇಗನೇ ಮಕ್ಕಳಾಗುವುದು, ಕಡಿಮೆ ಅಂತರದಲ್ಲಿ ಆದ ಹೆರಿಗೆಗಳು ಮುಂತಾದವುಗಳಿಂದ ಗರ್ಭಾಶಯದ ಅರ್ಬುದರೋಗದ ಪ್ರಮಾಣವು ಹೆಚ್ಚುತ್ತದೆ. ಈ ಸ್ತ್ರೀಯರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಆರೋಗ್ಯದ ಬಗ್ಗೆ ಇರುವ ನಿರಾಸಕ್ತಿಯೂ ಅರ್ಬುದರೋಗ ಒಂದು ಕಾರಣವಾಗಿದೆ. ಅರ್ಬುದರೋಗದ ಸಮಯಕ್ಕೆ ಸರಿಯಾಗಿ ಪರೀಕ್ಷಣೆ ಆಗದಿರುವುದೂ ಒಂದು ಕಾರಣವಾಗಿದೆ. ಇದಕ್ಕಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬರುವ ಸ್ತ್ರೀಯರಲ್ಲಿ ಇದರ ಬಗ್ಗೆ ಜಾಗರೂಕತೆಯನ್ನು ಮೂಡಿಸುವುದು ಆವಶ್ಯಕ ವಾಗಿದೆ. ಅನೇಕ ಸ್ತ್ರೀಯರು ತುಂಬಾ ವರ್ಷಗಳಿಂದ ಗರ್ಭಾಶಯದ ಮೇಲಿರುವ ಗಾಯಗಳಿಗಾಗಿ (‘ಸರ್ವಾಯಕಲ್‌ ಇರೊಜನ್‌’) ಸ್ತ್ರೀರೋಗತಜ್ಞರ ಬಳಿ ಹೋಗುತ್ತಾರೆ; ಆದರೆ ತಪಾಸಣೆÉಯನ್ನು ಮಾಡಲು ಹೇಳಿದರೆ ಅವರು ವಾಪಾಸು ಬರುವುದೇ ಇಲ್ಲ. ಈ ತಪಾಸಣೆಯನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ, ಮುಂದೆ ಆಗುವ ಮಾನಸಿಕ ನೋವನ್ನು (ಮನಸ್ತಾಪವನ್ನು) ತಡೆಯಬಹುದು.

೫. ಗರ್ಭಕಂಠದ ಅರ್ಬುದರೋಗದ ಲಕ್ಷಣಗಳು ಮತ್ತು ಅದರ ಚಿಕಿತ್ಸಾಪದ್ಧತಿ !

ಹೆಚ್ಚು ಪ್ರಮಾಣದಲ್ಲಿ ಬಿಳಿಮುಟ್ಟು ಹೋಗುವುದು (ಲಿಕೋರಿಯಾ), ಲೈಂಗಿಕ ಸಂಬಂಧದ ನಂತರ ಕೆಂಪುಮುಟ್ಟು ಹೋಗುವುದು, ಎರಡು ಮುಟ್ಟುಗಳ ನಡುವೆ ಕೆಂಪುಸ್ರಾವ ಕಾಣಿಸುವುದು, ಇವು ಗರ್ಭಾಶಯದ ಅರ್ಬುದ ರೋಗದ ಲಕ್ಷಣಗಳಿರ ಬಹುದು. ಸ್ತ್ರೀಯರು ಮುಟ್ಟು ನಿಂತ ನಂತರವೂ ಪ್ರತಿವರ್ಷ ಕನಿಷ್ಟ ಒಂದು ಸಲವಾದರೂ ಸ್ತ್ರೀರೋಗತಜ್ಞರಿಂದ ತಪಾಸಣೆಯನ್ನು ಮಾಡಿಸಿ ಕೊಳ್ಳುವುದು ಅನಿವಾರ್ಯ ವಾಗಿದೆ ಮತ್ತು ಈ ತಪಾಸಣೆಯಿಂದ ಕೆಲವು ಸಲ ನಿಮಗೆ ಜೀವದಾನ ಸಿಗಬಹುದು. ಒಮ್ಮೆ ಮುಟ್ಟು ನಿಂತಿತೆÀಂದರೆ ಸ್ತ್ರೀಯರು ಸ್ತ್ರೀರೋಗತಜ್ಞರಲ್ಲಿಗೆ ಹೋಗುವುದನ್ನು ಸಂಪೂರ್ಣ ನಿಲ್ಲಿಸುತ್ತಾರೆ. ಗರ್ಭಾಶಯ, ಅದರ ಬಾಯಿ, ಓವರೀ ಈ ಅವಯವಗಳ ಅರ್ಬುದರೋಗದ ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಲು (ಡಾಯಗನೋಸಿಸ ಆಗಲು) ನಿಯಮಿತವಾಗಿ ಸ್ತ್ರೀರೋಗತಜ್ಞರಿಂದ ತಪಾಸಣೆ ಮತ್ತು ‘ಸೊನೊಗ್ರಾಫಿ’ಯನ್ನು ಮಾಡಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಕೆಲವೊಮ್ಮೆ ‘ಎಚ್‌.ಪಿ.ವಿ. + ಎಲ್‌.ಬಿ.ಸಿ.’ ಈ ಪರಿಶೀಲನೆಗಳು ಸಾಮಾನ್ಯವಾಗಿರುತ್ತವೆ (ನಾರಮಲ್‌); ಆದರೆ ಅಲ್ಲಿನ ಗಾಯದ ಮೇಲಿನ ಭಾಗಕ್ಕೆ ಸೋಂಕು ತಗಲಿ ರೋಗಿಗಳಿಗೆ ತೊಂದರೆಗಳು ಆಗುತ್ತಿರುತ್ತವೆ. ಇಂತಹ ಸಮಯದಲ್ಲಿ ಪ್ರಜ್ಞೆ ತಪ್ಪಿಸಿ ಈ ಗಾಯವನ್ನು ಸುಡಲಾಗುತ್ತದೆ. ಆದುದರಿಂದ ‘ಸರ್ವಿಕಲ್‌ ಕ್ರಿಯೋ ಅಥವಾ ಥರ್ಮಲ್‌ ಕ್ವಾಟರೀ’ (ಅಎಡಿವಿಛಿಚಿಟ ಅಡೀಥಿಒ ಒಡಿ ಖಿಹೆಡಿಮ್ಚಿಟ ಅಚಿಉಣಎಡಿಥಿ) ಈ ಉಪಚಾರಪದ್ಧತಿಯಿಂದ ಅನೇಕ ಸ್ತ್ರೀಯರ ತೊಂದರೆಗಳು ಶಾಶ್ವತವಾಗಿ ಕಡಿಮೆ ಯಾಗುತ್ತವೆ. ‘ಎಚ್‌.ಪಿ.ವಿ. + ಎಲ್‌.ಬಿ.ಸಿ.’ ಈ ತಪಾಸಣೆ ಪಾಸಿಟಿವ್‌ ಬಂದರೆ, ಅದರ ಅರ್ಥ ‘ನಮಗೆ ಅರ್ಬುದರೋಗ ವಾಗಿದೆ’, ಎಂದೇನಿಲ್ಲ, ಅದರ ಅರ್ಥ ಗರ್ಭಾಶಯದ ಕಡೆಗೆ ಹೆಚ್ಚು ಗಮನ ಕೊಡುವುದು ಆವಶ್ಯಕವಾಗಿದೆ ಎಂಬುದು ತಿಳಿಯುತ್ತದೆ. ಅದರ ನಂತರ ಆ ಭಾಗದ ‘ಬಯಾಪ್ಸಿ’ಯನ್ನು ಮಾಡಿ ಮತ್ತು ಮೇಲಿಂದ ಮೇಲೆ ತಪಾಸಣೆÉಗಳನ್ನು ಮಾಡಿ ಅದರ ಕಡೆಗೆ ಗಮನವಿಡಲಾಗುತ್ತದೆ.

೬. ಈಗ ಗರ್ಭಕಂಠದ ಅರ್ಬುದರೋಗವನ್ನು ತಡೆಯಲು ಲಸಿಕೆ ಲಭ್ಯವಿದೆ

ಭಾರತದಲ್ಲಿ ಸ್ತ್ರೀಯರಲ್ಲಿ ಗರ್ಭಕಂಠದ ಅರ್ಬುದ ರೋಗದ ಪ್ರಮಾಣವು ಎಲ್ಲಕ್ಕಿಂತ ಹೆಚ್ಚಿದೆ. ಅದೃಷ್ಟದಿಂದ ಈ ಅರ್ಬುದರೋಗವನ್ನು ತಡೆಯಲು ಕಳೆದ ಕೆಲವು ವರ್ಷ ಗಳಿಂದ ಲಸಿಕೆ ಲಭ್ಯವಿದೆ ಮತ್ತು ಅದು ಎಲ್ಲ ಕಡೆಗೆ ಸಿಗುತ್ತದೆ. ಅರ್ಬುದರೋಗವನ್ನು ತಡೆಯಲು ಈ ಲಸಿಕೆ ಹೇಗೆ ಕೆಲಸ ಮಾಡುತ್ತದೆ ? ಎಂಬುದರ ಬಗ್ಗೆ ಜನರ ಮನಸ್ಸಿನಲ್ಲಿ ಸಂದೇಹ ಬರಬಹುದು. ಅದರ ಉತ್ತರ ಹೀಗಿದೆ, ಲೈಂಗಿಕ ಸಂಬಂಧ ಬಂದ ನಂತರ ಗರ್ಭಕಂಠಕ್ಕೆ ‘ಎಚ್‌.ಪಿ.ವಿ.’ ಎಂಬ ಹೆಸರಿನ ವಿಷಾಣುಗಳ ಸೋಂಕು ಆಗಬಹದು. ಈ ಸೋಂಕು ಬಹಳಷ್ಟು ವರ್ಷ ಹಾಗೇ ಉಳಿದರೆ, ಅದು ಅರ್ಬುದ ರೋಗದಲ್ಲಿ ರೂಪಾಂತರ ಆಗಬಹುದು. ಈ ಸೋಂಕಿನಿಂದ ‘ಎಚ್‌.ಪಿ.ವಿ.’ ಲಸಿಕೆಯು ಮಹಿಳೆಯರ ರಕ್ಷಣೆಯನ್ನು ಮಾಡುತ್ತದೆ. ಸಹಜವಾಗಿಯೇ, ಯಾವುದೇ ಲೈಂಗಿಕ ಸಂಬಂಧ ಬರುವ ಮೊದಲು ಈ ಲಸಿಕೆಯನ್ನು ಕೊಟ್ಟರೆ ಅದು ಎಲ್ಲಕ್ಕಿಂತ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆದುದರಿಂದ ಹೆಣ್ಣು ಮಕ್ಕಳಿಗೆ ವಯಸ್ಸಿಗೆ ಬಂದನಂತರ ೧೬ ರಿಂದ ೧೮ ವರ್ಷಗಳಿಗಿಂತ ಮೊದಲು ಈ ಲಸಿಕೆಯನ್ನು ಕೊಡಬೇಕು. ೧೫ ವರ್ಷ ಗಳಿಗಿಂತ ಮೊದಲು ಈ ಲಸಿಕೆಯನ್ನು ಕೊಟ್ಟರೆ ಕೇವಲ ೨ ಡೋಸ್‌ಗಳನ್ನು ಕೊಡಬೇಕಾಗುತ್ತದೆ ಮತ್ತು ಅನಂತರ ಕೊಡಬೇಕಾದರೆ ೩ ಡೋಸ್‌ಗಳನ್ನು ಕೊಡಬೇಕಾಗುತ್ತದೆ. ಲಸಿಕೆ ಯನ್ನು ತೆಗೆದುಕೊಳ್ಳುವ ವೇಳಾಪಟ್ಟಿ ಹೀಗಿದೆ-೦ (ಪ್ರಾರಂಭ), ೧ ತಿಂಗಳ ನಂತರ ಎರಡನೇಯ ಡೋಸ್‌ ಮತ್ತು ೬ ತಿಂಗಳ ನಂತರ ಮೂರನೇ ಡೋಸ್.

೭. ಬೇಗನೇ ನಮ್ಮ ದೇಶದಲ್ಲಿಯೇ ತಯಾರಿಸಿದ ‘ಎಚ್‌.ಪಿ.ವಿ.’ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ !

ಪ್ರಸ್ತುತ ಭಾರತವು ಈ ಲಸಿಕೆಯನ್ನು ಆಮದು ಮಾಡಿಕೊಳ್ಳುವುದರಿಂದ ಅದು ದುಬಾರಿಯಿದೆÉ. ಹಿಂದುಳಿದ, ಸಾಮಾಜಿಕ ಮತ್ತು ಆರ್ಥಿಕದೃಷ್ಟಿಯಿಂದ ಬಡವರಾಗಿರುವವರಿಗೆ ಈ ಲಸಿಕೆಯು ತುಂಬಾ ಆವಶ್ಯಕ ವಾಗಿದೆ, ಆದರೆ ಈ ವರ್ಗದವರಿಗೆ ಅದು ಈಗ ಬಹಳ ದುಬಾರಿ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ದೇಶದಲ್ಲಿಯೇ ತಯಾರಿಸಿದ ಲಸಿಕೆಯನ್ನು ‘ಸೀರಮ್‌ ಇನ್ಸ್‌ಟಿಟ್ಯೂಟ್’ ಶೀಘ್ರದಲ್ಲಿಯೇ ಮಾರುಕಟ್ಟೆಗೆ ತರಲಿದೆ. ಅದು ಸ್ವದೇಶಿಯಾಗಿರುವುದರಿಂದ ಈ ಲಸಿಕೆ ಕಡಿಮೆ ಬೆಲೆ ಯಲ್ಲಿ ಲಭ್ಯವಾಗಬಹುದು. ಎಲ್ಲ ಹೆಣ್ಣುಮಕ್ಕಳ ಪಾಲಕರು ಇದರ ಲಾಭವನ್ನು ಪಡೆದು ತಮ್ಮ ಹೆಣ್ಣುಮಕ್ಕಳಿಗೆ ಈ ಲಸಿಕೆಯನ್ನು ಅವಶ್ಯ ಕೊಡಬೇಕು. ಈ ಲಸಿಕೆಯ ಲಾಭವು ಪುರುಷರಿಗೂ ಆಗುತ್ತದೆ. ಈ ಲಸಿಕೆಯಿಂದ ಅವರಿಗೆ ಬಾಯಿ, ಗಂಟಲು, ಲೈಂಗಿಕ ಅವಯವ, ಗುದದ್ವಾರ ಇವುಗಳು ಅರ್ಬುದರೋಗದಿಂದ ರಕ್ಷಣೆಯಾಗುತ್ತವೆÉ. ಆದುದರಿಂದ ಕೆಲವು ದೇಶಗಳಲ್ಲಿ ವಯಸ್ಸಿಗೆ ಬಂದ ಗಂಡು ಮಕ್ಕಳಿಗೂ ಈ ಲಸಿಕೆಯನ್ನು ಕೊಡುವುದು ಪ್ರಾರಂಭವಾಗಿದೆ. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಸ್ತ್ರೀಯರ ಲಸಕೀಕರಣವಾಗಿದ್ದರೂ, ನಿಯಮಿತವಾಗಿ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಆವಶ್ಯಕವಾಗಿದೆ. ಎರಡನೇಯದಾಗಿ ಮದುವೆ ಆಗಿರುವ ಅಥವಾ ಮೊದಲೇ ಲೈಂಗಿಕ ಸಂಬಂಧ ಬಂದಿರುವ ಸ್ತ್ರಿಯರೂ ‘ಎಚ್‌.ಪಿ.ವಿ.’ ಲಸಿಕೆಯನ್ನು ತೆಗೆದುಕೊಳ್ಳಬಹುದು; ಆದರೆ ಅದರ ಸಂಪೂರ್ಣ ಲಾಭ ಅವರಿಗೆ ಸಿಗುವುದಿಲ್ಲ, ಆದುದರಿಂದ ನಿಯಮಿತ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಮಹತ್ವದ್ದಾಗಿದೆ. ಇಂತಹ ಸಾಧ್ಯವಿರುವ ತಪಾಸಣೆಗಳನ್ನು ಮತ್ತು ಸಮಯಕ್ಕೆ ಸರಿಯಾಗಿ ಲಸಿಕರಣವನ್ನು ತೆಗೆದುಕೊಂಡರೆ ನೀವು ತುಂಬಾ ದೊಡ್ಡ ರೋಗವನ್ನು ದೂರ ಇಡಬಹುದು.

– ಡಾ. ಶಿಲ್ಪಾ ಚಿಟಣೀಸ-ಜೋಶಿ, ಸ್ತ್ರೀರೋಗ ಮತ್ತು ಬಂಜೆತನ ತಜ್ಞ, ಕೊಥರೂಡ, ಪುಣೆ.

(ಆಧಾರ : ಡಾ. ಶಿಲ್ಪಾ ಚಿಟಣೀಸ-ಜೋಶಿ ಇವರ ‘ಫೇಸಬುಕ್‌ ಪೇಜ’)