ಆಧ್ಯಾತ್ಮಿಕ ಮಟ್ಟದಲ್ಲಿ ಆಹಾರ ಸಕಾರಾತ್ಮಕತೆಯನ್ನು ನಿರ್ಧರಿಸುವ ಘಟಕಗಳನ್ನು ಗಮನದಲ್ಲಿಡಿ !

ಆಸ್ಟ್ರಿಯಾದಲ್ಲಿ ನಡೆದ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷದ್‌ನಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಆಹಾರದ ಬಗೆಗಿನ ಸಂಶೋಧನೆ ಮಂಡನೆ

ಶ್ರೀ. ಶಾನ್ ಕ್ಲಾರ್ಕ್

‘ನಾವು ಹೆಚ್ಚಾಗಿ ಆಹಾರವನ್ನು ಅದರ ರುಚಿ ಅಥವಾ ಪೌಷ್ಟಿಕಾಂಶದ ಮೌಲ್ಯದ ಆಧಾರದಲ್ಲಿ ಆಯ್ಕೆ ಮಾಡುತ್ತೇವೆ; ಆದರೆ ‘ಆಧ್ಯಾತ್ಮಿಕ ಮಟ್ಟದಲ್ಲಿ ಅದು ನಮ್ಮ ಮೇಲೆ ಯಾವ ಪರಿಣಾಮ ಬೀರುತ್ತದೆ’, ಈ ಬಗ್ಗೆ ಯಾರೂ ಯೋಚಿಸುವುದಿಲ್ಲ; ಏಕೆಂದರೆ ಅದನ್ನು ನಮಗೆ ಎಂದಿಗೂ ಕಲಿಸಲೇ ಇಲ್ಲ. ಆಹಾರದ ಘಟಕಗಳು ಸಾತ್ವಿಕವಾಗಿರುವುದು, ಅದೇ ರೀತಿ ಅಡುಗೆ ಮಾಡುವ ವ್ಯಕ್ತಿ, ಅಡುಗೆ ಮಾಡುವ ಪ್ರಕ್ರಿಯೆ ಮತ್ತು ಅಡುಗೆಮನೆಯ ವಾತಾವರಣ ಇವುಗಳು ಅಡುಗೆಯ ಸಕಾರಾತ್ಮಕ ಅಥವಾ ನಕಾರಾತ್ಮಕತೆಯ ಮೇಲೆ ಪ್ರಮುಖವಾಗಿ ಪರಿಣಾಮ ಬೀರುತ್ತದೆ’, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಪ್ರತಿಪಾದಿಸಿದರು. ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿ ಆಯೋಜಿಸಲಾಗಿದ್ದ ‘ಸೆಕಂಡ್ ಗ್ಲೋಬಲ್ ಸಮಿಟ್ ಆನ್ ಫುಡ್ ಸೈನ್ಸ್ ಆಂಡ್ ನ್ಯೂಟ್ರಿಶನ್’ ಈ ಅಂತರರಾಷ್ಟ್ರೀಯ ಪರಿಷದ್‌ನಲ್ಲಿ ಮಾತನಾಡುತ್ತಿದ್ದರು. ಈ ಪರಿಷದ್‌ಅನ್ನು ‘ದ ಪಲ್ಲಸ್ ಗ್ರೂಪ್, ಯು.ಕೆ.’ ಆಯೋಜಿಸಿದೆ. ಶ್ರೀ. ಕ್ಲಾರ್ಕ್ ಇವರು ‘ನಮ್ಮ ಆಹಾರವು ನಮ್ಮ ಪ್ರಭಾವಳಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ’ ಈ ಶೋಧ ಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಲಾಜಿ ಆಠವಲೆ ಇವರು ಈ ಪ್ರಬಂಧದ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ.
ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ 82 ನೇ ಪ್ರಸ್ತುತಿಯಾಗಿತ್ತು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಇದುವರೆಗೆ 15 ರಾಷ್ಟ್ರೀಯ ಮತ್ತು 66 ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷದ್‌ಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ. ಈ ಪೈಕಿ 9 ಅಂತಾರಾಷ್ಟ್ರೀಯ ಪರಿಷದ್‌ಗಳಲ್ಲಿ ಸಂಶೋಧನಾ ಪ್ರಬಂಧಕ್ಕೆ ‘ಅತ್ಯುತ್ತಮ ಪ್ರಶಸ್ತಿ’ ಲಭಿಸಿದೆ.

ಶ್ರೀ. ಕ್ಲಾರ್ಕ್ ತಮ್ಮ ಮಾತನ್ನು ಮುಂದುವರಿಸುತ್ತಾ, ನಮ್ಮ ಆಹಾರವು ನಮ್ಮ ಪ್ರಭಾವಳಿಯ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಯಾವಾಗ ನಕಾರಾತ್ಮಕ ಪರಿಣಾಮವಾಗುತ್ತದೆ, ಆಗ ಶಾರೀರಿಕ ಸ್ತರದಲ್ಲಿ ಜಡತ್ವ, ಹಾಗೆಯೇ ವಿವಿಧ ಕಾಯಿಲೆಗಳು ಬರುತ್ತದೆ. ಮಾನಸಿಕ ಸ್ತರದಲ್ಲಿ ಆಕ್ರಮಣಕಾರಿ ನಡವಳಿಕೆ, ಖಿನ್ನತೆ, ಸೈದ್ಧಾಂತಿಕ ಗೊಂದಲ, ನಿರ್ಧಾರ ತೆಗೆದುಕೊಳ್ಳುವ ಕೊರತೆ, ಈ ರೀತಿಯ ಪರಿಣಾಮ ಕಂಡು ಬರುತ್ತದೆ. ತದನಂತರ ಅವರು ‘ಪ್ರಭಾವಳಿ ಮತ್ತು ಶಕ್ತಿ ಮಾಪನ ಯಂತ್ರ’ (ಯುನಿವರ್ಸಲ್ ಆರಾ ಸ್ಕ್ಯಾನರ್ (ಯು.ಎ.ಎಸ್.)) ನ ಮಾಧ್ಯಮದಿಂದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳು, ಅವುಗಳ ವಿವಿಧ ಕಚ್ಚಾ ಘಟಕಗಳು ಮತ್ತು ಅದನ್ನು ಸೇವಿಸುವ ವ್ಯಕ್ತಿಯ ಬಗ್ಗೆ ಮಾಡಿದ ಪರೀಕ್ಷಣೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಮಾಂಸಾಹಾರಿ ಪದಾರ್ಥಗಳಲ್ಲಿ ಯಾವುದೇ ಘಟಕದಲ್ಲಿ ಸಕಾರಾತ್ಮಕ ಶಕ್ತಿ ಕಂಡುಬರಲಿಲ್ಲ. ಅವರ ನಕಾರಾತ್ಮಕ ಶಕ್ತಿಯ ಪ್ರಭಾವವು ಮಟನ್‌ನಲ್ಲಿ 194.6 ಮೀಟರ್, ಕೋಳಿಯ ಮಾಂಸದಲ್ಲಿ 188.5 ಮೀಟರ್, ಬಂಗುಡೆ (ಮೀನಿನ ವಿಧ) 26.6 ಮೀಟರ್ ಮತ್ತು ಮೊಟ್ಟೆಗಳಲ್ಲಿ 17 ಮೀಟರ್ ಇತ್ತು. ಸಸ್ಯಾಹಾರಿ ಆಹಾರದ ಪದಾರ್ಥಗಳ ಎಲ್ಲ ಘಟಕಗಳಲ್ಲಿ ಸಕಾರಾತ್ಮಕ ಶಕ್ತಿ ಕಂಡುಬಂದಿದೆ; ಅದರೊಂದಿಗೆ ನಕಾರಾತ್ಮಕ ಶಕ್ತಿಯೂ ಇತ್ತು; ಆದರೆ ಮಾಂಸಾಹಾರಿ ಪದಾರ್ಥಗಳ ಘಟಕಗಳನ್ನು ಹೋಲಿಸಿದರೆ ಬಹಳ ಕಡಿಮೆ ಪ್ರಮಾಣದಲ್ಲಿ ಇತ್ತು. ಮೇಲಿನ ಪದಾರ್ಥಗಳನ್ನು ಸೇವಿಸುವ ವ್ಯಕ್ತಿಯು ಪದಾರ್ಥವನ್ನು ಸೇವಿಸಿದ ೫ ನಿಮಿಷಗಳ ನಂತರ ತೆಗೆದುಕೊಂಡ ಪರೀಕ್ಷೆಯಲ್ಲಿ ಅವನ ನಕಾರಾತ್ಮಕ ಶಕ್ತಿಯು ಗಮನಾರ್ಹವಾಗಿ ಹೆಚ್ಚಾಗಿರುವುದು ಕಂಡು ಬಂದಿದೆ. ವಿವಿಧ ಪದಾರ್ಥಗಳನ್ನು ಸೇವಿಸಿದ ನಂತರ, ಅವನ ನಕಾರಾತ್ಮಕ ಶಕ್ತಿಯ ಪ್ರಭಾವಳಿಯು ‘ಚಿಕನ್ ಫ್ರೈ’ನಲ್ಲಿ 130 ಮೀಟರ್, ‘ಫಿಶ್ ಪ್ರೈ’ಯಲ್ಲಿ 127 ಮೀಟರ್, ‘ಆಮ್ಲೆಟ್’ನಲ್ಲಿ 88 ಮೀಟರ್ ಮತ್ತು ‘ಮಿಕ್ಸ್ ವೆಜಿಟೇಬಲ್’ನಲ್ಲಿ 73 ಮೀಟರ್ ಇತ್ತು.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಅಡುಗೆಮನೆಯಲ್ಲಿ ಸೇವೆ ಮಾಡುತ್ತಿದ್ದ ಸಂತ ಸಾಧಕಿಯು ತಯಾರಿಸಿದ ಹೂಕೋಸಿನ ಒಣ ಪಲ್ಯವನ್ನು ಸೇವಿಸಿದ ನಂತರ ಆ ವ್ಯಕ್ತಿಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಕಂಡುಬಂದಿಲ್ಲ; ಆದರೆ ಅವರ ಸಕಾರಾತ್ಮಕ ಶಕ್ತಿಯ ಪ್ರಭಾವಳಿಯು 17.3 ಮೀಟರ್‌ನಷ್ಟು ಕಂಡುಬಂದಿದೆ.

ಆಹಾರದ ಕುರಿತಾದ ಸಂಶೋಧನೆಯಿಂದ ಸ್ಪಷ್ಟವಾಗುವುದೆಂದರೆ, ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಕಾರಾತ್ಮಕ ಆಹಾರವು ವ್ಯಕ್ತಿಯ ಸರ್ವಾಂಗೀಣ ಆರೋಗ್ಯಕ್ಕೆ ಒತ್ತು ನೀಡುತ್ತದೆ. ಇದಕ್ಕಾಗಿ ಅಧ್ಯಾತ್ಮಿಕದೃಷ್ಟಿಯಲ್ಲಿ ಸಕಾರಾತ್ಮಕ ಆಹಾರ, ಅಡುಗೆ ಮಾಡುವಾಗ, ಅದೇ ರೀತಿ ಆಹಾರವನ್ನು ಸೇವಿಸುವಾಗ ನಾಮಜಪ ಮಾಡುವುದು ಅಗತ್ಯವಾಗಿದೆ ಎಂಬುದು ಸ್ಪಷ್ಟವಾಯಿತು.