Supreme Court Judgement : ‘ಬ್ರೇಕಪ್’ ಬಳಿಕ ಅತ್ಯಾಚಾರದ ಪ್ರಕರಣ ದಾಖಲಿಸಬಾರದು ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ವಿವಾಹದವರೆಗೆ ತಲುಪದ ಸಂಬಂಧಗಳಲ್ಲಿ, ಅತ್ಯಾಚಾರದಂತಹ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದು ತಪ್ಪು. ಸಂಬಂಧದಲ್ಲಿರುವುದು ಅಪರಾಧದಂತಾಗಿದೆ. ಯಾರೊಂದಿಗಾದರೂ ‘ಬ್ರೇಕಪ್’ (ಪ್ರೇಮ ಸಂಬಂಧ ಮುರಿದುಬೀಳುವುದು) ಆದರೆ, ಅದರ ಅರ್ಥ ‘ಅತ್ಯಾಚಾರವಾಗಿದೆ’ ಎಂದಲ್ಲ. ಪ್ರೇಮ ಸಂಬಂಧ ಹದಗೆಡುವುದು ಮತ್ತು ಬೇರೆಯಾಗಿರುವುದು, ಇದರ ನಂತರ ಅತ್ಯಾಚಾರದ ಪ್ರಕರಣ ದಾಖಲಿಸಬಾರದು, ಎಂದು ಸರ್ವೋಚ್ಚ ನ್ಯಾಯಾಲಯ ಅತ್ಯಾಚಾರದ ಪ್ರಕರಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ. ಒಬ್ಬ ವ್ಯಕ್ತಿಯು ತಮ್ಮ ಮೇಲಿನ ಅತ್ಯಾಚಾರದ ಪ್ರಕರಣವನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ, ಒಬ್ಬ ಮಹಿಳೆ ಆತನ ವಿರುದ್ಧ ವಿವಾಹದ ಆಮಿಷವೊಡ್ಡಿ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನ್ಯಾಯಾಲಯವು ಮಾತು ಮುಂದುವರೆಸಿ, ಸಂತ್ರಸ್ತೆಯು ಹಿರಿಯ ವಕೀಲರನ್ನು ನೇಮಿಸಿಕೊಂಡಿದ್ದಾಳೆ, ಆದ್ದರಿಂದ ಆಕೆ ಮುಗ್ಧಳು ಎಂದು ಪರಿಗಣಿಸಲು ಸಾಧ್ಯವಿಲ್ಲ. ನೀವು ವಯಸ್ಕರಾಗಿದ್ದೀರಿ, ಆದ್ದರಿಂದ ‘ನಿಮ್ಮನ್ನು ಮೋಸಗೊಳಿಸಿ ವಿವಾಹದ ಭರವಸೆ ನೀಡಿ ನಂಬಿಕೆ ಗಳಿಸಲಾಗಿದೆ’ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ, ಪ್ರಣಯ (ಪ್ರೇಮ) ಮುಗಿದಿದೆ ಅಥವಾ ‘ಬ್ರೇಕಪ್’ ಆಗಿದೆ ಎಂದರೆ ಅತ್ಯಾಚಾರದ ಪ್ರಕರಣವಾಗಿದೆ ಎಂದಲ್ಲ. ಸಮಾಜವು ಬದಲಾಗುತ್ತಿರುವ ರೀತಿಯಿಂದ, ಸಂಬಂಧ (ರಿಲೇಷನ್ಶಿಪ್) ಮುರಿದುಬೀಳುವುದು ಅತ್ಯಾಚಾರದ ಅಪರಾಧವಾಗಬಾರದು ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇಂದು ನೈತಿಕತೆ ಮತ್ತು ಮೌಲ್ಯಗಳು ಬದಲಾಗಿವೆ. ವಿಶೇಷವಾಗಿ ಯುವ ಪೀಳಿಗೆ ಬದಲಾಗುತ್ತಿದೆ. ಇದನ್ನು ನಾವು ಒಪ್ಪಿಕೊಂಡರೆ, ಕಾಲೇಜುಗಳಲ್ಲಿ ಹುಡುಗ-ಹುಡುಗಿಯರ ಸಂಬಂಧಗಳು ಶಿಕ್ಷಾರ್ಹವಾಗುತ್ತವೆ. ಉದಾಹರಣೆಗೆ, ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಪ್ರೀತಿಯಲ್ಲಿದ್ದರೆ, ಹುಡುಗನು ಹುಡುಗಿಗೆ ‘ನಾನು ನಿನ್ನನ್ನು ಮದುವೆಯಾಗುತ್ತೇನೆ’ ಎಂದು ಹೇಳಿದರೆ, ನಂತರ ಆತ ಏನನ್ನೂ ಮಾಡದಿದ್ದರೆ, ಅದನ್ನು ಕೂಡ ಅಪರಾಧವೆಂದು ಪರಿಗಣಿಸಬೇಕೇ?, ಎಂದು ಪ್ರಶ್ನಿಸಲಾಯಿತು.