Ramanavami Procession Permission Denied : ಶ್ರೀರಾಮನವಮಿ ಮೆರವಣಿಗೆಗೆ ಬಂಗಾಳದ ಪೊಲೀಸರಿಂದ ಅನುಮತಿ ನಿರಾಕರಣೆ

ಕೊಲಕಾತಾ (ಬಂಗಾಳ) – ಈ ವರ್ಷ ಶ್ರೀ ರಾಮನವಮಿಯ ಮೆರವಣಿಗೆ ನಡೆಸುವುದಕ್ಕಾಗಿ ‘ಅಂಜನಿಪುತ್ರ ಸೇನೆ’ಯಿಂದ ಸಲ್ಲಿಸಲಾದ ಅರ್ಜಿಯನ್ನು ಹಾವಡ ಪೊಲೀಸರು ತಳ್ಳಿ ಹಾಕಿದ್ದಾರೆ. ಪೊಲೀಸರ ಪ್ರಕಾರ, 2022 ಮತ್ತು 2023 ರಲ್ಲಿ ಮೆರವಣಿಗೆಯ ಸಮಯದಲ್ಲಿ ಇದೇ ಮಾರ್ಗದಲ್ಲಿ ಧಾರ್ಮಿಕ ಹಿಂಸಾಚಾರ ನಡೆದಿತ್ತು, ಆದ್ದರಿಂದ ಇದು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ, ಎಂದು ಹೇಳಿದ್ದಾರೆ. (ಈ ರೀತಿಯ ಮನವಿಯನ್ನು ತಿರಸ್ಕರಿಸಲು ಪೊಲೀಸರು ಭಾರತದವರಾಗಿದ್ದಾರೋ ಅಥವಾ ಪಾಕಿಸ್ತಾನದವರೋ? ಹಿಂಸಾಚಾರ ಮತಾಂಧರ ಉದ್ಘಾಟತನದಿಂದ, ಮಮತಾ ಸರಕಾರದ ಮುಸಲ್ಮಾನ ಓಲೈಕೆಯಿಂದ ಮತ್ತು ಪೊಲೀಸರ ನಿಷ್ಕ್ರಿಯತೆಯಿಂದ ನಡೆದಿತ್ತು. ಇದರಲ್ಲಿ ಹಿಂದುಗಳ ತಪ್ಪೇನು ? ಬಂಗಾಲದಲ್ಲಿ ಇಲ್ಲಿಯವರೆಗೆ ಮತಾಂಧದಿಂದ ಅನೇಕ ಪೊಲೀಸ ಠಾಣೆಗಳು ಕೂಡ ಸುಟ್ಟು ಹಾಕಲಾಗಿದೆ. ಆದ್ದರಿಂದ ಅವುಗಳು ಮುಚ್ಚಲಾಗಿದೆಯೇ? – ಸಂಪಾದಕರು) 2023 ರಲ್ಲಿ ಕೂಡ ಇದೇ ಕಾರಣದಿಂದ ಅನುಮತಿ ನಿರಾಕರಿಸಲಾಗಿತ್ತು.

ಏಪ್ರಿಲ್ 17, 2024 ರಂದು ನಡೆಸುವ ಮೆರವಣಿಗೆಯಲ್ಲಿ ಕೋಲಾಕಾತಾ ಉಚ್ಚ ನ್ಯಾಯಾಲಯದ ಷರತ್ತು ಉಲ್ಲಂಘನೆ ಮಾಡಿರುವ ಬಗ್ಗೆ ಕೂಡ ಪೊಲೀಸರು ದಾವೆ ಮಾಡಿದ್ದರು. ಆಯೋಜಕರು ಎರಡು ಪರ್ಯಾಯ ಮಾರ್ಗ ಸೂಚಿಸಿದ್ದಾರೆ, ಆದರೂ ಮೂಲ ಮಾರ್ಗಕ್ಕೆ ಅನುಮತಿ ತಿರಸ್ಕರಿಸಲಾಗಿದೆ.

ರಸ್ತೆಯಲ್ಲಿ ನಮಾಜ ಮಾಡಿದರೆ ಸರಕಾರಕ್ಕೆ ಯಾವುದೇ ಅಡಚಣೆ ಇಲ್ಲ; ಆದರೆ ಶ್ರೀ ರಾಮನವಮಿಗೆ ಆಗುತ್ತದೆ ! – ‘ಅಂಜನಿ ಪುತ್ರ ಸೇನೆ’

‘ಅಂಜನಿ ಪುತ್ರ ಸೇನೆ’ ಸಂಸ್ಥಾಪಕ ಕಾರ್ಯದರ್ಶಿ ಸುರೇಂದ್ರ ವರ್ಮಾ ( ಸೌಜನ್ಯ : ANI)

ಇದರ ಬಗ್ಗೆ ‘ಅಂಜನಿ ಪುತ್ರ ಸೇನೆ’ ಸಂಸ್ಥಾಪಕ ಕಾರ್ಯದರ್ಶಿ ಸುರೇಂದ್ರ ವರ್ಮಾ ಅವರು, ಈ ನಿರ್ಧಾರವನ್ನು ಆಕ್ಷೇಪಿಸಿದ್ದಾರೆ. ಸರಕಾರ ಪ್ರತಿ ವರ್ಷ ಇದೇ ಕಾರಣ ನೀಡಿ ಶ್ರೀರಾಮನವಮಿಯ ಮೆರವಣಿಗೆ ನಿಲ್ಲಿಸುವ ಪ್ರಯತ್ನ ಮಾಡುತ್ತದೆ. ಅವರಿಗೆ ‘ಈದ್ ದಿನದಂದು ಜನರು ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ, ಅದು ಆಡಳಿತಕ್ಕೆ ಸರಿಹೋಗುತ್ತದೆ; ಆದರೆ ಶ್ರೀರಾಮನವಮಿ ಬಂದಾಗ ಆಡಳಿತಕ್ಕೆ ತೊಂದರೆಗಳು ಬರುತ್ತವೆ’ ಎಂದು ಅವರು ಹೇಳಿದ್ದಾರೆ. ಪೊಲೀಸರ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ‘ಅಂಜನಿ ಪುತ್ರ ಸೇನೆ’ ನಿರ್ಧರಿಸಿದೆ.

ಸಂಪಾದಕೀಯ ನಿಲುವು

ಬಂಗಾಲದಲ್ಲಿ ರಾವಣ ರಾಜ್ಯ ಇರುವುದರಿಂದ ಅಲ್ಲಿ ಇದಕ್ಕಿಂತಲೂ ಬೇರೆ ಏನು ನಡೆಯಲು ಸಾಧ್ಯ ?