Suvendu Adhikari Bengal Sri Ram Temple : ಬಂಗಾಳದಲ್ಲಿ ಅಯೋಧ್ಯೆಯಂತೆ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ! – ಸುವೆಂದು ಅಧಿಕಾರಿ, ಭಾಜಪ

ಭಾಜಪದ ಹಿರಿಯ ನಾಯಕ ಸುವೆಂದು ಅಧಿಕಾರಿ

ಕೋಲಕಾತಾ – ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶ್ರೀರಾಮನವಮಿ ಶಾಂತಿಯುತವಾಗಿ ಆಚರಿಸಲು ಕರೆ ನೀಡಿದ್ದಾರೆ. ಈ ಕರೆ ನೀಡುವಾಗ ಅವರು ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಭಾಜಪದ ಹಿರಿಯ ನಾಯಕ ಸುವೆಂದು ಅಧಿಕಾರಿ ಅವರು ಬಂಗಾಳದಲ್ಲಿ ಅಯೋಧ್ಯೆಯಂತೆ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಅಧಿಕಾರಿ ಅವರು, “ಶ್ರೀರಾಮನವಮಿಯ ದಿನ ನಂದಿಗ್ರಾಮದಲ್ಲಿ ಶ್ರೀರಾಮ ಮಂದಿರದ ಶಂಕುಸ್ಥಾಪನೆ ಮಾಡಲಾಗುವುದು. ಈ ಮಂದಿರ ಸುಮಾರು 1.5 ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿದೆ. ಇದು ಬಂಗಾಳದ ಅತಿದೊಡ್ಡ ಶ್ರೀರಾಮ ಮಂದಿರವಾಗಲಿದೆ.” ಎಂದು ಹೇಳಿದರು.

1. ಕೆಲವು ದಿನಗಳ ಹಿಂದೆ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರಕಾರವನ್ನು ಟೀಕಿಸಿದ್ದರು. ಅವರು  “ಕೇಂದ್ರ ಸರಕಾರ ವಿವೇಕಾನಂದರ ಧರ್ಮವಲ್ಲದಂತಹ ಧರ್ಮವನ್ನು ಪಾಲಿಸುತ್ತಿದೆ. ಸರಕಾರ ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆಯೇ? ಶ್ರೀರಾಮನವಮಿ ಬರುತ್ತಿದೆ. ಈದ್ ಹಬ್ಬವು ಇತ್ತೀಚೆಗಷ್ಟೇ ಮುಗಿದಿದೆ. ಶ್ರೀರಾಮನವಮಿ ಶಾಂತಿಯುತವಾಗಿ ಆಚರಿಸಬೇಕೆಂದು ನಾನು ಬಯಸುತ್ತೇನೆ. ಎಲ್ಲಾ ಧರ್ಮಗಳು ಶಾಂತಿಯನ್ನು ಕಾಪಾಡಬೇಕೆಂದು ನಾನು ಕರೆ ನೀಡುತ್ತೇನೆ.” ಎಂದು ಹೇಳಿದರು.

2. ಇದಕ್ಕೆ ಪ್ರತಿಕ್ರಿಯೆಯಾಗಿ ಅಧಿಕಾರಿ ಅವರು, “ಮಮತಾ ಬ್ಯಾನರ್ಜಿ ಅವರ ‘ಶಾಂತಿ ಸೈನಿಕರು’ (ಮುಸ್ಲಿಮರು) 2023 ರಲ್ಲಿ ಶ್ರೀರಾಮನವಮಿಯ ಸಮಯದಲ್ಲಿ ವಿವಿಧ ಸ್ಥಳಗಳಲ್ಲಿ ಮೆರವಣಿಗೆಗಳ ಮೇಲೆ ದಾಳಿ ಮಾಡಿದ್ದರು. ಮಮತಾ ಬ್ಯಾನರ್ಜಿ ಅವರು ಮೊದಲು ಅವರನ್ನು ನಿಯಂತ್ರಿಸಬೇಕು. ಹಿಂದೂ ಸಮಾಜ ಗಲಭೆಗಳನ್ನು ಮಾಡುವುದಿಲ್ಲ. ಶ್ರೀರಾಮನವಮಿಯಂದು ಮನೆಗಳಿಂದ ಹೊರಬಂದು ಬೀದಿಗಳಲ್ಲಿ ‘ಜೈ ಶ್ರೀರಾಮ’ ಘೋಷಣೆಗಳನ್ನು ಕೂಗಲು ಹಿಂದೂಗಳು ನಿರ್ಧರಿಸಿದ್ದಾರೆ. ಆ ದಿನ ಪ್ರತಿಯೊಬ್ಬ ಹಿಂದೂವು ತನ್ನ ಕೈಯಲ್ಲಿ ಧ್ವಜವನ್ನು ಹಿಡಿಯುತ್ತಾನೆ.”ಎಂದು ಹೇಳಿದರು.