ರಾಜ್ಯಸಭೆಯಲ್ಲೂ ವಕ್ಫ್ ಸುಧಾರಣಾ ಮಸೂದೆಯ ಕುರಿತು ರಾತ್ರಿ ತಡರಾತ್ರಿಯವರೆಗೂ ಚರ್ಚೆ ನಡೆಯಿತು!

ಲೋಕಸಭೆಯಲ್ಲಿ ಏಪ್ರಿಲ್ ೨ ರಂದು ರಾತ್ರಿ ಎರಡೂವರೆ ಗಂಟೆಗೆ ಮಸೂದೆ ಅಂಗೀಕಾರ!

ನವದೆಹಲಿ – ಲೋಕಸಭೆಯಲ್ಲಿ ಏಪ್ರಿಲ್ ೨ ರಂದು ಬೆಳಿಗ್ಗೆ ಮಂಡಿಸಲಾದ ವಕ್ಫ್ ಸುಧಾರಣಾ ಮಸೂದೆಯು ರಾತ್ರಿ ಎರಡೂವರೆ ಗಂಟೆಗೆ ಮತದಾನದ ಮೂಲಕ ೨೮೯ ವಿರುದ್ಧ ೨೩೨ ಮತಗಳಿಂದ ಅಂಗೀಕರಿಸಲ್ಪಟ್ಟಿತು. ನಂತರ, ಏಪ್ರಿಲ್ ೩ ರಂದು ಬೆಳಿಗ್ಗೆ ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರು ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು. ಇದರ ಮೇಲೂ ರಾತ್ರಿ ತಡರಾತ್ರಿಯವರೆಗೂ ಚರ್ಚೆ ನಡೆಯಿತು. ಬೆಳಿಗ್ಗೆಯಿಂದ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಭಾರತವನ್ನು ಇಸ್ಲಾಮಿ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತಿದ್ದೀರಾ? – ನಿಶಿಕಾಂತ್ ದುಬೆ, ಸಂಸದ, ಬಿಜೆಪಿ

ಲೋಕಸಭೆಯಲ್ಲಿ ಮಸೂದೆಯ ಚರ್ಚೆಯ ಸಂದರ್ಭದಲ್ಲಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, “೧೯೫೪ ರಲ್ಲಿ ಸಂಸತ್ತಿನ ಸದಸ್ಯರು ಮಸೂದೆಯನ್ನು ವಿರೋಧಿಸಿದರೂ, ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಓಲೈಸಲು ವಕ್ಫ್ ಕಾಯ್ದೆಯನ್ನು ಅಂಗೀಕರಿಸಿತು. ಭಾರತದಲ್ಲಿ ವಕ್ಫ್‌ಗೆ ಯಾವ ಪ್ರಮಾಣದ ಅಧಿಕಾರಗಳಿವೆ, ಅದೇ ಅಧಿಕಾರವನ್ನು ಬೇರೆ ಯಾವುದೇ ದೇಶದಲ್ಲಿ ನೀಡಲಾಗಿಲ್ಲ. ನೀವು ಭಾರತವನ್ನು ಇಸ್ಲಾಮಿ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತಿದ್ದೀರಾ?” ಎಂದು ಪ್ರಶ್ನಿಸಿದರು.