ಕರ್ಕರೋಗ ವಿರುದ್ಧದ ಲಸಿಕೆಯನ್ನು ಅಭಿವೃದ್ಧಿ ಮಾಡುವಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ! – ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್

ರಷ್ಯಾದ ಅಧ್ಯಕ್ಷ ಪುತಿನ್ ಇವರಿಂದ ಮಾಹಿತಿ

ಮಾಸ್ಕೋ (ರಷ್ಯಾ) – ಕ್ಯಾನ್ಸರ್ ಲಸಿಕೆ ಮತ್ತು ಹೊಸ ಪೀಳಿಗೆಯ ‘ಇಮ್ಯುನೊಮಾಡ್ಯುಲೇಟರಿ’ ಔಷಧಿಗಳ ಅಭಿವೃದ್ಧಿಯ ಹಾದಿಯಲ್ಲಿ ನಾವು ತುಂಬಾ ಹತ್ತಿರ ಬಂದಿದ್ದೇವೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹೇಳಿದ್ದಾರೆ. ಈ ಔಷಧಿ ವಿಧಾನಗಳನ್ನು ಶೀಘ್ರದಲ್ಲೇ ವೈಯಕ್ತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಬಳಸಲು ಅಭಿವೃದ್ಧಿಪಡಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ಪುಟಿನ್ ಈ ಲಸಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿಲ್ಲ. ಆದ್ದರಿಂದ ಈ ಲಸಿಕೆ ನಿಖರವಾಗಿ ಯಾವಾಗ ಲಭ್ಯವಾಗುತ್ತದೆ ಮತ್ತು ಈ ಲಸಿಕೆಗಳು ಯಾವ ರೀತಿಯ ಕ್ಯಾನ್ಸರ್ ಅನ್ನು ತಡೆಯುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಕೆಲವು ವರ್ಷಗಳಿಂದ ಜಗತ್ತಿನ ಅನೇಕ ದೇಶಗಳು ಕ್ಯಾನ್ಸರ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ.