ವಿವಿಧ ರೋಗಗಳಿಗೆ ಉಪಚಾರ ಮಾಡಬಲ್ಲ ಸಂಗೀತದ ರಾಗಗಳಿಂದ ರೋಗಿಗಳು ಹಾಗೂ ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಗಳ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡುವ ಪ್ರಯೋಗ !

ನೃತ್ಯ ಮತ್ತು ಸಂಗೀತದ ವಿಷಯದಲ್ಲಿ  ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಸಂಗೀತ ಮತ್ತು ನೃತ್ಯಗಳಿಗೆ ಸಂಬಂಧಿಸಿದ ಪ್ರಯೋಗಗಳ ಸೂಕ್ಷ್ಮದಲ್ಲಿನ ವಾರ್ತೆ (ಸೂಕ್ಷ್ಮ-ವಾರ್ತೆ) !

ಈ ಜಗತ್ತಿನಲ್ಲಿ ಕೆಲವು ವಿಷಯಗಳು ಕಣ್ಣುಗಳಿಗೆ ಕಾಣಿಸುತ್ತವೆ, ಕೆಲವು ಕಾಣಿಸುವುದಿಲ್ಲ. ‘ಯಾವ ವಿಷಯಗಳು ಕಣ್ಣಿಗೆ ಕಾಣಿಸುವುದಿಲ್ಲವೋ, ಅವು ಅಸ್ತಿತ್ವದಲ್ಲಿಲ್ಲ, ಎಂದಾಗುವುದಿಲ್ಲ, ಉದಾ. ಗಾಳಿ ಕಣ್ಣುಗಳಿಗೆ ಕಾಣಿಸುವುದಿಲ್ಲ, ಅಂದರೆ ‘ಅದು ಇಲ್ಲವೆಂದು ಹೇಳುವ ಹಾಗಿಲ್ಲ. ಸಾಧನೆಯಿಂದ ಜೀವದ ಸಾತ್ತ್ವಿಕತೆ ಹೆಚ್ಚಾಗುತ್ತದೆ. ಸಾಧನೆ ಹೆಚ್ಚಾದಂತೆ ಸ್ಥೂಲ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನ ‘ಸೂಕ್ಷ್ಮದಲ್ಲಿನ ವಿಷಯಗಳು  ಅರಿವಾಗಲು ಆರಂಭವಾಗುತ್ತವೆ ಹಾಗೂ ಯಾವುದೇ ವಸ್ತುವಿನ ಒಳ್ಳೆಯ ಮತ್ತು ಕೆಟ್ಟ ಸ್ಪಂದನಗಳ ಅರಿವಾಗಲು ಆರಂಭವಾಗುತ್ತದೆ. ಸದ್ಯ ಸಮಾಜವು ಸಾತ್ತ್ವಿಕತೆಯಿಂದ ದೂರ ಹೋಗಿದೆ ಹಾಗೂ ಸಮಾಜದಲ್ಲಿ ರಜ-ತಮಾತ್ಮಕ ಚಲನವಲನವು ದೃಢವಾಗುತ್ತಿದೆ. ಸಂಗೀತ ಮತ್ತು ನೃತ್ಯದ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಇದನ್ನು ಸಮಾಜಕ್ಕೆ ತೋರಿಸಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ನಾವು ಸಂಗೀತ ಮತ್ತು ನೃತ್ಯದ ಮೇಲೆ ಸಂಶೋಧನಾತ್ಮಕ ಪ್ರಯೋಗವನ್ನು ಮಾಡಿದೆವು. ನಮಗೆ ಸೂಕ್ಷ್ಮದಲ್ಲಿ ಅರಿವಾಗಿರುವ ವಿಷಯವನ್ನು ಹಾಗೂ ‘ಯಾವುದು ಯೋಗ್ಯವಾಗಿದೆ ಎಂಬುದನ್ನು ಸಮಾಜಕ್ಕೆ ತಿಳಿಸುವ ಸಲುವಾಗಿ ಅದನ್ನು ವೈಜ್ಞಾನಿಕ ಉಪಕರಣಗಳ ಮೂಲಕವೂ ಸಿದ್ಧಪಡಿಸಿ ತೋರಿಸಲಾಗಿದೆ. ಇಲ್ಲಿ ಕೇವಲ ‘ಅಯೋಗ್ಯ ವಿಷಯಗಳ ಪರಿಣಾಮ ಹೇಗಾಗುತ್ತದೆ ?, ಎಂಬುದನ್ನು ತೋರಿಸುವ, ಅಂದರೆ ಸೂಕ್ಷ್ಮದ ವಿಷಯದ ಕೆಲವು ವಾರ್ತೆಗಳನ್ನು (ಸೂಕ್ಷ್ಮ ವಾರ್ತೆ) ಕೊಡುತ್ತಿದ್ದೇವೆ.

೧. ರಾಗ – ಮಧುವಂತಿ : ಸೊರಾಯಸಿಸ್೧.೧೦.೨೦೧೭ ರಂದು ಸಂಗೀತದ ವಿವಿಧ ರಾಗಗಳಿಂದ ವ್ಯಕ್ತಿಯ ಮೇಲಾಗುವ ಪರಿಣಾಮವನ್ನು ಅಭ್ಯಾಸ ಮಾಡಲು ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ಒಂದು ಪ್ರಯೋಗವನ್ನು ಮಾಡಲಾಯಿತು. ಅದರಲ್ಲಿ ವಿವಿಧ ರೋಗಗಳಿಗೆ ಉಪಚಾರ ಮಾಡುವ ರಾಗಗಳನ್ನು ಆಯಾಯ ರೋಗಗಳಿರುವ ಸಾಧಕರಿಗೆ ಮತ್ತು ತೀವ್ರ ತೊಂದರೆ ಇರುವ ಸಾಧಕರಿಗೆ ಕೇಳಿಸಲಾಯಿತು. ಆ ಸಮಯದಲ್ಲಿ ಗಮನಕ್ಕೆ ಬಂದ ವೈಶಿಷ್ಟ್ಯಪೂರ್ಣ ವಿಷಯಗಳನ್ನು ಮುಂದೆ ಕೊಡುತ್ತಿದ್ದೇವೆ.

೧ ಅ. ‘ಸೊರಾಯಸಿಸ್ ಈ ಚರ್ಮರೋಗವಿರುವ ೨ ಸಾಧಕರಿಗೆ ಬಂದಿರುವ ಅನುಭೂತಿ

ಇಬ್ಬರು ಸಾಧಕರಿಗೂ ಶರೀರ ಹಗುರ ಹಾಗೂ ಶೀತಲತೆಯ ಅನುಭವವಾಯಿತು. ಅದೇ ರೀತಿ ‘ತಮ್ಮ ಸಪ್ತಚಕ್ರಗಳು ಜಾಗೃತವಾಗುತ್ತಿವೆ, ಎನ್ನುವ ಅರಿವಾಯಿತು; ಆದರೆ ಅವರಿಗೆ ವಿಶುದ್ಧ ಚಕ್ರದ ಸ್ಥಾನದಲ್ಲಿ ತೊಂದರೆಯಾಗುತ್ತಿತ್ತು.

೧ ಆ. ಅನಿಷ್ಟ ಶಕ್ತಿಗಳ ತೀವ್ರ ತೊಂದರೆ ಇರುವ ೧೦ ಸಾಧಕರು

೧ ಆ ೧. ರಾಗದ ಸ್ಪಂದನಗಳ ಅರಿವಾಗುವುದು

೧ ಆ ೧ ಅ. ಪ್ರಯೋಗದಲ್ಲಿನ ೫ ಸಾಧಕರಿಗೆ ಬಾಯಿಯಲ್ಲಿ ಸಿಹಿರುಚಿಯ ಅನುಭವವಾಗುವುದು : ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಇವು ಒಟ್ಟಾಗಿರುತ್ತವೆ, ಎನ್ನುವ ಅಧ್ಯಾತ್ಮದ ಸಿದ್ಧಾಂತಕ್ಕನುಸಾರ ಮಧುವಂತಿ ರಾಗದ ಹೆಸರಿನಂತೆಯೆ ಆ ರಾಗದಲ್ಲಿ ಮಾಧುರ್ಯವಿದೆ. ಆದ್ದರಿಂದ ‘ಕೇಳಿಸಿರುವ ರಾಗ ಯಾವುದು, ಎಂದು ತಿಳಿಯದಿದ್ದರೂ ಪ್ರಯೋಗದಲ್ಲಿ ಭಾಗವಹಿಸಿದ ೧೦ ರಲ್ಲಿ ೫ ಸಾಧಕರಿಗೆ ಬಾಯಿಯಲ್ಲಿ ಸಿಹಿಯ ಅನುಭವವಾಯಿತು.

೧ ಆ ೧ ಆ. ಇಬ್ಬರು ಸಾಧಕಿಯರಿಗೆ ಸಂಪೂರ್ಣ ಶರೀರದಲ್ಲಿ ಅಥವಾ ಕುಂಡಲಿನಿ ಚಕ್ರಗಳಲ್ಲಿ ಸಂವೇದನೆಯ ಅರಿವಾಗುವುದು : ಓರ್ವ ಸಾಧಕಿಗೆ ಸಂಪೂರ್ಣ ಶರೀರದಲ್ಲಿ ಮತ್ತು ಇನ್ನೋರ್ವ ಸಾಧಕಿಗೆ ಸ್ವಾಧಿಷ್ಠಾನಚಕ್ರದಿಂದ ವಿಶುದ್ಧಚಕ್ರದವರೆಗೆ ಒಳ್ಳೆಯ ಸಂವೇದನೆಗಳ ಅರಿವಾಯಿತು.

೧ ಆ ೧ ಇ. ಒಬ್ಬ ಸಾಧಕನಿಗೆ ‘ಈ ರಾಗ ಆಪತತ್ತ್ವಕ್ಕೆ ಸಂಬಂಧಿಸಿದೆ, ಎಂದು ಅರಿವಾಯಿತು.

೧ ಆ ೨. ತೊಂದರೆದಾಯಕ ಅನುಭೂತಿ ಬರುವುದು

೧ ಆ ೨ ಅ. ಓರ್ವ ಸಾಧಕಿಗೆ ಅನಾಹತಚಕ್ರದಿಂದ ವಿಶುದ್ಧಚಕ್ರದವರೆಗೆ ಒತ್ತಡದ ಅರಿವಾಯಿತು.

೨. ರಾಗ – ವೃಂದಾವನೀ ಸಾರಂಗ : ಪಿತ್ತದ ರೋಗ

೨ ಅ. ಪಿತ್ತದ ರೋಗವಿರುವ ಇಬ್ಬರು ಸಾಧಕರಿಗೆ ಬಂದಿರುವ ಅನುಭೂತಿ

೨ ಅ ೧. ಒಬ್ಬ ಸಾಧಕನಿಗೆ ಅನಾಹತಚಕ್ರದ ಸ್ಥಾನದಲ್ಲಿ ಸಂವೇದನೆಯ ಅರಿವಾಗಿ ಅವನಿಂದ ತನ್ನಿಂತಾನೇ ಕೈಬೆರಳುಗಳ ಮುದ್ರೆ ಆಗುವುದು : ಇವರಲ್ಲಿ ಒಬ್ಬ ಸಾಧಕನಿಗೆ ಅನಾಹತಚಕ್ರದ ಸ್ಥಾನದಲ್ಲಿ ಸಂವೇದನೆಗಳ ಅರಿವಾಯಿತು. ಅವನಿಂದ ಕೈಯ ಮಧ್ಯದ ಬೆರಳು ಮತ್ತು ಹೆಬ್ಬೆರಳು ಜೋಡಿಸಲ್ಪಟ್ಟು ಸಿದ್ಧವಾಗುವ ಮುದ್ರೆ ತನ್ನಿಂತಾನೇ ಆಯಿತು ಮತ್ತು ಸ್ವಲ್ಪ ಹೊತ್ತಿನಲ್ಲಿ ಅವನ ಅನಾಮಿಕವು ತನ್ನಿಂತಾನೇ ಅಂಗೈಗೆ ತಗಲಿತ್ತು.

೨ ಅ ೨. ಇನ್ನೋರ್ವ ಸಾಧಕಿಗೆ ಏನೂ ಅನಿಸಲಿಲ್ಲ.

೨ ಆ. ಅನಿಷ್ಟ ಶಕ್ತಿಗಳ ತೀವ್ರ ತೊಂದರೆ ಇರುವ ೧೧ ಸಾಧಕರು

೨ ಆ ೧. ರಾಗದ ಸ್ಪಂದನಗಳ ಅರಿವಾಗುವುದು

೨ ಆ ೧ ಅ. ಅನಾಹತಚಕ್ರ ಮತ್ತು ಮಣಿಪುರ ಚಕ್ರದ ಸ್ಥಾನದಲ್ಲಿ ಅಥವಾ ಕೇವಲ ಮಣಿಪುರಚಕ್ರದ ಸ್ಥಾನದಲ್ಲಿ ಸಂವೇದನೆಯ ಅರಿವಾಗುವುದು : ಇಬ್ಬರು ಸಾಧಕಿಯರಿಗೆ ಮೊದಲು ಅನಾಹತಚಕ್ರವಿರುವಲ್ಲಿ ಸಂವೇದನೆಯ ಅರಿವಾಗುವುದು ನಂತರ ಮಣಿಪುರಚಕ್ರವಿರುವಲ್ಲಿ ಸಂವೇದನೆಯ ಅರಿವಾಯಿತು.

೨ ಅ ೧ ಆ. ಶರೀರಕ್ಕೆ ಶೀತಲತೆಯ ಅರಿವಾಗುವುದು : ಓರ್ವ ಸಾಧಕಿಗೆ ಶರೀರದ ಎಡ ಭಾಗದಲ್ಲಿ ಶೀತಲತೆಯ ಅನುಭವವಾಯಿತು. ಇತರ ೪ ಸಾಧಕರಿಗೆ ಸಂಪೂರ್ಣ ಶರೀರ ತಂಪಾಗಿರುವ ಅನುಭವವಾಯಿತು.

೨ ಆ ೨. ‘ಈ ರಾಗ ಯಾವ ಕಾಯಿಲೆಗೆ ಉಪಚಾರ ಮಾಡುತ್ತದೆ ?, ಎಂದು ಗೊತ್ತಿಲ್ಲದಿದ್ದರೂ ಅದು ಒಳಗಿಂದ ಅರಿವಾಗುವುದು ಅಥವಾ ಹಾಗೆಯೆ ಉಪಚಾರವಾಗುವುದು

ಅ. ಓರ್ವ ಸಾಧಕಿಗೆ ಮುಂಜಾನೆಯಿಂದ ಪಿತ್ತ ಹೆಚ್ಚಾಗಿದ್ದು ಈ ರಾಗವನ್ನು ಕೇಳಿದಾಗ ಅದು ಶಮನವಾಯಿತು.

ಆ. ‘ಈ ರಾಗ ಪಿತ್ತಕ್ಕೆ ಸಂಬಂಧಿತ ಅನಾರೋಗ್ಯಗಳಿಗೆ ಉಪಚಾರ ಮಾಡುತ್ತದೆ, ಎನ್ನುವ ವಿಷಯ ಸಾಧಕಿಯರಿಗೆ ತಿಳಿಯದಿದ್ದರೂ ಅವರು ಆ ವಿಷಯವನ್ನು ಹೇಳಿದರು.

ಸಾಧಕರಿಗೆ ಪ್ರತಿಯೊಂದು ರಾಗದ ವಿಷಯದಲ್ಲಿ ಬಂದಿರುವ ಅನುಭೂತಿಯು ಅವರ ಅನಾರೋಗ್ಯಕ್ಕೆ ಸಂಬಂಧಿಸಿದ ಕುಂಡಲಿನಿ ಶಕ್ತಿಗೆ ಸಂಬಂಧಿಸಿದ ಅನುಭೂತಿಗಳಾಗಿವೆ. ಅದರಿಂದ ಆಯಾಯ ಕುಂಡಲಿನಿ ಚಕ್ರಗಳ ಮೇಲೆ ಉಪಾಯವಾಗಿರುವುದರಿಂದ ಆಯಾಯ ಅನಾರೋಗ್ಯಕ್ಕೆ ಆಯಾಯ ರಾಗದಿಂದ ಪರಿಣಾಮವಾಗುತ್ತಿರುವುದು ಗಮನಕ್ಕೆ ಬಂತು. ಆದರೂ ಆ ರಾಗಗಳಿಂದ ಪ್ರತ್ಯಕ್ಷದಲ್ಲಿ ಅನಾರೋಗ್ಯದ ಮೇಲೆ ಉಪಚಾರವಾಗುತ್ತಿರುವುದು ಕಂಡುಬರಲಿಲ್ಲ. ಆದರೆ ಆ ರಾಗಗಳಿಂದ ಕುಂಡಲಿನಿಚಕ್ರಗಳಿಗೆ ಉಪಾಯವಾಗುವುದೆಂದರೆ, ಆ ವಿಕಾರದ ಮೇಲಾದ ಪರೋಕ್ಷ ಉಪಚಾರವಾಗಿದೆ.

೨ ಆ ೩. ರಾಗವನ್ನು ಕೇಳಿದಾಗ ಚೈತನ್ಯ ಸಿಕ್ಕಿರುವುದರಿಂದ ಅನಿಷ್ಟ ಶಕ್ತಿಗಳು ತೊಂದರೆಕೊಡುವುದು : ಓರ್ವ ಸಾಧಕಿಗೆ ತುಂಬಾ ವಾಕರಿಕೆ ಬಂದಂತಾಯಿತು ಹಾಗೂ ಅವಳ ಎರಡೂ ಕಣ್ಣುಗಳಲ್ಲಿ ನೀರು ಬಂತು.

ರಾಗ – ಮಿಯಾ ಮಲ್ಹಾರ : ಉಬ್ಬಸ

೩ ಅ. ಉಬ್ಬಸದ ಕಾಯಿಲೆಯಿರುವ ಇಬ್ಬರು ಸಾಧಕರಿಗೆ ಬಂದಿರುವ ಅನುಭೂತಿ

೩ ಅ ೧. ‘ಮಿಯಾ ಮಲ್ಹಾರ ಈ ರಾಗವನ್ನು ಕೇಳಿದಾಗ ಓರ್ವ ಸಾಧಕಿಗೆ ಉಸಿರಾಟ ಮಾಡುವಾಗ ಉಬ್ಬಸ ಬರುತ್ತಿರುವುದು ಕಡಿಮೆಯಾಗಿ ಅವಳು ಸರಾಗವಾಗಿ ಉಸಿರಾಡುವುದು, ರಾಗವನ್ನು ಕೇಳುವಾಗ ಅವಳ ನಾಮಜಪವು ಲಯಬದ್ಧವಾಗಿ ಆಗುತ್ತಿತ್ತು, ನಂತರ ಅವಳಿಗೆ ಧ್ಯಾನ ತಗಲುವುದು : ಉಬ್ಬಸದ ತೊಂದರೆ ಇರುವ ಸಾಧಕಿಗೆ ಈ ರಾಗವನ್ನು ಕೇಳುವ ಮೊದಲು ಉಸಿರಾಡುವಾಗ ಉಬ್ಬಸ ಬರುತ್ತಿತ್ತು, ರಾಗವನ್ನು ಕೇಳುವಾಗ ಅವಳ ನಾಮಜಪ ಲಯಬದ್ಧವಾಗಿ ಆಗುತ್ತಿತ್ತು. ನಂತರ ಅವಳಿಗೆ ಧ್ಯಾನ ತಗಲಿದುದರಿಂದ ‘ಆ ರಾಗವು ಯಾವಾಗ ಮುಗಿಯಿತು, ಎಂಬುದು ಅವಳಿಗೆ ತಿಳಿಯಲೇ ಇಲ್ಲ. ರಾಗವನ್ನು ಕೇಳಿ ಆದ ನಂತರ ಅವಳ ಉಸಿರಾಟವು ಸಹ ಮುಕ್ತವಾದಂತೆ ಆಗಿತ್ತು.

೩ ಅ ೨. ಈ ರಾಗದಿಂದ ಇನ್ನೊಬ್ಬ ಸಾಧಕನ ಮೇಲೆ ಏನೂ ಪರಿಣಾಮವಾಗಲಿಲ್ಲ.

– ಕು. ತೇಜಲ ಪಾತ್ರಿಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩.೧೦.೨೦೧೭)

೩ ಆ. ಅನಿಷ್ಟ ಶಕ್ತಿಯ ತೀವ್ರ ತೊಂದರೆ ಇರುವ ೧೧ ಸಾಧಕರು

೩ ಆ ೧. ರಾಗದ ಸ್ಪಂದನಗಳ ಅರಿವಾಗುವುದು ಅಥವಾ ಆ ರಾಗವನ್ನು ಗುರುತಿಸಲು ಸಾಧ್ಯವಾಗುವುದು

. ೧೧ ರಲ್ಲಿ ನಾಲ್ಕು ಸಾಧಕರಿಗೆ ಅನಾಹತಚಕ್ರದಲ್ಲಿ ಒಳ್ಳೆಯ ಸಂವೇದನೆ ಹಾಗೂ ಓರ್ವ ಸಾಧಕಿಗೆ ವೇದನೆಯ ಅರಿವಾಯಿತು.

ಓರ್ವ ಸಾಧಕಿಗೆ ವಿಶುದ್ಧಚಕ್ರದದ ಸ್ಥಾನದಲ್ಲಿ ಒಳ್ಳೆಯ ಸಂವೇದನೆಯ ಅರಿವಾಯಿತು. ೫ ಜನರಿಗೆ ಯಾವುದೇ ಚಕ್ರದಲ್ಲಿ ಸಂವೇದನೆಯ ಅರಿವಾಗಲಿಲ್ಲ.

. ಓರ್ವ ಸಾಧಕಿಗೆ ಅವಳು ಬಾಯಿ ಮುಚ್ಚಿಕೊಂಡಿದ್ದರೂ ಅವಳಿಗೆ ತುಟಿಯಲ್ಲಿ ತೇವಾಂಶವಿದ್ದಂತೆ ಅನುಭವವಾಗುತ್ತಿತ್ತು.

. ಎಲ್ಲ ಸಾಧಕರಿಗೆ ರಾಗವನ್ನು ಕೇಳುವಾಗ ತುಂಬಾ ಶೀತಲತೆ ಹಾಗೂ ಆನಂದದ ಅರಿವಾಗುತ್ತಿತ್ತು.

ಈ. ಒಬ್ಬ ಸಾಧಕನಿಗೆ ಈ ರಾಗದ ವಿಷಯದಲ್ಲಿ ಏನೂ ಗೊತ್ತಿಲ್ಲದಿದ್ದರೂ, ಅವನು ಅದನ್ನು ಯಾವತ್ತೂ ಕೇಳದಿದ್ದರೂ ಅದು ‘ಮಲ್ಹಾರ ರಾಗ ಆಗಿದೆಯೆಂದು ಗುರುತಿಸಿದನು.

೩ ಆ ೨. ರಾಗದ ವಿಷಯದಲ್ಲಿ ಅನುಭೂತಿ ಬರುವುದು

೩ ಆ ೨ ಅ. ತೊಂದರೆದಾಯಕ ಅನುಭೂತಿ ಓರ್ವ ಸಾಧಕಿಗೆ ಅನಾಹತಚಕ್ರದ ಸ್ಥಾನದಲ್ಲಿ ವೇದನೆಯ ಅರಿವಾಯಿತು.

೩ ಆ ೨ ಆ. ಒಳ್ಳೆಯ ಅನುಭೂತಿ ಓರ್ವ ಸಾಧಕಿಗೆ ಪ್ರಯೋಗದಲ್ಲಿ ಭಾಗವಹಿಸಿದ ಹಾಗೂ ಉಬ್ಬಸದ ಕಾಯಿಲೆ ಇರುವ ಓರ್ವ ಸಾಧಕಿ ಸಂಗೀತವನ್ನು ಕಲಿತು ಅವಳೇ ಹಾಡುತ್ತಿರುವ ಹಾಗೆ ಕಾಣಿಸಿತು ಓರ್ವ ಸಾಧಕಿಗೆ ‘ತಾವು ಆಕಾಶದಲ್ಲಿ ತುಂಬಾ ಮೇಲೆ ಹೋಗಿದ್ದೇವೆ, ಎಂದು ಕಾಣಿಸಿತು. ಆಗ ಅವಳ ನಾಮಜಪವು ಲಯಬದ್ಧವಾಗಿ ನಡೆಯುತ್ತಿತ್ತು.

೩ ಆ ೩. ರಾಗವನ್ನು ಕೇಳುವುದರಿಂದ ಉಪಚಾರವಾಗುವುದು : ಈ ರಾಗವನ್ನು ಕೇಳುವಾಗ ೧೧ ರಲ್ಲಿ ಮೂವರು ಸಾಧಕಿಯರ ಉಸಿರಾಟವು ಸರಾಗವಾಗಿ ನಡೆಯುತ್ತಿತ್ತು. ಅವರ ಉಸಿರಾಟವು ದೀರ್ಘವಾಗಿ ನಡೆಯುತ್ತಿತ್ತು ಹಾಗೂ ನಡುನಡುವೆ ಉಸಿರಾಟದ ಕಡೆಗೆ ಗಮನ ಹೋಗುತ್ತಿತ್ತು.

೪. ರಾಗ – ಮಾರು ಬಿಹಾಗ : ಬೆನ್ನು ನೋವು

೪ ಅ. ಬೆನ್ನು ನೋವಿನ ತೊಂದರೆ ಇರುವ ೨ ಸಾಧಕಿಯರಿಗೆ ಬಂದಿರುವ ಅನುಭೂತಿ

೪ ಅ ೧. ರಾಗದ ಆರಂಭದಲ್ಲಿ ಓರ್ವ ಸಾಧಕಿಯ ಅನಾಹತಚಕ್ರದ ಸ್ಥಾನದಲ್ಲಿ ಆಗುತ್ತಿದ್ದ ನೋವು ಶಮನವಾಯಿತು ಹಾಗೂ ಎರಡೂ ಕೈಗಳಿಂದ ಒಳ್ಳೆಯ ಶಕ್ತಿ ಸಿಗುತ್ತಿರುವುದರ ಅರಿವಾಗುವುದು : ರಾಗವನ್ನು ಕೇಳುವಾಗ ಆರಂಭದಲ್ಲಿ ಓರ್ವ ಸಾಧಕಿಯ ಅನಾಹತಚಕ್ರದ ಸ್ಥಾನದಲ್ಲಿ ನೋವಾಗುತ್ತಿತ್ತು. ನಂತರ ಅವಳ ಮನಸ್ಸಿನ ಏಕಾಗ್ರತೆಯಾಗಿ ಅವಳಿಗೆ ಅನಾಹತಚಕ್ರದ ಸ್ಥಾನದಲ್ಲಿ ಗೋಲಾಕಾರ ಸಂವೇದನೆಯ ಅರಿವಾಗಲು ಆರಂಭವಾಯಿತು ಹಾಗೂ ಅನಂತರ ಅವಳ ನೋವು ಕಡಿಮೆಯಾಯಿತು. ಈ ಪ್ರಯೋಗದ ಸಮಯದಲ್ಲಿ ಅವಳಿಗೆ ತನ್ನ ಎರಡೂ ಕೈಗಳಲ್ಲಿ ಸಂವೇದನೆಯ ಅರಿವಾಯಿತು ಹಾಗೂ ‘ತನ್ನ ಕೈಗಳಿಂದ ಒಳ್ಳೆಯ ಶಕ್ತಿ ಸಿಗುತ್ತದೆ, ಎಂಬುದೂ ಅರಿವಾಯಿತು.

೪ ಅ ೨. ರಾಗವನ್ನು ಕೇಳುವಾಗ ಆರಂಭದಲ್ಲಿ ಓರ್ವ ಸಾಧಕಿಗೆ ಬೆನ್ನು ನೋವು ಆರಂಭವಾಯಿತು ಹಾಗೂ ಸ್ವಲ್ಪ ಹೊತ್ತು ರಾಗವನ್ನು ಕೇಳಿದಾಗ ಅದು ಕಡಿಮೆಯಾಯಿತು ಹಾಗೂ ಅವಳ ಮನಸ್ಸಿನಲ್ಲಿ ವಿಚಾರಗಳು ಕಡಿಮೆಯಾಗಿ ಮನಸ್ಸು ಶಾಂತವಾಗಿ ಅವಳಿಗೆ ಧ್ಯಾನ ತಗಲುವುದು : ಇನ್ನೋರ್ವ ಸಾಧಕಿಗೆ ರಾಗವನ್ನು ಕೇಳುವಾಗ ಆರಂಭದಲ್ಲಿ ತೀವ್ರ ಬೆನ್ನು ನೋವು ಆರಂಭವಾಯಿತು; ಆದರೆ ಸ್ವಲ್ಪ ಹೊತ್ತು ರಾಗವನ್ನು ಕೇಳಿದ ನಂತರ ಅವಳ ಬೆನ್ನು ನೋವು ಸಂಪೂರ್ಣ ನಿಂತಿತು. ರಾಗವನ್ನು ಕೇಳುವಾಗ ಅವಳ ಮನಸ್ಸಿನ ವಿಚಾರಗಳು ಕಡಿಮೆಯಾಗಿ ಮನಸ್ಸು ಶಾಂತವಾಯಿತು ಹಾಗೂ ಅವಳಿಗೆ ಧ್ಯಾನ ತಗಲಿತು.

೪ ಆ. ಅನಿಷ್ಟ ಶಕ್ತಿಗಳ ತೀವ್ರ ತೊಂದರೆ ಇರುವ ೧೧ ಸಾಧಕರು

೪ ಆ ೧. ರಾಗದ ಸ್ಪಂದನಗಳ ಅರಿವಾಗುವುದು

ಅ. ೧೧ ರಲ್ಲಿ ಮೂರು ಸಾಧಕಿಯರಿಗೆ ಅನಾಹತಚಕ್ರದ ಸ್ಥಾನದಲ್ಲಿ, ಮತ್ತು ಓರ್ವ ಸಾಧಕಿಗೆ ಮಣಿಪುರಚಕ್ರದ ಸ್ಥಾನದಲ್ಲಿ ಒಳ್ಳೆಯ ಸಂವೇದನೆಯ ಅರಿವಾಯಿತು.

ಆ. ರಾಗವನ್ನು ಕೇಳುವಾಗ ಓರ್ವ ಸಾಧಕಿಯ ಬಾಯಲ್ಲಿ ತುಂಬಾ ಹೊತ್ತು ಜೊಲ್ಲು ಬರುತ್ತಿತ್ತು.

ಇ. ಇಬ್ಬರು ಸಾಧಕಿಯರಿಗೆ ಸಂಪೂರ್ಣ ಬೆನ್ನು ಹುರಿಯಲ್ಲಿ ಒಳ್ಳೆಯ ಸಂವೇದನೆಯ ಅರಿವಾಗುತ್ತಿತ್ತು.

೪ ಆ ೨. ರಾಗವನ್ನು ಕೇಳಿದ್ದರಿಂದ ನಾಮಜಪದ ಉಪಾಯವಾದ ಕಾರಣ ಅನಿಷ್ಟ ಶಕ್ತಿಯು ತೊಂದರೆ ಕೊಡುವುದು : ಇಬ್ಬರು ಸಾಧಕಿಯರಿಗೆ ಬೆನ್ನು ನೋವು ಆರಂಭವಾಯಿತು.

೫. ರಾಗ – ದರ್ಬಾರಿ ಕಾನಡಾ : ತಲೆನೋವು (ಮೈಗ್ರೇನ್)

೫ ಅ. ತಲೆನೋವಿನ ತೊಂದರೆಯಿರುವ ಇಬ್ಬರು ಸಾಧಕಿಯರಿಗೆ ಬಂದ ಅನುಭೂತಿ

೫ ಅ ೧. ತೊಂದರೆ ಹೆಚ್ಚಾಗುವುದು : ತಲೆನೋವಿನ ತೊಂದರೆಯಿರುವ ಓರ್ವ ಸಾಧಕಿಗೆ ಪ್ರಯೋಗ ಆರಂಭವಾಗುವ ಮೊದಲು ಸ್ವಲ್ಪ ಪ್ರಮಾಣದಲ್ಲಿ ತಲೆನೋವು ಇತ್ತು. ರಾಗವನ್ನು ಕೇಳಲು ಆರಂಭಿಸಿದಾಗ ಹೆಚ್ಚು ನೋವಾಗಲು ಆರಂಭವಾಗಿ ಅದು ರಾಗ ಮುಗಿಯುವವರೆಗೆ ನಿಲ್ಲಲೇ ಇಲ್ಲ. ಪ್ರಯೋಗ ನಿಂತ ಮೇಲೆ ೧ ಗಂಟೆಯ ನಂತರ ಅವಳ ತಲೆ ನೋವು ನಿಂತಿತು. (ಇಲ್ಲಿ ಆ ರಾಗದ ಪರಿಣಾಮವು ಉಪಾಯಾತ್ಮಕವಾಗಿರುವುದರಿಂದ ಆ ಕಾಯಿಲೆ ಹೆಚ್ಚಾಗಿ ಅನಂತರ ಅದರ ಪ್ರಮಾಣ ಕಡಿಮೆಯಾಗುತ್ತಾ ಹೋಯಿತು. – ಸಂಕಲನಕಾರರು)

೫ ಅ ೨. ಒಳ್ಳೆಯದೆನಿಸುವುದು : ಇನ್ನೋರ್ವ ಸಾಧಕಿಗೆ ಈ ರಾಗವನ್ನು ಕೇಳುವಾಗ ಆಜ್ಞಾಚಕ್ರದ ಸ್ಥಾನದಲ್ಲಿ ಸಂವೇದನೆಯ ಅರಿವಾಯಿತು ಹಾಗೂ ಒಳ್ಳೆಯದೆನಿಸಿತು.

೫ ಆ. ಅನಿಷ್ಟ ಶಕ್ತಿಗಳ ತೀವ್ರ ತೊಂದರೆ ಇರುವ ೧೧ ಸಾಧಕರಿಗೆ ಬಂದ ಅನುಭೂತಿಗಳು

೫ ಆ ೧. ರಾಗದ ಸ್ಪಂದನಗಳ ಅರಿವಾಗುವುದು

ಅ. ೧೧ ರಲ್ಲಿ ೫ ಸಾಧಕರಿಗೆ ಮೊದಲು ಆಜ್ಞಾಚಕ್ರದ ಸ್ಥಾನದಲ್ಲಿ ಮತ್ತು ನಂತರ ಸಂಪೂರ್ಣ ತಲೆಯಲ್ಲಿ ಒಳ್ಳೆಯ ಸಂವೇದನೆ, ಮತ್ತು ಒಬ್ಬ ಸಾಧಕನಿಗೆ ಅನಾಹತಚಕ್ರದ ಸ್ಥಾನದಲ್ಲಿ ಸಂವೇದನೆಯ ಅರಿವಾಯಿತು.

೬. ರಾಗ – ಬಾಗೇಶ್ರೀ : ಅಧಿಕ ರಕ್ತದೊತ್ತಡ

೬ ಅ. ಅಧಿಕ ರಕ್ತದೊತ್ತಡ ಇರುವ ಇಬ್ಬರು ಸಾಧಕರಿಗೆ ಬಂದಿರುವ ಅನುಭೂತಿ

೬ ಅ ೧. ಇಬ್ಬರು ಸಾಧಕರಿಗೂ ಉಪಚಾರವಾಗಿ ಅವರ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುವುದು : ಈ ರಾಗವನ್ನು ಕೇಳುವ ಮೊದಲು ಪ್ರಯೋಗದಲ್ಲಿನ ಇಬ್ಬರೂ ಸಾಧಕರ ರಕ್ತದೊತ್ತಡ ಹೆಚ್ಚು ಪ್ರಮಾಣದಲ್ಲಿತ್ತು. ರಾಗವನ್ನು ಕೇಳಿದ ನಂತರ ಅವರ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬಂತು. ಇವರಲ್ಲಿ ಒಬ್ಬರ ರಕ್ತದೊತ್ತಡ ಅನೇಕ ದಿನಗಳಿಂದ ಕಡಿಮೆಯಾಗುತ್ತಿರಲಿಲ್ಲ. ಒಂದು ಗಂಟೆ ಈ ರಾಗವನ್ನು ಕೇಳಿದ ನಂತರ ಅವನ ರಕ್ತದೊತ್ತಡವನ್ನು ನೋಡಿದಾಗ ಅದು ಕಡಿಮೆಯಾಗಿರುವುದು ಅರಿವಾಯಿತು. – ಕು. ತೇಜಲ ಪಾತ್ರಿಕರ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩.೧೦.೨೦೧೭)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಅನುಭೂತಿ : ಅನುಭೂತಿಗಳಿಂದ ದೇವರ ಮೇಲಿನ/ಸಾಧನೆಯ ಮೇಲಿನ ಉಪಾಸಕನ ಶ್ರದ್ಧೆಯು ಹೆಚ್ಚಾಗಿ ಅವನ ಸಾಧನೆಯಲ್ಲಿ ಹೆಚ್ಚಳವಾಗಲು ಸಹಾಯವಾಗುತ್ತದೆ.