ಪರಾತ್ಪರ ಗುರು ಡಾ. ಆಠವಲೆಯವರ ವೈದ್ಯಕೀಯ ಪರೀಕ್ಷೆಗಾಗಿ ತೆಗೆದ ರಕ್ತದ ಮಾದರಿಯಿಂದ ಅಧಿಕ ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿತವಾಗುವುದು

ಸಂತರ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

‘ಪರಾತ್ಪರ ಗುರು ಡಾ. ಆಠವಲೆಯವರು’ ಸಾಧಕರು, ಸಂತರು ಮತ್ತು ಸ್ವತಃ ತಮ್ಮ ದೇಹದ (ಕೂದಲು, ಉಗುರು, ತ್ವಚೆ ಇವುಗಳಿಗೆ ಸಂಬಂಧಿಸಿದ) ಮತ್ತು ಅವರು ನಿಯಮಿತವಾಗಿ ಉಪಯೋಗಿಸುತ್ತಿರುವ ವಸ್ತುಗಳ (ಬಟ್ಟೆ, ದೈನಂದಿನ ಉಪಯೋಗದಲ್ಲಿರುವ ವಸ್ತು ಇತ್ಯಾದಿಗಳಲ್ಲಿ) ಮೇಲೆ ಸಾಧನೆಯ ಕಾರಣದಿಂದ ಆಗಿರುವ ವೈಶಿಷ್ಟ್ಯಪೂರ್ಣ ಬದಲಾವಣೆಗಳ ಸಂದರ್ಭದಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಪರಾತ್ಪರ ಗುರು ಡಾ. ಆಠವಲೆಯವರಿಗೆ ಸಂಬಂಧಿಸಿದ ಸಂಶೋಧನೆ ಮಾಡಿದ್ದರಿಂದ ಅಧ್ಯಾತ್ಮದ ಅನೇಕ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ. ಇಂತಹುದೇ ಒಂದು ವೈಶಿಷ್ಟ್ಯಪೂರ್ಣ ಸಂಶೋಧನೆಯನ್ನು ಮುಂದೆ ನೀಡಲಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ವೈದ್ಯಕೀಯ ಪರೀಕ್ಷೆಗಾಗಿ ತೆಗೆದ ರಕ್ತದ ಮಾದರಿಯಿಂದ ಪ್ರಕ್ಷೇಪಿಸಲ್ಪಡುವ ಸ್ಪಂದನಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ರಾಮನಾಥಿ (ಗೋವಾ) ಇಲ್ಲಿಯ ಸನಾತನದ ಆಶ್ರಮದಲ್ಲಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ನಡೆಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳು ಮತ್ತು ಅವುಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨೦೧೭ ನೇ ಇಸವಿಯಲ್ಲಿ ಸನಾತನದ ಕೆಲವು ಸಾಧಕರು ಮತ್ತು ಸಂತರ ವೈದ್ಯಕೀಯ ಪರೀಕ್ಷೆಗಾಗಿ ತೆಗೆದುಕೊಂಡ ರಕ್ತದ ಮಾದರಿಗಳನ್ನು ‘ಯುನಿವರ್ಸಲ್ ಔರಾ ಸ್ಕ್ಯಾನರ್'(ಯು.ಎ.ಎಸ್.) ಈ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ೨೦೧೭ ನೇ ಇಸವಿಯಿಂದ ಮುಂದೆ ಕೆಲವು ತಿಂಗಳುಗಳ ಅಂತರದಲ್ಲಿ ಪರಾತ್ಪರ ಗುರು ಡಾಕ್ಟರರ ವೈದ್ಯಕೀಯ ಪರೀಕ್ಷೆಗಾಗಿ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಯಿತು. ಆಗ ಪ್ರತಿಸಲವೂ ಅವರ ರಕ್ತದ ಮಾದರಿಯನ್ನು ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು. ಅವುಗಳಲ್ಲಿ ಕೆಲವು ಆಯ್ದ ನಿರೀಕ್ಷಣೆಗಳನ್ನು ಮುಂದೆ ನೀಡಲಾಗಿದೆ.

ಟಿಪ್ಪಣಿ ೧ – ‘ಔರಾ ಸ್ಕ್ಯಾನರ್’ ೮೫ ಡಿಗ್ರಿ ಕೋನ ವಾಲಿತು. ‘ಔರಾ ಸ್ಕ್ಯಾನರ್’ ೧೮೦ ಡಿಗ್ರಿ ಕೋನ ತೋರಿಸಿದರೆ ಮಾತ್ರ ಪ್ರಭಾವಲಯ ಅಳತೆ ಮಾಡಲು ಸಾಧ್ಯವಾಗುತ್ತದೆ.

ಟಿಪ್ಪಣಿ ೨ – ‘ಔರಾ ಸ್ಕ್ಯಾನರ್ ೩೦ ಡಿಗ್ರಿ ಕೋನ ವಾಲಿತು.

ಸೌ. ಮಧುರಾ ಕರ್ವೆ

೧ ಅ. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ರಕ್ತದ ಮಾದರಿಯಲ್ಲಿ ಅಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕರ ರಕ್ತರ ಮಾದರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು; ಆದರೆ ಅದರ ಪ್ರಭಾವಲಯ ಇರಲಿಲ್ಲ.

೧ ಅ ೧. ವಿಶ್ಲೇಷಣೆ : ಸಾಮಾನ್ಯ ವ್ಯಕ್ತಿಯಲ್ಲಿ ರಜ-ತಮಗಳ ಪ್ರಮಾಣ ಅಧಿಕವಿರುತ್ತದೆ. ವ್ಯಕ್ತಿಗೆ ಆಧ್ಯಾತ್ಮಿಕ ತೊಂದರೆಯಿದ್ದರೆ ಅವನ ತೊಂದರೆಗನುಸಾರ ಅವನಲ್ಲಿ ತೊಂದರೆದಾಯಕ ಸ್ಪಂದನಗಳು ಇರುತ್ತವೆ. ವ್ಯಕ್ತಿಯು ಸಾಧನೆಯನ್ನು ಮಾಡುತ್ತಿದ್ದರೆ,  ಅವನ ಸಾಧನೆ ಹೆಚ್ಚಾದಂತೆಲ್ಲ ಅವನಲ್ಲಿ ಸತ್ತ್ವಗುಣಗಳ ಪ್ರಮಾಣವೂ ವೃದ್ಧಿಸುತ್ತದೆ. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಿಗೆ ‘ಆಧ್ಯಾತ್ಮಿಕ ತೊಂದರೆ ಇದ್ದ ಕಾರಣ ಅವನ ರಕ್ತದ ಮಾದರಿಯಲ್ಲಿ ಅಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡು ಬಂದಿತು. ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ಸಾಧಕನ ರಕ್ತದ ಮಾದರಿಯಲ್ಲಿ ಅಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು. ಇದರ ಕಾರಣವೆಂದರೆ, ಅವನ ಸಾಧನೆಯಿಂದ ಅವನಲ್ಲಿ ಸತ್ತ್ವಗುಣ ವೃದ್ಧಿಸಲು ಪ್ರಾರಂಭವಾಗಿದೆ. ಈ ಇಬ್ಬರು ಸಾಧಕರ ಸಾಧನೆಯು ಹೆಚ್ಚಾದಂತೆ ಅವರಲ್ಲಿರುವ ಸತ್ತ್ವಗುಣ ವೃದ್ಧಿಸುವುದು ಮತ್ತು ಅವರ ದೇಹದ ಮೇಲೆ ಅದರ ಸಕಾರಾತ್ಮಕ ಪರಿಣಾಮವಾಗುವುದು.

೧ ಆ. ಇಬ್ಬರೂ ಸಂತರ ಆಧ್ಯಾತ್ಮಿಕ ಮಟ್ಟದಲ್ಲಿ ವ್ಯತ್ಯಾಸ ಇರುವ ಕಾರಣ ಅವರ ರಕ್ತದ ಮಾದರಿಗಳಿಂದ ಪ್ರಕ್ಷೇಪಣೆಗೊಳ್ಳುವ ಚೈತನ್ಯದ ಪ್ರಮಾಣವೂ ಭಿನ್ನವಾಗಿರುವುದು : ಪೂ.ಸಿರಿಯಾಕ ವಾಲೆಯವರ ರಕ್ತದ ಮಾದರಿಯಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ೨.೧೦ ಮೀಟರ್ ಮತ್ತು ಪರಾತ್ಪರ ಗುರು ಡಾಕ್ಟರರ ರಕ್ತದ ಮಾದರಿಯಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೫.೯೦ ಮೀಟರ್‌ಗಳಷ್ಟು ಇದೆ.

೧ ಆ ೧. ವಿಶ್ಲೇಷಣೆ : ಸಾಧನೆಯನ್ನು ಮಾಡದಿರುವ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೨೦ ರಷ್ಟು ಇರುತ್ತದೆ. ಒಳ್ಳೆಯ ಸಾಧನೆಯನ್ನು ಮಾಡಿದ ವ್ಯಕ್ತಿಯ ಮಟ್ಟ ಶೇ. ೭೦ ರಷ್ಟು ಆದಾಗ ಆ ವ್ಯಕ್ತಿಯು ಸಂತನಾಗುತ್ತಾನೆ. ಸಾಧನೆಯಿಂದಾಗಿ ಸಂತರಲ್ಲಿ ಚೈತನ್ಯ ನಿರ್ಮಾಣವಾಗಿರುತ್ತದೆ. ಸಂತರ ಆಧ್ಯಾತ್ಮಿಕ ಮಟ್ಟ ಹೆಚ್ಚಾದಂತೆಲ್ಲ, ಅವರಿಂದ ಪ್ರಕ್ಷೇಪಿತಗೊಳ್ಳುವ ಚೈತನ್ಯದ ಪ್ರಮಾಣವೂ ವೃದ್ಧಿಸುತ್ತದೆ. ಶೇ. ೭೦-೭೯ ರಷ್ಟು ಮಟ್ಟಕ್ಕೆ ‘ಸಂತ (ಗುರು)’, ಶೇ. ೮೦-೮೯ ಮಟ್ಟಕ್ಕೆ ‘ಸದ್ಗುರು’ ಮತ್ತು ಶೇ. ೯೦ ಮಟ್ಟದ ಮುಂದೆ ‘ಪರಾತ್ಪರ ಗುರು’ ಪದವಿ ಪ್ರಾಪ್ತವಾಗುತ್ತದೆ. ಪೂ. ಸಿರಿಯಾಕ ವಾಲೆ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರಿಬ್ಬರೂ ಸಂತರಾಗಿರುವುದರಿಂದ ಅವರಿಂದ ಚೈತನ್ಯ ಪ್ರಕ್ಷೇಪಿತಗೊಳ್ಳುತ್ತಿದೆ; ಆದರೆ ಅದರ ಪ್ರಮಾಣ ಬೇರೆಯಾಗಿದೆ. ಇದರ ಕಾರಣವೆಂದರೆ, ಪೂ. ಸಿರಿಯಾಕ ವಾಲೆ ಇವರು ‘ಗುರು’ ಪದವಿಯಲ್ಲಿ ಮತ್ತು ಪರಾತ್ಪರ ಗುರು ಡಾ, ಆಠವಲೆಯವರು ‘ಪರಾತ್ಪರ ಗುರು’ ಪದವಿಯಲ್ಲಿನ ಸಂತರಾಗಿದ್ದಾರೆ. (ಪೂ. ಸಿರಿಯಾಕ್ ವಾಲೆಯವರು ೧೨.೩.೨೦೧೩ ರಂದು ‘ಸಂತ’ ಪದವಿಯಲ್ಲಿ ಮತ್ತು ೪.೮.೨೦೧೮ ರಂದು ‘ಸದ್ಗುರು’ ಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಈ ನಿರೀಕ್ಷಣೆಯನ್ನು ಪೂ. ಸಿರಿಯಾಕ ವಾಲೆಯವರು ‘ಸದ್ಗುರು’ ಪದವಿಯಲ್ಲಿ ವಿರಾಜಮಾನರಾಗುವ ಪೂರ್ವದಲ್ಲಿ ಮಾಡಿರುವುದರಿಂದ ಲೇಖನದಲ್ಲಿ ಅವರನ್ನು ‘ಪೂ. ಸಿರಿಯಾಕ ವಾಲೆ’ ಎಂದು ಉಲ್ಲೇಖಿಸಲಾಗಿದೆ.)

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೯.೮.೨೦೨೧)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು