ನವದೆಹಲಿ – ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾದರೆ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ನ್ಯಾಯಾಲಯದ ಮೊರೆ ಹೋಗಿ ಮಸೂದೆಯನ್ನು ಪ್ರಶ್ನಿಸಲಿದೆ. “ನಮ್ಮ ಕಡೆ ಸಾಂವಿಧಾನಿಕ ಪುರಾವೆಗಳು ಆಧಾರವಾಗಿರುವುದರಿಂದ ನಮಗೆ ನ್ಯಾಯ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾದ ನಂತರ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಹೇಳಿಕೆ ನೀಡಿದರು.
ಮೌಲಾನಾ ಮಹಾಲಿ ಮುಂದೆ ಮಾತನಾಡಿ, ನಿತೀಶ್ ಕುಮಾರ್ ಅವರ ಜನತಾದಳ (ಸಂಯುಕ್ತ) ಪಕ್ಷ ಮತ್ತು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷವು ಮಸೂದೆಯನ್ನು ವಿರೋಧಿಸಬಹುದು ಎಂದು ಮುಸ್ಲಿಮರು ಆಶಿಸಿದ್ದರು; ಆದರೆ ಅದು ಹಾಗಾಗಲಿಲ್ಲ, ಒಂದು ವೇಳೆ ಎಲ್ಲಾ ಪಕ್ಷಗಳು ಈ ಮಸೂದೆಯನ್ನು ಬಲವಾಗಿ ಮತ್ತು ದೃಢವಾದ ಸಂಗತಿಗಳೊಂದಿಗೆ ವಿರೋಧಿಸಿದ್ದರೆ ಉತ್ತಮವಾಗುತ್ತಿತ್ತು ಎಂದವರು ಬೇಸರ ವ್ಯಕ್ತಪಡಿಸಿದರು.
ಸಂಪಾದಕೀಯ ನಿಲುವುನ್ಯಾಯಾಲಯಕ್ಕೆ ಹೋಗುವ ಹಕ್ಕು ಪ್ರತಿಯೊಬ್ಬರಿಗೂ ಇದೆ; ಆದರೆ ನ್ಯಾಯಾಲಯದ ತೀರ್ಪು ಅವರ ವಿರುದ್ಧವಾಗಿ ಬಂದರೆ, ಮುಸ್ಲಿಮರು ಅದನ್ನು ಸ್ವೀಕರಿಸುತ್ತಾರೆಯೇ? ಶ್ರೀ ರಾಮ ಜನ್ಮಭೂಮಿಯ ನಿರ್ಧಾರವು ಅವರ ವಿರುದ್ಧ ಬಂದ ನಂತರವೂ, ಇದುವರೆಗೂ ಅವರು ಆ ನಿರ್ಣಯವನ್ನು ಮನಃ ಪೂರ್ವಕವಾಗಿ ಸ್ವೀಕರಿಸಿಲ್ಲ, ಎಂಬುದು ಪದೇ ಪದೇ ಕಂಡುಬರುತ್ತಿದೆ! |