Hindu Religious Sentiments Post : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪೋಸ್ಟ್‌ ಪ್ರಸಾರ; ಮುಸ್ಲಿಂ ಯುವಕನ ಬಂಧನ!

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪೋಸ್ಟ್‌ ಪ್ರಸಾರ; ಮುಸ್ಲಿಂ ಯುವಕನ ಬಂಧನ!

ಧಾರವಾಡ – ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪೋಸ್ಟ್ ಅನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಓರ್ವ ಮುಸ್ಲಿಂ ಯುವಕನನ್ನು ಪೋಲಿಸರು ಬಂಧಿಸಿದ್ದಾರೆ. ಧಾರವಾಡದ ಚೈತನ್ಯ ಕಾಲೋನಿ ನಿವಾಸಿ ಸಲೀಂ ಮಮದಾಪುರ್, ಇವನು ಯುಗಾದಿಯ ದಿನದಂದು ಹಿಂದೂ ಧರ್ಮವನ್ನು ಅವಮಾನಿಸುವ ಛಾಯಾಚಿತ್ರವನ್ನು ಪ್ರಸಾರ ಮಾಡಿದ್ದನು. ಈ ಮಾಹಿತಿ ತಿಳಿದ ನಂತರ, ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ತಿಳಿಸಿದರು. (ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟಾದಾಗ, ಹಿಂದೂಗಳು ಪೊಲೀಸರಿಗೆ ದೂರು ನೀಡಿ ಸುಮ್ಮನಾಗುತ್ತಾರೆ; ಆದರೆ, ಮುಸಲ್ಮಾನರ ವಿಷಯದಲ್ಲಿ ಹೀಗೆ ಸಂಭವಿಸಿದಾಗ, ಅವರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಆರೋಪಿಗಳ ಮೇಲೆ ಮಾರಣಾಂತಿಕ ದಾಳಿ ಮಾಡುತ್ತಾರೆ, ಇದನ್ನು ಗಮನದಲ್ಲಿಡಿ! – ಸಂಪಾದಕರು)

ಸಲೀಂ ಈ ಹಿಂದೆಯೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಇಂತಹ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ್ದನು. ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿದ್ಯಾಗಿರಿ ಪೊಲೀಸ್ ಠಾಣೆಗೆ ಕರೆದೊಯ್ದರು. ಈ ಸಮಯದಲ್ಲಿ, ಸಲೀಂನ ತಾಯಿ ಮತ್ತು ಸಹೋದರ ಅಲ್ಲಿಗೆ ಬಂದು ಪೊಲೀಸರು ಮತ್ತು ಹಿಂದೂ ಪರ ಸಂಘಟನೆಯ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.