ಪ್ರತೀಕಗಳಿಂದ ಪ್ರಕ್ಷೇಪಿಸುವ ಸೂಕ್ಷ್ಮ ಸ್ಪಂದನಗಳು ಸಮಾಜವು ಆ ಪ್ರತೀಕಗಳತ್ತ ನೋಡುವ ದೃಷ್ಟಿಯನ್ನು ನಿರ್ಧರಿಸುತ್ತದೆ

ಪ್ರತಿಯೊಂದು ಪ್ರತೀಕದಿಂದ ಸೂಕ್ಷ್ಮ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿರುತ್ತವೆ. ಈ ಸೂಕ್ಷ್ಮ ಸ್ಪಂದನಗಳು ಸಕಾರಾತ್ಮಕ ಅಥವಾ ನಕಾರಾತ್ಮಕ ಇರಬಹುದು. ಹೆಚ್ಚಿನ ಧಾರ್ಮಿಕ ಮುಖಂಡರು ತಮ್ಮ ಧರ್ಮದ ಪ್ರತೀಕಗಳಿಂದ ಪಕ್ಷೇಪಿತವಾಗುವ ಸೂಕ್ಷ್ಮ ಸ್ಪಂದನಗಳತ್ತ ಗಮನ ನೀಡುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಾಕ್ಷರಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ಪರಾತ್ಪರ ಗುರು ಡಾಕ್ಟರರ ಹಸ್ತಾಕ್ಷರಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಬದಲಾಗಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು.

ಶೇ. ೫೯ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಅಪಾಲಾ ಔಂಧಕರ (೧೪ ವರ್ಷ) ಇವಳು ಮಾಡಿದ ಭರತನಾಟ್ಯಮ್ ನೃತ್ಯದ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಸೂಕ್ಷ್ಮದಲ್ಲಿ ಅನುಭವಿಸಿದ ಪರಿಣಾಮ

ಉಡುಗೆ ತೊಡುಗೆಗಳಿಂದ ನೃತ್ಯದ ಮೇಲೆ ಯಾವ ಪರಿಣಾಮವಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲು ಅವಳು ಪ್ರಯೋಗವೆಂದು ಪ್ರತಿಯೊಂದು ಗೀತೆಯ ಮೇಲಿನ ನೃತ್ಯವನ್ನು ‘ಭರತನಾಟ್ಯಮ್‌ನ ಪ್ರಚಲಿತ ಉಡುಪುಗಳನ್ನು ಧರಿಸಿ ಮತ್ತು ಸೀರೆಯನ್ನು ಉಟ್ಟುಕೊಂಡು ಹೀಗೆ ಎರಡೂ ಉಡುಗೆಗಳಲ್ಲಿ ಪ್ರಸ್ತುತ ಪಡಿಸಿದಳು.

ಸಾಧನೆ ಮತ್ತು ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯಿಂದ ಆತ್ಮಹತ್ಯೆಯನ್ನು ತಡೆಯಬಹುದು !

ಜಗತ್ತಿನಲ್ಲಿ ಪ್ರತಿ ವರ್ಷ ಸರಿಸುಮಾರು 8 ಲಕ್ಷ ವ್ಯಕ್ತಿಗಳು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ, ಅಂದರೆ ಪ್ರತೀ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ! ಇದರಲ್ಲಿ ಹೆಚ್ಚಿನ ವ್ಯಕ್ತಿಗಳು ಶಾರೀರಿಕವಾಗಿ ಅನಾರೋಗ್ಯವಿದ್ದುದರಿಂದ ಹೀಗೆ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ

ಶ್ರೀಲಂಕಾದಲ್ಲಿ ಜರುಗಿದ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ‘ಆನಂದಪ್ರಾಪ್ತಿ ಈ ವಿಷಯದ ಮೇಲಿನ ಸಂಶೋಧನಾ ಪ್ರಬಂಧ ಮಂಡನೆ !

ಮನಸ್ಸಿನ ಸ್ವಭಾವದೋಷಗಳ ಸಂಸ್ಕಾರವನ್ನು ನಾಶಗೊಳಿಸಲು ಪರಾತ್ಪರ ಗುರು ಡಾ ಆಠವಲೆಯವರು ಈ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಕೈಕೊಂಡ ಒಂದು ಸಮೀಕ್ಷೆಯಲ್ಲಿ 50 ವ್ಯಕ್ತಿಗಳು ಭಾಗವಹಿಸಿದ್ದರು.

ರಾಮನಾಥಿಯ (ಗೋವಾ) ಸನಾತನ ಆಶ್ರಮದ ಧ್ಯಾನಮಂದಿರದಲ್ಲಿ ಮಾಡಲಾದ ಅಗ್ನಿಹೋತ್ರದ ವಿಷಯದಲ್ಲಿ ಮಾಡಿದ ಸಂಶೋಧನೆ !

ಅಗ್ನಿಹೋತ್ರವು ಯಜ್ಞದ ಎಲ್ಲಕ್ಕಿಂತ ಮೊದಲಿನ, ಸರ್ವಾಂಗಪೂರ್ಣ ಸಹಜರೂಪವಾಗಿದೆ ಹಾಗೂ ಆಚರಿಸಲು ಸುಲಭವೂ ಆಗಿದೆ. ಅಗ್ನಿಹೋತ್ರದಿಂದ ವಾತಾವರಣದಲ್ಲಿರುವ ರಜ-ತಮ ಕಣಗಳ ವಿಘಟನೆಯಾಗಿ ವಾತಾವರಣವನ್ನು ಶುದ್ಧ ಮತ್ತು ಚೈತನ್ಯ ಮಯವಾಗುತ್ತದೆ.

ವ್ಯಕ್ತಿಯ ಉಡುಪನ್ನು ಅವನ ಅಳತೆಗನುಸಾರ ಯೋಗ್ಯ ಪದ್ಧತಿಯಲ್ಲಿ ಹೊಲಿದರೆ ಉಡುಪಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಸಾತ್ತ್ವಿಕತೆ ಬರುತ್ತದೆ, ಎಂಬುದನ್ನು ಕಲಿಸಿದ ಪರಾತ್ಪರ ಗುರು ಡಾ. ಆಠವಲೆ !

ಮೊದಲ ಅಂಗಿಯ ಅನುಭವದಿಂದ ಕಲಿತು ಎರಡನೇ ಅಂಗಿಯಲ್ಲಿ ಬದಲಾವಣೆ ಮಾಡುವಾಗ ಸೌ. ಪಾರ್ವತಿಯವರು ಪರಾತ್ಪರ ಗುರು ಡಾಕ್ಟರರು ಹೇಳಿದಂತೆ ಇನ್ನೊಂದು ಅಂಗಿಯನ್ನು ಪೂರ್ಣ ಬಿಡಿಸಿ ಪುನಃ ಅದರ ಕಟ್ಟಿಂಗ್‌ನಲ್ಲಿ ಸುಧಾರಣೆ ಮಾಡಿಕೊಂಡು ಹೊಲಿದರು. ಸಾಮಾನ್ಯವಾಗಿ ‘ರೆಡಿಮೇಡ್ ಅಂಗಿಗಳ ಕಟ್ಟಿಂಗ್ ಯೋಗ್ಯ ರೀತಿಯಲ್ಲಿ ಆಗಿರುವುದಿಲ್ಲ ಹಾಗಾಗಿ  ಅದನ್ನು ಸುಧಾರಣೆ ಮಾಡಲು ತುಂಬಾ ಕಷ್ಟವಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆಯವರ ವೈದ್ಯಕೀಯ ಉಪಚಾರಕ್ಕಾಗಿ ಉಪಯೋಗಿಸಿದ ವಸ್ತುಗಳ ಮೇಲೆ, ಅವರ ಚೈತನ್ಯದ ಸಕಾರಾತ್ಮಕ ಪರಿಣಾಮವಾಗುವುದು ಮತ್ತು ಅವರ ಮೇಲೆ ಉಪಚಾರ ಮಾಡಿದ ಸಾಧಕರಿಗಾದ ಆಧ್ಯಾತ್ಮಿಕ ಲಾಭಗಳು

ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿ ಮೊದಲು (ಚಿಕಿತ್ಸೆಯ ಮೊದಲು) ಇನ್ಫ್ರಾರೆಡ್ ಮತ್ತು ಅಲ್ಟ್ರಾವೈಲೆಟ್ ಈ ಎರಡೂ ನಕಾರಾತ್ಮಕ ಊರ್ಜೆಗಳಿದ್ದವು ಮತ್ತು ಅವುಗಳ ಪ್ರಭಾವಲಯಗಳು ಅನುಕ್ರಮವಾಗಿ ೨.೪೨ ಮೀಟರ್ ಮತ್ತು ೧.೪೧ ಮೀಟರ್ ಇದ್ದವು. ಸಾಧಕನು ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಚಿಕಿತ್ಸೆ ಮಾಡಿದ ನಂತರ ಅವನಲ್ಲಿನ ಎರಡೂ ನಕಾರಾತ್ಮಕ ಊರ್ಜೆಗಳು ಇಲ್ಲವಾದವು.

ಸಾಧಕರನ್ನು ನಿರ್ಗುಣ ಸ್ಥಿತಿಗೆ ಕರೆದೊಯ್ಯಲು ಸಹಾಯ ಮಾಡುವ ‘ನಿರ್ವಿಚಾರ’ ಈ ಜಪವನ್ನು ಕೇಳಿ ಏನೆನಿಸುತ್ತದೆ ? ಎಂದು ತಿಳಿಸಿ !

‘ನಿರ್ವಿಚಾರ’ ಇದು ಗುರುಕೃಪಾಯೋಗದಲ್ಲಿ ಎಲ್ಲಕ್ಕಿಂತ ಕೊನೆಯ ನಾಮಜಪವೆಂದು ಹೇಳಲಾಗಿದೆ. ಈ ಜಪವನ್ನು ಮಾಡುವುದರಿಂದ ಸಾಧಕನಿಗೆ ಕೊನೆಯ ಸ್ತರದ ನಾಮಜಪದ ಮುಖ ಪರಿಚಯವಾಗಬೇಕೆಂದು ಈ ಜಪವನ್ನು ಹೇಳಲಾಗಿದೆ.

ಔದುಂಬರ, ಕೃಷ್ಣತುಳಸಿ ಮತ್ತು ರಾಮತುಳಸಿ ಇವುಗಳಿಂದ ಉತ್ತರೋತ್ತರ ಹೆಚ್ಚೆಚ್ಚು ಸಕಾರಾತ್ಮಕ ಸ್ಪಂದನಗಳ ಪ್ರಕ್ಷೇಪಣೆಯಾಗುವುದು

ಮಹರ್ಷಿಗಳು ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ರಾಮ ಮತ್ತು ಕೃಷ್ಣ ಈ ಎರಡೂ ತತ್ತ್ವಗಳಿವೆ, ಎಂದು ಹೇಳಿದ್ದಾರೆ. ‘ರಾಮ ಮತ್ತು ಕೃಷ್ಣ ಈ ಎರಡೂ ತತ್ತ್ವಗಳಿಂದ ಸನಾತನದ ಸಾಧಕರಿಗೆ ಲಾಭವಾಗಬೇಕೆಂದು, ಹಾಗೆಯೇ ಶ್ರೀಕೃಷ್ಣ ಮತ್ತು ಶ್ರೀರಾಮ ಈ ಅವತಾರಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯಕ್ಕೆ ಆಶೀರ್ವಾದ ಲಭಿಸಬೇಕು, ಎಂದು ಮಹರ್ಷಿಗಳು ರಾಮತುಳಸಿ ಮತ್ತು ಕೃಷ್ಣತುಳಸಿಯ ಸಸಿಗಳನ್ನು ಕುಂಡಗಳಲ್ಲಿ ವಿಧಿಪೂರ್ವಕ ನೆಡಲು ಹೇಳಿದ್ದರು.