ಭಾರತವು ಬಂಗಾಳ ಕೊಲ್ಲಿಯಲ್ಲಿ 6 ಸಾವಿರ 500 ಕಿ.ಮೀ. ಕರಾವಳಿಯನ್ನು ಹೊಂದಿದೆ! – ಭಾರತದ ವಿದೇಶಾಂಗ ಸಚಿವ ಡಾ. ಜೈಶಂಕರ್

ಮಹಮ್ಮದ್ ಯೂನಸ್ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ ಭಾರತದ ವಿದೇಶಾಂಗ ಸಚಿವ ಡಾ. ಜೈಶಂಕರ್!

ನವದೆಹಲಿ – ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ‘ಬಿಮ್ಸ್ಟೆಕ್’ಗೆ ಬದ್ಧವಾಗಿರುವುದನ್ನು ಭಾರತವು ಅರಿತಿದೆ. ಬಂಗಾಳ ಕೊಲ್ಲಿಯು ಸುಮಾರು 6 ಸಾವಿರ 500 ಕಿ.ಮೀ. ಉದ್ದದ ಕರಾವಳಿ ದಡವನ್ನು ಹೊಂದಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಅವರನ್ನು ಪರೋಕ್ಷವಾಗಿ ಟೀಕಿಸಿದರು. ಅವರು ಥೈಲ್ಯಾಂಡನಲ್ಲಿ ನಡೆದ ಆರನೇ ಬಿಮ್ಸ್ಟೆಕ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕೆಲವು ದಿನಗಳ ಹಿಂದೆ, ಮಹಮ್ಮದ ಯೂನಸ್ ಅವರು ಚೀನಾ ಪ್ರವಾಸದಲ್ಲಿದ್ದಾಗ ಈಶಾನ್ಯ ಭಾರತವು ನಾಲ್ಕೂ ಕಡೆಯಿಂದ ಭೂಮಿಯಿಂದ ಆವೃತವಾಗಿದ್ದು, ಅದನ್ನು ಸಮುದ್ರದ ಮೂಲಕ ತಲುಪಲು ನಮ್ಮ ದೇಶದ ಮೂಲಕ ಹೋಗಬೇಕಾಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಜೈಶಂಕರ್ ಈ ಮೂಲಕ ಪ್ರತ್ಯುತ್ತರ ನೀಡಿದರು.

ಈ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಮುಂತಾದವರು ಉಪಸ್ಥಿತರಿದ್ದರು.
ಮಹಮ್ಮದ್ ಯೂನಸ್ ಪ್ರಧಾನಿ ಮೋದಿಯವರನ್ನು ಪ್ರತ್ಯೇಕವಾಗಿ ಭೇಟಿಯಾಗಲು ವಿನಂತಿಸಿದ್ದಾರೆ; ಆದರೆ ಭಾರತ ಇನ್ನೂ ಈ ಭೇಟಿಗೆ ಒಪ್ಪಿಗೆ ನೀಡಿಲ್ಲ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುಂದೆ ಮಾತನಾಡಿ:

1. ಬಂಗಾಳ ಕೊಲ್ಲಿಯಲ್ಲಿ ನಾವು ಸುಮಾರು 6 ಸಾವಿರ 500 ಕಿ.ಮೀ. ಅತಿ ಉದ್ದದ ಕರಾವಳಿ ದಡವನ್ನು ಹೊಂದಿದ್ದೇವೆ. ನಮ್ಮ ಈಶಾನ್ಯ ಪ್ರದೇಶವು ರಸ್ತೆಗಳು, ರೈಲ್ವೆಗಳು, ಜಲಮಾರ್ಗಗಳು, ವಿದ್ಯುತ್ ಮಾರ್ಗಗಳು ಮತ್ತು ಜಲಮಾರ್ಗಗಳ ಹಲವಾರು ಜಾಲಗಳಿದ್ದು ಬಿಮ್ಸ್ಟೆಕ್ಗೆ ಸಂಪರ್ಕ ಕೇಂದ್ರವಾಗಿ ಮಾರ್ಪಡುತ್ತಿದೆ.

2. ತ್ರಿಪಕ್ಷೀಯ ಹೆದ್ದಾರಿ ಪೂರ್ಣಗೊಂಡ ನಂತರ, ಭಾರತದ ಈಶಾನ್ಯ ಭಾಗವು ಪೆಸಿಫಿಕ್ ಮಹಾಸಾಗರಕ್ಕೆ ಸಂಪರ್ಕ ಹೊಂದುತ್ತದೆ, ಇದು ನಿಜವಾಗಿಯೂ ಒಂದು ಪ್ರಮುಖ ಮೈಲಿಗಲ್ಲಾಗಿದೆ.

3. ಈ ವಿಶಾಲ ಭೌಗೋಳಿಕತೆಯಲ್ಲಿ ಸರಕುಗಳು, ಸೇವೆಗಳು ಮತ್ತು ಜನರ ಸುಗಮ ಪ್ರವಾಸಕ್ಕಾಗಿ ನಮ್ಮ ಸಹಕಾರ ಮತ್ತು ಸೌಲಭ್ಯವು ಅಗತ್ಯವಾಗಿದೆ ಎಂಬುದು ನಮಗೆ ತಿಳಿದಿದೆ. ಈ ಭೌಗೋಳಿಕ-ಕಾರ್ಯತಂತ್ರದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕಳೆದ ದಶಕದಲ್ಲಿ ನಾವು ಬಿಮ್ಸ್ಟೆಕ್ ಅನ್ನು ಬಲಪಡಿಸುತ್ತಿದ್ದೇವೆ.

4. ಭಾರತವು ಸಹಕಾರವು ಒಂದು ಸಮಗ್ರ ವಿಧಾನವಾಗಿದೆ ಮತ್ತು ಒಂದರ ಮೇಲೊಂದನ್ನು ಆಯ್ಕೆ ಮಾಡುವ ವಿಷಯವಲ್ಲ ಎಂದು ನಂಬುತ್ತದೆ.

ಸಂಪಾದಕೀಯ ನಿಲುವು

ಭಾರತವು ಕೇವಲ ಮಾತುಗಳ ಮೂಲಕ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಬಾರದು, ಪ್ರತ್ಯಕ್ಷವಾಗಿ ಕ್ರಮ ಕೈಕೊಂಡು, ಅದಕ್ಕೆ ತನ್ನ ಯೋಗ್ಯತೆಯನ್ನು ತೋರಿಸಿ ದೇಶ ಮತ್ತು ಹಿಂದೂಗಳನ್ನು ರಕ್ಷಿಸಬೇಕು!