ಜಾರ್ಖಂಡನಲ್ಲಿ ಮುಸಲ್ಮಾನರಿಂದ ಆದಿವಾಸಿಗಳ ಉತ್ಸವಗಳ ಮೇಲೆ ದಾಳಿ ಅನೇಕರಿಗೆ ಗಾಯ
ರಾಂಚಿ (ಜಾರ್ಖಂಡ) – ಇಲ್ಲಿ ಏಪ್ರಿಲ್ 1 ರಂದು ಆದಿವಾಸಿ ಸಮುದಾಯದ ಸರನಾ ಪಂಥದ ‘ಸರಹುಲ’ ಹಬ್ಬವನ್ನು ಆಚರಿಸುತ್ತಿದ್ದಾಗ ಮತಾಂಧ ಮುಸಲ್ಮಾನರು ಅದರ ಮೇಲೆ ದಾಳಿ ಮಾಡಿದ ಘಟನೆಗಳು ನಡೆದವು. ಹೆಥಬಾಲುವಿನಲ್ಲಿ ಈ ಹಬ್ಬದ ಸಂದರ್ಭದಲ್ಲಿ ಮೆರವಣಿಗೆ ನಡೆಯುತ್ತಿತ್ತು. ಆ ಸಮಯದಲ್ಲಿ ಅವರ ಮೇಲೆ ದಾಳಿ ಮಾಡಲಾಯಿತು. ಇದರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಹಬ್ಬಗಳ ಸಮಯದಲ್ಲಿ ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಪುರುಷರು ಮತ್ತು ಮಹಿಳೆಯರು ಬೆಂಕಿಯ ಸುತ್ತಲೂ ತಿರುಗುತ್ತಾ ನೃತ್ಯ ಮಾಡುತ್ತಾರೆ.
1. ಧ್ವಜ ವಿವಾದ – ಮುಸಲ್ಮಾನರು ರಸ್ತೆಯ ಎರಡೂ ಬದಿಗಳಲ್ಲಿ ವಿದ್ಯುತ್ ದೀಪಗಳನ್ನು ಹಾಕಿದ್ದರು. ಸರಹುಲನ ಸಂದರ್ಭದಲ್ಲಿ ಆದಿವಾಸಿ ಸಮುದಾಯವು ಅಲ್ಲಿ ಸರನಾ ಧ್ವಜವನ್ನು ಹಾರಿಸಿತು. ಒಂದು ದಿನ ಮೊದಲೇ ಈ ಬಗ್ಗೆ ಎರಡೂ ಕಡೆಗಳಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಏಪ್ರಿಲ್ 1 ರಂದು ಆದಿವಾಸಿ ಸಮುದಾಯದ ಜನರು ಸರಹುಲ ಆಚರಿಸಲು ಇಲ್ಲಿಗೆ ಬಂದಾಗ ಹೊಡೆದಾಟ ನಡೆಯಿತು. ಇದರಲ್ಲಿ ಮೆರವಣಿಗೆಯ 8 ಜನರು ಗಾಯಗೊಂಡಿದ್ದಾರೆ, ಆದರೆ ಮುಸಲ್ಮಾನರ ಪ್ರಕಾರ, ಅವರ 4 ಜನರು ಗಾಯಗೊಂಡಿದ್ದಾರೆ.
2. ಶಸ್ತ್ರಾಸ್ತ್ರಗಳ ಪ್ರದರ್ಶನ – ಗ್ರಾಮಸ್ಥರ ಪ್ರಕಾರ, ಆರಿಫ ಅನ್ಸಾರಿ ಎಂಬಾತನು ಜಗಳದ ಸಮಯದಲ್ಲಿ ಆಯುಧಗಳನ್ನು ತೋರಿಸಿದನು. ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ; ಆದರೆ ಪೊಲೀಸರು ಇನ್ನೂ ಈ ಆರೋಪಗಳನ್ನು ದೃಢಪಡಿಸಿಲ್ಲ.
3. ರಾಜಕೀಯ ಪ್ರತಿಕ್ರಿಯೆ – ಭಾಜಪ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ಮುಖ್ಯಮಂತ್ರಿ ಹೇಮಂತ ಸೋರೆನ ಅವರು ಇಲ್ಲಿನ ಸಾರನಾ ಸ್ಥಳಗಳನ್ನು ರಕ್ಷಿಸಲು ಸಾಧ್ಯವಿಲ್ಲ ಅಥವಾ ಸರಹುಲ ಉತ್ಸವವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುರಾಜ್ಯದ ಜಾರ್ಖಂಡ ಮುಕ್ತಿ ಮೋರ್ಚಾ ಸರಕಾರದ ಮುಖ್ಯಮಂತ್ರಿ ಹೇಮಂತ ಸೋರೆನ ಸ್ವತಃ ಆದಿವಾಸಿ ಸಮುದಾಯದವರಾಗಿದ್ದಾರೆ. ಆದ್ದರಿಂದ ಅವರು ಈಗ ಆದಿವಾಸಿಗಳಿಗೆ ನ್ಯಾಯ ಒದಗಿಸುತ್ತಾರೋ ಅಥವಾ ಮುಸಲ್ಮಾನರನ್ನು ಓಲೈಸುತ್ತಾರೋ ಎಂಬುದನ್ನು ನೋಡಬೇಕಿದೆ ! |