ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ‘ಹಾರರ್ ಮೂವೀಸ್’ ಕುರಿತು ಸಂಶೋಧನೆಯು ‘ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವಿಜ್ಞಾನ ಪರಿಷದ್‌ನಲ್ಲಿ ಮಂಡನೆ !
ಹಾರರ್ (ಭೂತದ) ಚಲನಚಿತ್ರಗಳನ್ನು ನೋಡುವವರಿಗೆ ಅವು ನಮ್ಮ ಮೇಲೆ ಎಷ್ಟು ಪರಿಣಾಮ ಬೀರುತ್ತವೆ, ಎಂಬುದು ತಿಳಿದಿರುವುದಿಲ್ಲ. ಹೇಗೆ ಒಳ್ಳೆಯದರತ್ತ ಒಳ್ಳೆಯದು ಆಕರ್ಷಿತವಾಗುತ್ತದೆ ಮತ್ತು ಕೆಟ್ಟದರತ್ತ ಕೆಟ್ಟದ್ದು ಆಕರ್ಷಿತವಾಗುತ್ತದೆ. ಹಾಗೆಯೇ ಬಹಳಷ್ಟು ನಕಾರಾತ್ಮಕತೆ ಹೊಂದಿರುವ ಹಾರರ್‌ನ ‘ಸೆಟ್’, ಅದರಲ್ಲಿ ಭೂತಬಾಧೆ ಆಗಿರುವ ಪಾತ್ರವನ್ನು ನಿರ್ವಹಿಸುವ ನಟ ಅಥವಾ ಅಂತಹ ಭಯಾನಕತೆಯನ್ನು ನೋಡುವ ಪ್ರೇಕ್ಷಕರು ಇವರತ್ತ ನಕಾರಾತ್ಮಕ ಶಕ್ತಿಯು ದೊಡ್ಡ ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ. ಅದರಿಂದಾಗಿ ಸಂಹಿತೆಯ ಲೇಖರು, ನಿರ್ದೇಶಕರು ಮತ್ತು ನಟರ ಮೂಲಕ ಹೆಚ್ಚು ಹೆಚ್ಚು ನಕಾರಾತ್ಮಕತೆ ಪ್ರಕ್ಷೇಪಿಸುವ ಚಲನಚಿತ್ರಗಳು ನಿರ್ಮಾಣವಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಅವರು ತುರ್ಕಸ್ಥಾನದ ಇಸ್ತಾಂಬುಲ್‌ನಲ್ಲಿ ಆಯೋಜಿಸಲಾಗಿದ್ದ ‘ಸಿಕ್ಸಥ್ ಇಂಟರ್‌ನ್ಯಾಶನಲ್ ಇಂಟರ್‌ಡಿಸಿಪ್ಲಿನರಿ ಕಾನ್ಫರೆನ್ಸ್ ಆನ್ ಮೆಮೊರಿ ಅಂಡ್ ದಿ ಪಾಸ್ಟ್’ ಪರಿಷದ್‌ನಲ್ಲಿ ಮಾತನಾಡುತ್ತಿದ್ದರು. ಅವರು ‘ಹಾರರ್ ಚಲನಚಿತ್ರ ನಮ್ಮ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಏನಾದರೂ ಪರಿಣಾಮ ಬೀರುತ್ತದೆಯೇ ?’ ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರು ಈ ಶೋಧಪ್ರಬಂಧದ ಲೇಖಕರಾಗಿದ್ದರೆ, ಶ್ರೀ. ಶಾನ್ ಕ್ಲಾರ್ಕ್ ಸಹಲೇಖಕರಾಗಿದ್ದಾರೆ.
ಶ್ರೀ. ಕ್ಲಾರ್ಕ್ ಇವರು ‘ಪ್ರಭಾವಳಿ ಮತ್ತು ಶಕ್ತಿ ಮಾಪನ ಯಂತ್ರ’ (ಯೂನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)), ಬಯೋವೆಲ್ (Biowell), ಮತ್ತು ಸೂಕ್ಷ್ಮಪರೀಕ್ಷಣೆಯ ಮೂಲಕ ಹಾರರ್ ಮೂವಿಸ್‌ನಿಂದ ಆಗುವ ಸೂಕ್ಷ್ಮ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿದ ಸಂಶೋಧನೆಯ ನಿಸ್ಕರ್ಷವನ್ನು ಪ್ರಸ್ತುತಪಡಿಸಿದರು.
‘ಯು.ಎ.ಎಸ್’ ಪರೀಕ್ಷಣೆ : ಪರೀಕ್ಷಣೆಯ ಅಂತರ್ಗತ ಪ್ರಯೋಗಾಲಯದ ಸ್ಟುಡಿಯೊದಲ್ಲಿ ಹಾರರ್ ಮೂವಿಸ್‌ಅನ್ನು ವೀಕ್ಷಿಸಿದ 17 ವ್ಯಕ್ತಿಗಳಲ್ಲಿ ನಕಾರಾತ್ಮಕತೆಯಲ್ಲಿ ಸರಾಸರಿ ಶೇ. 107 ರಷ್ಟು ಹೆಚ್ಚಳವಾಯಿತು. ಕೆಲವು ಪ್ರಕರಣಗಳಲ್ಲಿ ಇದು ಶೇ. 375 ರಷ್ಟು ಹೆಚ್ಚಳವಾಗಿದೆ. ಪ್ರಯೋಗದ ಮೊದಲು ಯಾವ ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವಳಿ (ಔರಾ) ಇತ್ತೊ, ಅವರಲ್ಲಿ ಅದು ಶೇ. 60 ರಷ್ಟು ಇಳಿಕೆ ಕಂಡುಬಂದರೆ, ಕೆಲವರ ಸಕಾರಾತ್ಮಕ ಶಕ್ತಿಯ ಪರಿಣಾಮವು ಸಂಪೂರ್ಣವಾಗಿ ನಾಶವಾಗಿರುವುದು ಕಂಡುಬಂದಿದೆ.
‘ಬಯೋವೆಲ್’ ಮೂಲಕ ಮಾಡಿದ ಅಧ್ಯಯನ : ಚಲನಚಿತ್ರವನ್ನು ವೀಕ್ಷಿಸುವ ಮೊದಲು ಒಬ್ಬ ವ್ಯಕ್ತಿಯು ಮಾಡಿದ ಪರೀಕ್ಷಣೆಯಲ್ಲಿ, ಅವನ ಎಲ್ಲಾ ಚಕ್ರಗಳು ಸಾಮಾನ್ಯ ರೇಖೆಯಲ್ಲಿತ್ತು. ಅವು ಗಾತ್ರದಲ್ಲಿಯೂ ಬಹಳ ದೊಡ್ಡದಾಗಿದ್ದವು. ಇದರರ್ಥ ವ್ಯಕ್ತಿಯು ಸ್ಥಿರ ಮತ್ತು ಶಕ್ತಿವಂತನಾಗಿದ್ದನು. ಚಲನಚಿತ್ರವನ್ನು ವೀಕ್ಷಿಸಿದ ನಂತರ, ಆತನ ಚಕ್ರಗಳು ಅಸ್ತವ್ಯಸ್ತವಾಗಿರುವಂತೆ ಕಂಡುಬಂದಿತು, ಅವುಗಳ ಗಾತ್ರವೂ ಚಿಕ್ಕದಾಗಿತ್ತು, ಅಂದರೆ ಆ ವ್ಯಕ್ತಿಯು ಅಸ್ಥಿರ ಮತ್ತು ಅವನ ಸಾಮಾನ್ಯ ಸಾಮರ್ಥ್ಯ ಕಡಿಮೆಯಾಗಿರುವುದು ಕಂಡುಬಂದಿತು. ಈ ಸಂಶೋಧನೆಯಲ್ಲಿ ‘ಹಾರರ್ ಮೂವಿಸ್’ಅನ್ನು ವೀಕ್ಷಿಸಿದ್ದರಿಂದ ಕೇವಲ ಭಾವನಾತ್ಮಕ ಪರಿಣಾಮಗಳಾಗದೇ ಸೂಕ್ಷ್ಮ ಸ್ಪಂದನಗಳ ಮಟ್ಟದಲ್ಲಿನ ಭೀಕರ ಪರಿಣಾಮವಾಗುವ ಬಗ್ಗೆ ನಮಗೆ ತಿಳಿಯುವುದೂ ಇಲ್ಲ. ಸೂರ್ಯಾಸ್ತದ ನಂತರ ಕೆಟ್ಟ ಶಕ್ತಿಗಳ ಪ್ರಭಾವ ವಾತಾವರಣದ ಮೇಲೆ ಹೆಚ್ಚು ಇರುವುದರಿಂದ ಆ ಸಮಯದಲ್ಲಿ ಇಂತಹ ಚಲನಚಿತ್ರಗಳನ್ನು ನೋಡುವುದು ಹೆಚ್ಚು ಅಪಾಯಕಾರಿಯಾಗಿದೆ.
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. * ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |