ಕೊರೊನಾ ಲಸಿಕೆಯಿಂದ ಯುವಕರಿಗೆ ಅನಿರೀಕ್ಷಿತ ಸಾವಿನ ಅಪಾಯ ಇಲ್ಲ !

ಭಾರತೀಯ ವೈದ್ಯಕೀಯ ಸಂಶೋಧನ ಪರಿಷತ್ತಿನ ಅಧ್ಯಯನ

ನವ ದೆಹಲಿ – ಭಾರತೀಯ ವೈದ್ಯಕೀಯ ಸಂಶೋಧನ ಪರಿಷತ್ತು, ಎಂದರೆ ‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ದಿಂದ (ಆರ್.ಸಿ.ಎಮ್.ಆರ್.’ಇಂದ) ಕೋರೋನಾ ಲಸಿಕೆಯ ಸಂದರ್ಭದಲ್ಲಿ ನಡೆಸಿರುವ ಒಂದು ಸಂಶೋಧನೆಯ ಕೊನೆಯಲ್ಲಿ, ಕೊರೊನಾ ಲಸಿಕೆಯಿಂದ ಯುವಕರ ಅನಿರೀಕ್ಷಿತ ಸಾವಾಗುವ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.

೧. ಈ ಅಧ್ಯಯನದ ಪ್ರಕಾರ ಆಸ್ಪತ್ರೆಯಲ್ಲಿ ಸೇರಿಸಿರುವುದರಿಂದ ಹಾಗೂ ಅನಿರೀಕ್ಷಿತ ಸಾವು ಆಗುವುದರಲ್ಲಿ ಕೌಟುಂಬಿಕ ಇತಿಹಾಸ ಮತ್ತು ಜೀವನ ಶೈಲಿಯ ಕೆಲವು ರೂಡಿಗಳು ಇದರಿಂದ ಕೋರೋನ ಕಾಲದಲ್ಲಿ ಅನಿರೀಕ್ಷಿತ ಸಾವಿನ ಪ್ರಮಾಣ ಹೆಚ್ಚಾಗಿತ್ತು.

೨. ಈ ರೂಢಿಗಳಲ್ಲಿ ಸಾವಿನ ಮೊದಲು ಸತತ ೪೮ ಗಂಟೆ ಸಾರಾಯಿ ಕುಡಿಯುವುದು, ಮಾದಕ ವಸ್ತುಗಳ ಅಥವಾ ಇತರ ಯಾವುದೇ ಮಾದಕ ವಸ್ತುಗಳ ಸೇವನೆ ಮಾಡುವುದು ಅಥವಾ ಸಾವಿನ ೪೮ ಗಂಟೆಯ ಮೊದಲು ವಿವಿಧ ರೀತಿಯ ತೀವ್ರ ಶಾರಿರಿಕ ತೊಂದರೆ ಆಗುವುದು, ಇವುಗಳ ಸಮಾವೇಶವಿದೆ.

೩. ವರದಿಯಲ್ಲಿ, ಈ ಲಸಿಕೆಯ ಕನಿಷ್ಠ ಒಂದು ಡೋಸ್ ತೆಗೆದುಕೊಂಡಿರುವ ಜನರಲ್ಲಿ ಇಂತಹ ಅನಿರೀಕ್ಷಿತ ಸಾವಿನ ಅಪಾಯ ಕಡಿಮೆ ಆಗಬಹುದು ಎಂದು ಹೇಳಿದೆ.
ದೇಶದ ೪೭ ಆಸ್ಪತ್ರೆಯಲ್ಲಿ ಒಂದುವರೆ ವರ್ಷಗಳ ಕಾಲ ಅಧ್ಯಯನ !

ಐ.ಸಿ.ಎಂ.ಆರ್ ಇಂದ ನಡೆಸಿರುವ ಈ ಸಂಶೋಧನೆ ಅಕ್ಟೋಬರ್ ೧, ೨೦೨೧ ರಿಂದ ಮಾರ್ಚ್ ೩೧, ೨೦೨೩ ಈ ಒಂದುವರೆ ವರ್ಷದ ಕಾಲಾವಧಿಯಲ್ಲಿ ದೇಶಾದ್ಯಂತದ ೪೭ ಪ್ರಮುಖ ಆಸ್ಪತ್ರೆಗಳಲ್ಲಿ ನಡೆಸಲಾದ ಅಧ್ಯಯನದ ಮೇಲೆ ಆಧಾರಿತವಾಗಿದೆ. ೧೮ ರಿಂದ ೪೫ ವಯೋಮಾನದಲ್ಲಿನ ೭೨೯ ಜನರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಆರೋಗ್ಯವಂತ ಜನರು ಮತ್ತು ಯಾರಿಗೆ ಯಾವುದೇ ದೊಡ್ಡ ಕಾಯಿಲೆ ಇರಲಿಲ್ಲ ಹೀಗೆ ಇದ್ದರೂ ಕೂಡ ಅಜ್ಞಾತ ಕಾರಣದಿಂದ ಅವರ ಅನಿರೀಕ್ಷಿತ ಸಾವಾಗಿದೆ, ಯಾರು ಲಸಿಕೆಯ ಎರಡು ಡೋಸ್ ತೆಗೆದುಕೊಂಡಿದ್ದರು, ಅವರ ಅನಿರೀಕ್ಷಿತ ಸಾವು ಆಗುವ ಸಾಧ್ಯತೆ ಕಡಿಮೆ ಆಗಿತ್ತು ಹಾಗೂ ಯಾರು ಒಂದು ಡೋಸ್ ತೆಗೆದುಕೊಂಡಿದ್ದರೋ ಅವರ ಅನಿರೀಕ್ಷಿತ ಸಾವಿನ ಸಾಧ್ಯತೆ ಪ್ರಮಾಣ ಸ್ವಲ್ಪ ಹೆಚ್ಚಾಗಿತ್ತು ಎಂದು ಅಧ್ಯಯನದಲ್ಲಿ ಕಂಡುಬಂದಿದೆ.