ಪ್ರಯಾಗರಾಜ ಕುಂಭಮೇಳ 2025
ಪ್ರಯಾಗರಾಜ್, ಜನವರಿ 23 (ಸುದ್ದಿ) – ಪ್ರಯಾಗರಾಜ್ ಕುಂಭನಗರಿಯ ಕೇಂದ್ರೀಯ ಆಸ್ಪತ್ರೆಯಲ್ಲಿ ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದಾರೆ. ಈ ಆಸ್ಪತ್ರೆಯಲ್ಲಿ ಒಟ್ಟು 1 ಸಾವಿರದ 200ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದರು. ಇದುವರೆಗೆ ಒಟ್ಟು 750 ಸಾಮಾನ್ಯ ಶಸ್ತ್ರಚಿಕಿತ್ಸೆಗಳು, ‘ಆಯುಷ್ಮಾನ್ ಭಾರತ್ ಯೋಜನೆ’ಯ ಅಡಿಯಲ್ಲಿ 42 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. 68ಕ್ಕೂ ಹೆಚ್ಚು ರೋಗಿಗಳು ಹೃದ್ರೋಗಕ್ಕೆ ಚಿಕಿತ್ಸೆ ಪಡೆದಿದ್ದಾರೆ ಎಂದು ಕೇಂದ್ರೀಯ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಮನೋಜ ಕೌಶಿಕ್ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ಮಾಹಿತಿ ನೀಡಿದರು. ಅನೇಕ ಸಾಧುಗಳು ಸಹ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮತ್ತು ಅವರನ್ನು ಚಿಕಿತ್ಸೆ ನಂತರ ಅವರ ಮಂಟಪ ಕಳುಹಿಸಲಾಗಿದೆ.
ಮೌನಿ ಅಮವಾಸ್ಯೆಯ ಸಿದ್ಧತೆಯ ಬಗ್ಗೆ ಡಾ. ಕೌಶಿಕ್ ಮಾತನಾಡಿ, ಈ ಸಂದರ್ಭದಲ್ಲಿ 2-2 ವೈದ್ಯರುಗಳ ಒಂದು ತಂಡ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಯಾವುದೇ ವೈದ್ಯರಿಗೂ ರಜೆ ನೀಡುವುದಿಲ್ಲ. ಎಲ್ಲಾ ತಜ್ಞ ವೈದ್ಯರು ಇಲ್ಲಿಯೇ ಕಾರ್ಯನಿರ್ವಹಿಸಲಿದ್ದಾರೆ. ನಮ್ಮ ಕಡೆಯಿಂದ ಒಂದು ವೇಳೆ ಕೆಲವು ಕಾರಣಗಳಿಗಾಗಿ ವೈದ್ಯರಿಗೆ ರಜೆ ಘೋಷಿಸಿದಾಗ ಮಾತ್ರ ವೈದ್ಯರು ಪ್ರಧಾನ ಕಚೇರಿಯನ್ನು ಬಿಡಬಹುದು ಎಂದು ತಿಳಿಸಿದರು.