B’desh Sharia Law Demand : ಬಾಂಗ್ಲಾದೇಶದಲ್ಲಿ ಶರಿಯತ್ ಕಾನೂನು ಜಾರಿಗೊಳಿಸಲು ಇಸ್ಲಾಮಿ ಕಟ್ಟರವಾದಿಗಳ ಒಗ್ಗಟ್ಟು !

ಬಾಂಗ್ಲಾದೇಶದಲ್ಲಿ ಶರಿಯತ್ ಕಾನೂನು ಜಾರಿಗೊಳಿಸಲು ಇಸ್ಲಾಮಿ ಕಟ್ಟರವಾದಿಗಳ ಒಗ್ಗಟ್ಟು !

ಢಾಕಾ – ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಲು ಸಹಾಯ ಮಾಡಿದ ಇಸ್ಲಾಮಿ ಕಟ್ಟರವಾದಿ ಸಂಘಟನೆಗಳು ದೇಶದಲ್ಲಿ ಶರಿಯತ ಕಾನೂನು ಜಾರಿಗೊಳಿಸಲು ಸಕ್ರಿಯವಾಗಿವೆ. ಅವರು ಬಾಂಗ್ಲಾದೇಶವನ್ನು ಇಸ್ಲಾಮಿ ಕಟ್ಟರವಾದದತ್ತ ತಳ್ಳುವಲ್ಲಿ ನಿರತರಾಗಿದ್ದಾರೆ. ಕಟ್ಟರವಾದಿ ಇಸ್ಲಾಮಿ ನಾಯಕರು ಬಾಂಗ್ಲಾದೇಶದಲ್ಲಿ ಇಸ್ಲಾಮಿ ಸರಕಾರ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಂದು ನಗರದಲ್ಲಿ ಇಸ್ಲಾಮಿ ಕಟ್ಟರವಾದಿಗಳು ಯುವತಿಯರು ಫುಟ್ಬಾಲ್ ಆಡಲು ಸಾಧ್ಯವಿಲ್ಲ ಎಂದು ಘೋಷಿಸಿದ್ದಾರೆ. ಮತ್ತೊಂದು ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರು ತಲೆ ಮುಚ್ಚಿಕೊಳ್ಳದಿದ್ದರಿಂದ ಆಕೆಗೆ ಕಿರುಕುಳ ನೀಡಲಾಯಿತು.

ಬಾಂಗ್ಲಾದೇಶದಲ್ಲಿ ಕಟ್ಟರವಾದ ಹೆಚ್ಚುತ್ತಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ

ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ಸ್ಥಾಪನೆಯಾದ ನಂತರ ಅಲ್ಲಿ ಕಟ್ಟರವಾದಿಗಳಿಗೆ ಮುಕ್ತ ಅವಕಾಶ ಸಿಕ್ಕಿದೆ ಎಂದು ವರದಿ ಮಾಡಿದೆ. ‘ಇಸ್ಲಾಂನಲ್ಲಿ ನಂಬಿಕೆ ಇಡದ ಅಥವಾ ಇಸ್ಲಾಮಿ ಸಿದ್ಧಾಂತಕ್ಕೆ ವಿರುದ್ಧವಾಗಿ ವರ್ತಿಸುವವರು ಶಿಕ್ಷೆಗೆ ಗುರಿಯಾಗುತ್ತಾರೆ’ ಎಂಬ ವಿಚಾರಸರಣಿಯ ಜನರು ದೇಶವನ್ನು ವಶಪಡಿಸಿಕೊಳ್ಳಲು ಬಯಸುತ್ತಿದ್ದಾರೆ, ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಾಂಗ್ಲಾದೇಶದ ಹೊಸ ಸಂವಿಧಾನವನ್ನು ಬರೆಯಲಾಗುತ್ತಿದೆ. ಸಂವಿಧಾನದಲ್ಲಿ ‘ಜಾತ್ಯತೀತವಾದ’ ಎಂಬ ಪದವನ್ನು ತೆಗೆದುಹಾಕಲಾಗುವುದು ಮತ್ತು ದೇಶವನ್ನು ಇಸ್ಲಾಮಿ ತತ್ವಗಳ ಪ್ರಕಾರ ನಡೆಸಲು ಒತ್ತು ನೀಡಲಾಗುವುದು. ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ನಂತರ ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಅಲ್ಲಿನ ಕಟ್ಟರವಾದಿ ಸಂಘಟನೆಗಳು ಇದರ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಈಗಾಗಲೇ ಕಟ್ಟರವಾದವು ಹೆಚ್ಚಾಗಿದೆ. ಇದರಿಂದಾಗಿ ಅಲ್ಲಿನ ಹಿಂದೂಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲಿ ಕಟ್ಟರವಾದಿಗಳ ಕೈಗೆ ಅಧಿಕಾರ ಸಿಕ್ಕರೆ ಅಲ್ಲಿನ ಹಿಂದೂಗಳು ನಾಮಾವಶೇಷವಾಗುತ್ತಾರೆ; ಆದರೆ ಅದರೊಂದಿಗೆ ಭಾರತದ ಭದ್ರತೆಗೂ ಅದು ಅಪಾಯಕಾರಿಯಾಗಿದೆ. ಆದ್ದರಿಂದ ಭಾರತ ಸರಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸುವುದು ಅವಶ್ಯಕವಾಗಿದೆ!