ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಂಡಿಸಿದ`ಹಾರರ್’ ಚಲನಚಿತ್ರಗಳ ಸೂಕ್ಷ್ಮ ಪರಿಣಾಮಗಳು’ ಈ ಸಂಶೋಧನೆಗೆ ‘ಅತ್ಯುತ್ತಮ ನಿರೂಪಣೆ-ಪ್ರಸಾರಮಾಧ್ಯಮ’ ಪ್ರಶಸ್ತಿ !
ನಾವು ಮನರಂಜನೆಗಾಗಿ ಚಲನಚಿತ್ರಗಳನ್ನು ನೋಡುತ್ತೇವೆ; ಆದರೆ ಭಯ ಹುಟ್ಟಿಸುವ (‘ಹಾರರ್’) ಚಲನಚಿತ್ರವನ್ನು ನೋಡಿದ ನಂತರ, ನಾವು ನೆಮ್ಮದಿಯ ನಿಟ್ಟುಸಿರು ಬಿಟ್ಟನಂತರ ಆ ಚಲನಚಿತ್ರದಿಂದ ನಮ್ಮ ಮೇಲೆ ಆಧ್ಯಾತ್ಮಿಕವಾಗಿ ಏನು ಪರಿಣಾಮವಾಯಿತು ಎಂಬುವುದರ ಬಗ್ಗೆ ಯೋಚಿಸದೇ ನಮ್ಮ ನಮ್ಮ ಕೆಲಸ ಮಾಡಲು ಪ್ರಾರಂಭಿಸುತ್ತೇವೆ; ಆದರೆ ಅದರ ಪರಿಣಾಮ ವ್ಯಕ್ತಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದ್ದು ವ್ಯಕ್ತಿಯ ನಕಾರಾತ್ಮಕತೆಯಲ್ಲಿ ಪ್ರಚಂಡವಾಗಿ ಹೆಚ್ಚಳವಾಗುತ್ತದೆ, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಪ್ರತಿಪಾದಿಸಿದರು. ಅವರು ಶ್ರೀಲಂಕಾದಲ್ಲಿ ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ ವತಿಯಿಂದ ಆಯೋಜಿಸಲಾಗಿದ್ದ ೮ ನೇ ‘ಸಾಮಾಜಿಕ ವಿಜ್ಞಾನ ಪರಿಷತ್ತಿ’ನಲ್ಲಿ ಮಾತನಾಡುತ್ತಿದ್ದರು. ಅವರು ‘ಹಾರರ್ (ಭಯ ಹುಟ್ಟಿಸುವ) ಚಲನಚಿತ್ರಗಳ ಸೂಕ್ಷ್ಮ ಪರಿಣಾಮಗಳು’ ಎಂಬ ಶೋಧ ಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಇವರು ಈ ಪ್ರಬಂಧದ ಲೇಖಕರಾಗಿದ್ದಾರೆ, ಮತ್ತು ಶ್ರೀ. ಶಾನ್ ಕ್ಲಾರ್ಕ್ ಸಹ-ಲೇಖಕರಾಗಿದ್ದಾರೆ.
ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ 80 ನೇ ಪ್ರಸ್ತುತಿಯಾಗಿತ್ತು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಇದುವರೆಗೆ 15 ರಾಷ್ಟ್ರೀಯ ಮತ್ತು 64 ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗಿದೆ. 7 ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಗಳಿಗೆ ‘ಅತ್ಯುತ್ತಮ ಪ್ರಬಂಧ ಪ್ರಶಸ್ತಿಗಳನ್ನು’ ನೀಡಿ ಸನ್ಮಾನಿಸಲಾಗಿದೆ.
ಶ್ರೀ. ಕ್ಲಾರ್ಕ್ ಇವರು ಭಯಾನಕ ಚಲನಚಿತ್ರಗಳಿಂದ ಆಗುವ ಸೂಕ್ಷ್ಮ ಪರಿಣಾಮಗಳ ಅಧ್ಯಯನಕ್ಕಾಗಿ ‘ಪ್ರಭಾವಳಿ ಮತ್ತು ಶಕ್ತಿ ಮಾಪನ ಯಂತ್ರ’ (ಯೂನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್)), ಬಯೋವೆಲ್ (Biowell) ಮತ್ತು ಸೂಕ್ಷ್ಮ ಪರೀಕ್ಷಣೆಯ ಮೂಲಕ ಮಾಡಿದ ಸಂಶೋಧನೆಯ ಬಗ್ಗೆ ನೀಡಿದ ಮಾಹಿತಿ ಮುಂದೆ ನೀಡಲಾಗಿದೆ.
೧. ಜನಪ್ರಿಯ ‘ಭಯಾನಕ ಚಲನಚಿತ್ರ’ ನೋಡುವ ಬಗೆಗಿನ ಪ್ರಯೋಗ : ಪ್ರಯೋಗಾಲಯದ ಸ್ಟುಡಿಯೋದಲ್ಲಿ ೧೭ ವ್ಯಕ್ತಿಗಳಿಗೆ ಭಯಾನಕ ಚಲನಚಿತ್ರಗಳನ್ನು ತೋರಿಸಲಾಯಿತು. ಒಂದು ಗುಂಪು ಆ ಚಲನಚಿತ್ರವನ್ನು ಮಧ್ಯಾಹ್ನ ವೀಕ್ಷಿಸಿತ್ತು ಮತ್ತು ಇನ್ನೊಂದು ಗುಂಪು ರಾತ್ರಿಯಲ್ಲಿ ವೀಕ್ಷಿಸಿತು. ಯುಎಎಸ್ ಯಂತ್ರವು ವ್ಯಕ್ತಿಯ ಸಕಾರಾತ್ಮಕತೆ ಮತ್ತು ನಕಾರಾತ್ಮಕತೆಯನ್ನು ತೋರಿಸುತ್ತದೆ; ಆದ್ದರಿಂದ ಚಲನಚಿತ್ರವನ್ನು ನೋಡುವ ಮೊದಲು ಮತ್ತು ನಂತರವೂ ಪ್ರಭಾವಳಿಯನ್ನು ನೊಂದಾಯಿಸಲಾಯಿತು. ಬಯೋವೆಲ್ ಸಾಧನವು ವ್ಯಕ್ತಿಯ ಚಕ್ರಗಳಲ್ಲಿನ ಶಕ್ತಿಯ ಸ್ಥಿತಿ/ಕ್ಷಮತೆ ತೋರಿಸುವುದರಿಂದ ಆ ಸಾಧನದಿಂದ ಪರೀಕ್ಷಿಸಲಾಯಿತು.
೧ ಅ . ‘ಯುಎಎಸ್’ ಮೂಲಕ ಅಳೆದ ‘ಭಯಾನಕ ಚಲನಚಿತ್ರ’ದ ಪ್ರಭಾವಳಿಯ ಮೇಲೆ ಆಗುವ ಪರಿಣಾಮಗಳು : ನಕಾರಾತ್ಮಕತೆಯು ಸರಾಸರಿ ಶೇ. ೧೦೭ ರಷ್ಟು ಹೆಚ್ಚಾಗಿತ್ತು, ಅಂದರೆ ಹೆಚ್ಚಳವು ದ್ವಿಗುಣವಾಯಿತು. ಕೆಲವರ ಬಗ್ಗೆ ಈ ಹೆಚ್ಚಳವು ಶೇ. ೩೭೫ ಆಗಿತ್ತು. ಪ್ರಯೋಗದ ಮೊದಲು ಯಾವ ವ್ಯಕ್ತಿಯ ಪ್ರಭಾವಳಿ ಸಕಾರಾತ್ಮಕ ಇತ್ತು ಅದು ಶೇ. ೬೦ ರಷ್ಟು ಇಳಿಕೆಯಾದರೆ ಕೆಲವರ ಸಕಾರಾತ್ಮಕ ಪ್ರಭಾವಳಿಯು ಸಂಪೂರ್ಣವಾಗಿ ನಷ್ಟವಾಗಿರುವುದು ಕಂಡು ಬಂದಿದೆ. ಮರುದಿನ ಬೆಳಿಗ್ಗೆ ತೆಗೆದುಕೊಂಡಿದ್ದ ನೋಂದಣಿಯಲ್ಲಿಯೂ, ಅವರ ಪ್ರಭಾವಳಿಯು ಹೆಚ್ಚಾಗಿರಲಿಲ್ಲ. ವಾಸ್ತವವಾಗಿ, ಅವರು ಚಲನಚಿತ್ರವನ್ನು ನೋಡುವ ಮೊದಲು ಅವರ ಪ್ರಭಾವಳಿಯಲ್ಲಿದ್ದ ನಕಾರಾತ್ಮಕತೆಯಲ್ಲಿ ಸರಾಸರಿ ಶೇ. 55 ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿತು. ಯಾವ ವ್ಯಕ್ತಿ ರಾತ್ರಿಯಲ್ಲಿ ಆ ಚಲನಚಿತ್ರವನ್ನು ವೀಕ್ಷಿಸಿದ್ದರೋ ಅವರ ನಕಾರಾತ್ಮಕತೆಯಲ್ಲಿ ಶೇ. 112 ರಷ್ಟು ಹೆಚ್ಚಾಗಿರುವುದು ಕಂಡು ಬಂದರೆ ಯಾವ ವ್ಯಕ್ತಿ ಮಧ್ಯಾಹ್ನ ಈ ಚಲನಚಿತ್ರವನ್ನು ವೀಕ್ಷಿಸಿದರೋ ಅವರಲ್ಲಿನ ನಕಾರಾತ್ಮಕತೆಯಲ್ಲಿ ಶೇ. ೩೧ ರಷ್ಟು ಹೆಚ್ಚಾಗಿರುವುದು ಕಂಡುಬಂದಿತು.
೧ ಆ. ಬಯೋವೆಲ್ ಮೂಲಕ ಮಾಡಿದ ಅಧ್ಯಯನ : ಚಲನಚಿತ್ರವನ್ನು ನೋಡುವ ಮೊದಲು ಮಾಡಿದ ಪರೀಕ್ಷೆಯಲ್ಲಿ, ವ್ಯಕ್ತಿಯ ಎಲ್ಲಾ ಚಕ್ರಗಳು ಸಾಮಾನ್ಯ ಸಾಲಿನಲ್ಲಿದ್ದವು. ಅವುಗಳ ಗಾತ್ರವು ತುಂಬಾ ದೊಡ್ಡದಾಗಿತ್ತು, ಅಂದರೆ ಆ ವ್ಯಕ್ತಿಯು ಸ್ಥಿರ ಮತ್ತು ಶಕ್ತಿಯುತವಾಗಿದ್ದರು. ಚಲನಚಿತ್ರವನ್ನು ನೋಡಿದ ನಂತರ, ಅವರ ಚಕ್ರಗಳು ಅಸ್ತವ್ಯಸ್ತವಾದವು, ಅವುಗಳ ಗಾತ್ರವೂ ಕಿರಿದಾಯಿತ್ತು, ಅಂದರೆ ಆ ವ್ಯಕ್ತಿಯು ಅಸ್ಥಿರವಾಗಿ ಅವರ ಸಾಮಾನ್ಯ ಸಾಮರ್ಥ್ಯ ಕಡಿಮೆಯಾಗಿರುವುದು ಗಮನಕ್ಕೆ ಬಂದಿತು.
೨. ‘ಹಾರರ್ ಚಲನಚಿತ್ರ’ದ ನಿರ್ದೇಶಕ, ಚಿತ್ರಕಥೆ ಲೇಖಕರು ಮತ್ತು ಕಲಾವಿದರು/ನಟರ ಸಂಧರ್ಭದಲ್ಲಿನ ಸಂಶೋಧನೆ : ನಮ್ಮ ಛಾಯಾಚಿತ್ರಗಳು ನಮ್ಮ ಸ್ಪಂದನಗಳನ್ನೂ ಸೆರೆಹಿಡಿಯುವುದರಿಂದ ಆ ಚಲನಚಿತ್ರದಲ್ಲಿ ಪಾತ್ರ ನಿರ್ವಹಿಸುವ ಮೊದಲು ಒಂದು ವರ್ಷ, ಅದನ್ನು ಮಾಡುವಾಗ, ಪ್ರಿಮಿಯರ್ (ಮೊದಲನೇ ಬಾರಿಗೆ ಪ್ರದರ್ಶನವಾದಾಗ) ಸಮಯದಲ್ಲಿ ಮತ್ತು 1-2 ವರ್ಷಗಳ ನಂತರ ಆ ಕಲಾವಿದರ ‘ಯು.ಎ.ಎಸ್.’ ಮೂಲಕ ಪರೀಕ್ಷಣೆಯನ್ನು ಮಾಡಿ ನೋಂದಣಿ ಪಡೆಯಲಾಯಿತು.
ಕಾಲ ಉರುಳಿದಂತೆ ನಿರ್ದೇಶಕರ ಪ್ರಭಾವಲಯವು ಹೆಚ್ಚೆಚ್ಚು ನಕಾರಾತ್ಮಕವಾಗುತ್ತಾ ಹೋಯಿತು. ಅದರಲ್ಲಿ ಮುಖ್ಯ ಕಲಾವಿದರ ಪ್ರಭಾವಲಯವು ತುಂಬಾ ನಕಾರಾತ್ಮಕವಾಗಿತ್ತು. ಈ ಚಲನಚಿತ್ರದಿಂದ 2 ಕಲಾವಿದರ ಹೆಚ್ಚಾದ ನಕಾರಾತ್ಮಕತೆಯಲ್ಲಿ ಅನಂತರ ಎಂದಿಗೂ ಸುಧಾರಣೆಯಾಗಲಿಲ್ಲ.
ಚಿತ್ರಕಥೆ ಲೇಖಕರ ನಕಾರಾತ್ಮಕ ಪ್ರಭಾವಲಯವು ಅತ್ಯಧಿಕವಿತ್ತು. ಚಲನಚಿತ್ರದ ಮೊದಲು ಅವರ ಪ್ರಭಾವಲಯವು 59 ಮೀಟರ್‌ನಿಂದ ಪ್ರಾರಂಭವಾಗಿ ಅದು ಚಲನಚಿತ್ರದ ನಂತರದ ಪ್ರಿಮಿಯರ್‌ನ 3 ವರ್ಷಗಳಲ್ಲಿನ 2 ನೇ ಭಾಗ (ಸಿಕ್ವೆಲ್) ಬಿಡುಗಡೆಯಾಗುವವರೆಗೆ 84 ಮೀಟರ್‌ಗಿಂತ ಮೇಲೆ ಹೋಗಿತ್ತು. ಯಾರಲ್ಲಿಯೂ ಪ್ರಭಾವಲಯ ಸಕಾರಾತ್ಮಕವಾಗಿರಲಿಲ್ಲ. ಇಂತಹ ನಕಾರಾತ್ಮಕ ವ್ಯಕ್ತಿಯು ತನ್ನ ಪ್ರಭಾವದಿಂದ ಚಿತ್ರಕಥೆ ಲೇಖಕ, ನಿರ್ದೇಶಕ ಮತ್ತು ಕಲಾವಿದರಿಗೆ ಸಮಾಜದಲ್ಲಿ ನಕಾರಾತ್ಮಕತೆಯನ್ನು ಹಬ್ಬಿಸುವ ಚಲನಚಿತ್ರವನ್ನು ನಿರ್ಮಿಸಲು ಪ್ರವೃತ್ತ ಮಾಡುತ್ತಾನೆ.
ನಮ್ಮ ಸಂಶೋಧನೆಯ ಮೂಲಕ ನಮಗೆ ಏನು ಅರಿವಾಯಿತೆಂದರೆ, ‘ಹಾರರ್ ಚಲನಚಿತ್ರ’ವನ್ನು ನೋಡುವುದರಿಂದ ಕೇವಲ ಭಾವನಾತ್ಮಕ ಪರಿಣಾಮವಾಗದೇ ಸೂಕ್ಷ್ಮ ಸ್ಪಂದನಗಳ ಸ್ತರದಲ್ಲಾಗುವ ಭಯಂಕರ ಪರಿಣಾಮಗಳ ಬಗ್ಗೆ ನಮಗೆ ಅರಿವೂ ಇರುವುದಿಲ್ಲ. ಸೂರ್ಯಾಸ್ತದ ನಂತರ ಕೆಟ್ಟ ಶಕ್ತಿಗಳ ಪ್ರಭಾವವು ವಾತಾವರಣದ ಮೇಲೆ ಹೆಚ್ಚು ಇರುವುದರಿಂದ ಆ ಸಮಯದಲ್ಲಿ ಇಂತಹ ಚಲನಚಿತ್ರವನ್ನು ನೋಡುವುದು ಹೆಚ್ಚು ಅಪಾಯಕಾರಿಯಾಗಿರುತ್ತದೆ.
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ. * ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |