ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳ ಮೇಲೆ ಧಾರ್ಮಿಕ ಸಂಸ್ಕಾರ ಮಾಡಿದುದರಿಂದ ಅವುಗಳ ಮೇಲಾದ ಸಕಾರಾತ್ಮಕ ಪರಿಣಾಮ

ವಿವಿಧ ಧಾರ್ಮಿಕ ಕೃತಿಗಳಿಗೆ ಸಂಬಂಧಿತ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ !

೧೬.೧೧.೨೦೨೧ ಈ ದಿನದಂದು ‘ತುಳಸಿ ವಿವಾಹ’ವು ಆರಂಭವಾಗುತ್ತಿದೆ. ಈ ನಿಮಿತ್ತ….

(ಎಡದಿಂದ) ಕೃಷ್ಣ ತುಳಸಿ ಮತ್ತು ರಾಮ ತುಳಸಿ

‘ಸಪ್ತರ್ಷಿ ಜೀವನಾಡಿಪಟ್ಟಿಯ (ಟಿಪ್ಪಣಿ) ಮಾಧ್ಯಮದಿಂದ ಮಾರ್ಗದರ್ಶನ ಮಾಡುವ ಮಹರ್ಷಿಗಳು ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳನ್ನು ಒಟ್ಟಿಗೆ, ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ಪರಿಸರದಲ್ಲಿ ನೆಡಲು ಹೇಳಿದ್ದರು. ಈ ಸಸಿಗಳನ್ನು ಭೂಮಿಯಲ್ಲಿ ನೆಡುವ ಮೊದಲು ಅವುಗಳ ಮೇಲೆ ಮೂರು ಧಾರ್ಮಿಕ ಸಂಸ್ಕಾರಗಳನ್ನು ಮಾಡಲಾಯಿತು. ಆ ಸಂಸ್ಕಾರಗಳನ್ನು ಮಾಡುವ ಮೊದಲು ಮತ್ತು ಮಾಡಿದ ನಂತರ ಆ ತುಳಸಿಯ ಸಸಿಗಳ ಮೇಲಾಗುವ ಪರಿಣಾಮವನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನಕ್ಕಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಈ ಉಪಕರಣದ ಸಹಾಯದಿಂದ ಗೋವಾದ ಸನಾತನ ಆಶ್ರಮದಲ್ಲಿ ಪರೀಕ್ಷಣೆಯನ್ನು ಮಾಡಲಾಯಿತು. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಕೆಳಗೆ ಕೊಡಲಾಗಿದೆ.

ಟಿಪ್ಪಣಿ : ಶಿವ-ಪಾರ್ವತಿಯರಲ್ಲಿ ಅಖಿಲ ಮನುಕುಲಕ್ಕೆ ಸಂಬಂಧಿಸಿದಂತೆ ನಡೆದ ಸಂವಾದವನ್ನು ಸಪ್ತರ್ಷಿಗಳು ಕೇಳಿಸಿಕೊಂಡರು. ಅವರು ಅದನ್ನು ಮನುಕುಲದ ಕಲ್ಯಾಣಕ್ಕಾಗಿ ಮತ್ತು ಜೀವಗಳ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಬರೆದಿಟ್ಟರು. ಅದೇ ಈ ನಾಡಿಭವಿಷ್ಯ ! ಸಾವಿರಾರು ವರ್ಷಗಳ ಹಿಂದೆ ಬರೆದಿಟ್ಟ ಒಂದು ಪ್ರಗಲ್ಭ(ಸಮೃದ್ಧ) ಜ್ಯೋಷಿಷ್ಯಶಾಸ್ತ್ರ ಇದಾಗಿದೆ. ನಾಡಿಭವಿಷ್ಯದ ಬಗ್ಗೆ ಕೌಶಿಕ, ಅಗಸ್ತಿ, ಭೃಗು, ಮುಂತಾದ ಋಷಿಗಳು ಬರೆದಿಟ್ಟಿರುವ ವಿಪುಲ ಗ್ರಂಥಗಳ ಪೈಕಿ ‘ಸಪ್ತರ್ಷಿ ಜೀವನಾಡಿ’ಯೂ ಒಂದಾಗಿದೆ. ಈ ಗ್ರಂಥವನ್ನು ತಮಿಳುನಾಡಿನ ಪೂ. ಡಾ. ಓಂ ಉಲಗನಾಥನ್ ಇವರು ವಾಚನ ಮಾಡುತ್ತಾರೆ.

೧. ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳನ್ನು ಆಶ್ರಮದ ಪರಿಸರದಲ್ಲಿ ಒಟ್ಟಿಗೆ ನೆಡುವ ಹಿಂದಿನ ಹಿನ್ನೆಲೆ

ತಮಿಳುನಾಡಿನ ಪೂ. ಡಾ. ಓಂ ಉಲಗನಾಥನ್ ಇವರು ಸಪ್ತರ್ಷಿ ಜೀವನಾಡಿಪಟ್ಟಿಯ ವಾಚನದ ಮೂಲಕ ಮಹರ್ಷಿಗಳು ಮಾಡಿದ ಮಾರ್ಗದರ್ಶನವನ್ನು ಸಾಧಕರಿಗೆ ಹೇಳುತ್ತಾರೆ. ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ರಾಮತತ್ತ್ವವಿದೆ, ಹಾಗೆಯೇ ಕೃಷ್ಣತತ್ತ್ವವೂ ಇದೆ’, ಎಂದು ಮಹರ್ಷಿಗಳು ಹೇಳಿದ್ದಾರೆ. ‘ರಾಮ ಮತ್ತು ಕೃಷ್ಣ ಈ ಎರಡೂ ತತ್ತ್ವಗಳಿಂದ ಸನಾತನದ ಸಾಧಕರಿಗೆ ಲಾಭವಾಗಬೇಕೆಂದು, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯಕ್ಕೆ ಶ್ರೀಕೃಷ್ಣ ಮತ್ತು ಶ್ರೀರಾಮ ಈ ಎರಡೂ ಅವತಾರಗಳ ಆಶೀರ್ವಾದ ಲಭಿಸಬೇಕೆಂದು’, ಮಹರ್ಷಿಗಳು ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳನ್ನು ವಿಧಿವತ್ತಾಗಿ ಕುಂಡದಲ್ಲಿ ನೆಡಲು ಹೇಳಿದ್ದರು. ‘ಧರ್ಮಸಂಸ್ಥಾಪನೆಗಾಗಿ ಕೃಷ್ಣ ತುಳಸಿ ಮತ್ತು ಅನಂತರ ರಾಮರಾಜ್ಯವು ಬರಬೇಕೆಂದು ಎಂಬ ಉದ್ದೇಶದಿಂದಲೇ ಮಹರ್ಷಿಗಳು ರಾಮ ತುಳಸಿಯನ್ನು ನೆಡಲು ಹೇಳಿದ್ದಾರೆ’.

೨. ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳಿಗೆ ಮಾಡಿದ ಧಾರ್ಮಿಕ ಸಂಸ್ಕಾರ

೨ ಅ. ತುಳಸಿಯ ಸಸಿಗಳ ಮೇಲಿನ ಮೊದಲ ಧಾರ್ಮಿಕ ಸಂಸ್ಕಾರ : ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಮಾರ್ಗದರ್ಶನ ಮಾಡುವ ಮಹರ್ಷಿಗಳ ಆಜ್ಞೆಗನುಸಾರ ೧೬. ೫. ೨೦೧೭ ರಂದು ‘ಪರಾತ್ಪರ ಗುರು ಡಾ. ಜಯಂತ ಆಠವಲೆ’ ಇವರು ಬೆಳಗ್ಗೆ ಗಂಟೆ ೯.೪೭ ಕ್ಕೆ ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳನ್ನು ಸ್ಪರ್ಶಿಸಿದರು. ಆ ಸಮಯದಲ್ಲಿ ಸನಾತನದ ಸಾಧಕ-ಪುರೋಹಿತ ಪಾಠಶಾಲೆಯ ವೇದಮೂರ್ತಿಗಳಾದ ಕೇತನ ಶಹಾಣೆಗುರುಜಿಯವರು ಮಂತ್ರಪಠಣ ಮಾಡಿದರು.

೨ ಆ. ತುಳಸಿಯ ಸಸಿಗಳ ಮೇಲಿನ ದ್ವಿತೀಯ ಧಾರ್ಮಿಕ ಸಂಸ್ಕಾರ : ಮಧ್ಯಾಹ್ನ ಗಂಟೆ ೧೨.೦೫  ಕ್ಕೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ರಾಮ ತುಳಸಿಯ ಸಸಿ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕೃಷ್ಣ ತುಳಸಿಯ ಸಸಿಯನ್ನು ಒಂದೇ ಕುಂಡದಲ್ಲಿ ವಿಧಿವತ್ತಾಗಿ ನೆಟ್ಟರು. ಆ ಸಮಯದಲ್ಲಿಯೂ ಕೇತನ ಶಹಾಣೆಗುರುಜಿಯವರು ಮಂತ್ರಪಠಣ ಮಾಡಿದರು. ಸಸಿಗಳನ್ನು ಕುಂಡದಲ್ಲಿ ನೆಡುವ ಮೊದಲು ಕುಂಡದಲ್ಲಿನ ಮಣ್ಣಿನಲ್ಲಿ ಪಂಚಗವ್ಯ (ಆಕಳ ಐದು ಜೀನಸುಗಳ ಮಿಶ್ರಣ (ಹಾಲು, ಮೊಸರು, ತುಪ್ಪ, ಸೆಗಣಿ, ಮೂತ್ರ), ಪಂಚಾಮೃತ (ಐದು ಜೀನಸುಗಳನ್ನು ಕೂಡಿಸಿ ತಯಾರಿಸಿದ ದೇವರ ತೀರ್ಥ (ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ) ಸ್ಕಂದ ಕ್ಷೇತ್ರದ ವಿಭೂತಿ ಮತ್ತು ಧೂಪವನ್ನು ಹಾಕಲಾಗಿತ್ತು.

೨ ಇ. ತುಳಸಿಯ ಸಸಿಗಳ ಮೇಲಿನ ತೃತೀಯ ಧಾರ್ಮಿಕ ಸಂಸ್ಕಾರ : ೨೭. ೫. ೨೦೧೭ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿದ ನಂತರ ಸಸಿಗಳಿಗೆ ನೀರು ಹಾಕಿ ಪ್ರದಕ್ಷಿಣೆಯನ್ನು ಹಾಕಲು ಆರಂಭಿಸಿದರು.

೩. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

ಈ ಪರೀಕ್ಷಣೆಯಲ್ಲಿ ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳನ್ನು ‘ಪರಾತ್ಪರ ಗುರು ಡಾ. ಆಠವಲೆಯವರು ಸ್ಪರ್ಶಿಸುವ ಮೊದಲು, ಸ್ಪರ್ಶಿಸಿದ ನಂತರ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕುಂಡದಲ್ಲಿ ನೆಟ್ಟಾಗ ಮತ್ತು ಅನಂತರ ‘ಪರಾತ್ಪರ ಗುರು ಡಾ. ಆಠವಲೆಯವರು ಸಸಿಗಳಿಗೆ ನೀರು ಹಾಕಿ ಪ್ರದಕ್ಷಿಣೆಯನ್ನು ಹಾಕಿದ ನಂತರ ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು. ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಯ ಮೇಲಾದ ಪರಿಣಾಮವನ್ನು ಕೆಳಗೆ ಕೊಡಲಾಗಿದೆ.

೩ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳಿಗೆ ಸಂಬಂಧಿಸಿದ ನಿರೀಕ್ಷಣೆಯ ವಿವೇಚನೆ : ರಾಮ ತುಳಸಿ ಮತ್ತು ಕೃಷ್ಣ ತುಳಸಿ ಒಟ್ಟಿಗೆ ಇರುವ ಸಸಿಗಳ ಸಕಾರಾತ್ಮಕ ಊರ್ಜೆಯು ಪರಾತ್ಪರ ಗುರು ಡಾ. ಆಠವಲೆಯವರು ಸ್ಪರ್ಶಿಸಿದ ನಂತರ ಹೆಚ್ಚಾಗುವುದು, ಕುಂಡದಲ್ಲಿ ನೆಟ್ಟ ನಂತರ ಅದರಲ್ಲಿ ಬಹಳ ಹೆಚ್ಚಳವಾಗುವುದು ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಸಸಿಗಳಿಗೆ ನೀರು ಹಾಕಿ ಪ್ರದಕ್ಷಿಣೆಯನ್ನು ಹಾಕಿದ ನಂತರ ಅದರಲ್ಲಿ ಅತ್ಯಧಿಕ ಹೆಚ್ಚಳವಾಗುವುದು : ಇದು ಕೆಳಗೆ ಕೊಡಲಾದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

ಟಿಪ್ಪಣಿ ೧ : ಪರಾತ್ಪರ ಗುರು ಡಾ. ಆಠವಲೆಯವರು ತುಳಸಿಯ ಸಸಿಗಳನ್ನು ಸ್ಪರ್ಶಿಸುವ ಮೊದಲು ಸಸಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು; ಆದರೆ ಅದಕ್ಕೆ ಪ್ರಭಾವಲಯವಿರಲಿಲ್ಲ. ‘ಔರಾ ಸ್ಕ್ಯಾನರ್’ ಅದರ ಸಂದರ್ಭದಲ್ಲಿ ೪೫ ಅಂಶದ ಕೋನವನ್ನು ಮಾಡಿತು. `ಔರಾ ಸ್ಕ್ಯಾನರ್’ ೧೮೦ ಅಂಶದ ಕೋನವನ್ನು ಮಾಡಿದರೆ ಮಾತ್ರ ಪ್ರಭಾವಲಯವನ್ನು ಅಳೆಯಲು ಬರುತ್ತದೆ.

ಟಿಪ್ಪಣಿ ೨ : ಪರಾತ್ಪರ ಗುರು ಡಾ. ಆಠವಲೆಯವರು ತುಳಸಿಯ ಸಸಿಗಳನ್ನು ಸ್ಪರ್ಶಿಸಿದ ನಂತರ ಸಸಿಗಳ ಸಕಾರಾತ್ಮಕ ಊರ್ಜೆಯಲ್ಲಿ ಸ್ವಲ್ಪ ಹೆಚ್ಚಳವಾಯಿತು; ಆದರೆ ಅದರ ಪ್ರಭಾವಲಯವಿರಲಿಲ್ಲ. ‘ಔರಾ ಸ್ಕ್ಯಾನರ್’ ಅದರ ಸಂದರ್ಭದಲ್ಲಿ ೧೪೫  ಅಂಶದ ಕೋನವನ್ನು ತಯಾರಿಸಿತು.

ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ

೪. ನಿಷ್ಕರ್ಷ

ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳ ಮೇಲೆ ಧಾರ್ಮಿಕ ಸಂಸ್ಕಾರ ಮಾಡಿದುದರಿಂದ ಅವುಗಳ ಮೇಲೆ ಬಹಳ ಸಕಾರಾತ್ಮಕ ಪರಿಣಾಮವಾಯಿತು.

೫. ಪರೀಕ್ಷಣೆಯಲ್ಲಿನ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೫ ಅ. ರಾಮ ತುಳಸಿ ಮತ್ತು ಕೃಷ್ಣ ತುಳಸಿಯ ಸಸಿಗಳಲ್ಲಿ ಧಾರ್ಮಿಕ ಸಂಸ್ಕಾರವನ್ನು ಮಾಡುವ ಮೊದಲು ಮತ್ತು ನಂತರ ಸಕಾರಾತ್ಮಕ ಸ್ಪಂದನಗಳಿರುವ ಹಿಂದಿನ ಅಧ್ಯಾತ್ಮಶಾಸ್ತ್ರ

೫ ಅ ೧. ತುಳಸಿಯ ಸಸಿಗಳಿಗೆ ಧಾರ್ಮಿಕ ಸಂಸ್ಕಾರವಾಗುವ ಮೊದಲೇ ಅವುಗಳಲ್ಲಿ ಸಕಾರಾತ್ಮಕ ಸ್ಪಂದನಗಳಿರುವುದು : ರಾಮ ತುಳಸಿ ಮತ್ತು ಕೃಷ್ಣ ತುಳಸಿಯಲ್ಲಿ ಕ್ರಮವಾಗಿ ರಾಮ ಮತ್ತು ಕೃಷ್ಣ ಈ ತತ್ತ್ವಗಳಿರುವುದರಿಂದ ಅವುಗಳಲ್ಲಿ ಮೂಲತಃ ಸಕಾರಾತ್ಮಕ ಸ್ಪಂದನಗಳಿರುತ್ತವೆ.

೫ ಅ ೨. ಮೊದಲ ಧಾರ್ಮಿಕ ಸಂಸ್ಕಾರದಿಂದ ತುಳಸಿಯ ಸಸಿಗಳ ಸಾತ್ತ್ವಿಕತೆಯು ಹೆಚ್ಚಾದುದರಿಂದ ಅವುಗಳಲ್ಲಿನ ಸಕಾರಾತ್ಮಕ ಸ್ಪಂದನಗಳು ಹೆಚ್ಚಾಗುವುದು : ಮಂತ್ರಪಠಣದಿಂದ ಸಸಿಗಳಲ್ಲಿ ರಾಮ ಮತ್ತು ಕೃಷ್ಣರ ತತ್ತ್ವಗಳು ಕಾರ್ಯನಿರತವಾದುದರಿಂದ ಅವುಗಳಲ್ಲಿ ಸಕಾರಾತ್ಮಕ ಸ್ಪಂದನಗಳು ಹೆಚ್ಚಾದವು. ಈ ಸಸಿಗಳನ್ನು ಪರಾತ್ಪರ ಗುರು ಡಾ. ಆಠವಲೆಯವರು ಸ್ಪರ್ಶಿಸಿದುದರಿಂದ ಅವುಗಳಲ್ಲಿನ ಸಾತ್ತ್ವಿಕತೆಯಿಂದ ಸಸಿಗಳು ತುಂಬಿಹೋದವು. ಆದ್ದರಿಂದ ಸಸಿಗಳಲ್ಲಿನ ಸಕಾರಾತ್ಮಕ ಸ್ಪಂದನಗಳು ಬಹಳ ಹೆಚ್ಚಾದವು.

೫ ಅ ೩. ದ್ವಿತೀಯ ಧಾರ್ಮಿಕ ಸಂಸ್ಕಾರವಾದ ನಂತರ ತುಳಸಿಗಳಲ್ಲಿನ ಸಕಾರಾತ್ಮಕ ಸ್ಪಂದನಗಳು ತುಂಬ ಹೆಚ್ಚಾಗುವುದು : ಕುಂಡದಲ್ಲಿ ತುಳಸಿಯ ಸಸಿಗಳನ್ನು ನೆಡುವ ಮೊದಲು ಕುಂಡದಲ್ಲಿನ ಮಣ್ಣಿನಲ್ಲಿ ಪಂಚಗವ್ಯ, ಪಂಚಾಮೃತ, ಸ್ಕಂದ ಕ್ಷೇತ್ರದ ವಿಭೂತಿ ಮತ್ತು ಧೂಪವನ್ನು ಹಾಕಲಾಗಿತ್ತು. ಆದ್ದರಿಂದ ಸಸಿಗಳಲ್ಲಿನ ಸಕಾರಾತ್ಮಕ ಸ್ಪಂದನಗಳಲ್ಲಿ ಹೆಚ್ಚಳ ವಾಯಿತು. ಅನಂತರ ಮಂತ್ರಘೋಷ ಸಹಿತ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕುಂಡದಲ್ಲಿ ಸಸಿಗಳನ್ನು ನೆಟ್ಟರು. ಮಂತ್ರಪಠಣದಿಂದ ಸಸಿಗಳಲ್ಲಿನ ಸಕಾರಾತ್ಮಕ ಸ್ಪಂದನಗಳು ಬಹಳ ಹೆಚ್ಚಾದವು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸ್ಪರ್ಶದಿಂದ ಅವರಲ್ಲಿದ್ದ ಸಾತ್ತ್ವಿಕತೆ ಯಿಂದ ಸಸಿಗಳು ತುಂಬಿಕೊಂಡು ಸಸಿಗಳಲ್ಲಿನ ಸಕಾರಾತ್ಮಕ ಸ್ಪಂದನಗಳಲ್ಲಿ ಇನ್ನಷ್ಟು ಹೆಚ್ಚಳವಾಯಿತು. ಈ ರೀತಿ ಕುಂಡದಲ್ಲಿ ನೆಟ್ಟ ನಂತರ ಸಸಿಗಳಲ್ಲಿ ಬಹಳ ಸಕಾರಾತ್ಮಕ ಸ್ಪಂದನಗಳು ಕಂಡು ಬಂದವು.

೫ ಅ ೪. ತೃತೀಯ ಧಾರ್ಮಿಕ ಸಂಸ್ಕಾರವಾದ ನಂತರ ತುಳಸಿಗಳಲ್ಲಿನ ಸಕಾರಾತ್ಮಕ ಸ್ಪಂದನಗಳು ಅತ್ಯಧಿಕ ಹೆಚ್ಚಾಗುವುದು : ಪರಾತ್ಪರ ಗುರು ಡಾ. ಆಠವಲೆಯವರು ಸಸಿಗಳಿಗೆ ನೀರು ಹಾಕಿ ಪ್ರದಕ್ಷಿಣೆ ಹಾಕಿದ ನಂತರ ಆ ಸಸಿಗಳ ಕಾರ್ಯವು ಭರದಿಂದ ಆರಂಭವಾಯಿತು. ಆದ್ದರಿಂದ ಸಸಿಗಳಲ್ಲಿ ಅತ್ಯಧಿಕ ಸಕಾರಾತ್ಮಕ ಸ್ಪಂದನ ಕಂಡು ಬಂದವು. ಈ ಪರೀಕ್ಷಣೆಯಿಂದ ಸನಾತನ ಹಿಂದೂ ಧರ್ಮದಲ್ಲಿ ಹೇಳಲಾದ ವಿವಿಧ ಧಾರ್ಮಿಕ ಕೃತಿಗಳ ಮಹತ್ವವು ಗಮನಕ್ಕೆ ಬರುತ್ತದೆ, ಹಾಗೆಯೇ ಅದನ್ನು ತಿಳಿದುಕೊಂಡ, ಅದರ ಅಖಿಲ ಮನುಕುಲಕ್ಕೆ ಲಾಭವನ್ನು ದೊರಕಿಸಿಕೊಡುವ ದೃಷ್ಟಿಯಿಂದ ಸಾವಿರಾರು ವರ್ಷಗಳ ಹಿಂದೆಯೇ ಪರಿಪೂರ್ಣ ನಿಯೋಜನೆಯನ್ನು ಮಾಡಿ ತಮ್ಮ ಸಂಕಲ್ಪಶಕ್ತಿಯ ಮೂಲಕ ಈ ಭೀಕರ ಕಲಿಯುಗದಲ್ಲಿಯೂ ಭಕ್ತರಿಗೆ ಅದರ ಅನುಭೂತಿಯನ್ನು ನೀಡುವ ಸರ್ವಜ್ಞ ಮತ್ತು ಕರುಣಾಮಯ ಮಹರ್ಷಿಗಳ ಆಧ್ಯಾತ್ಮಿಕ ಅಧಿಕಾರವು ಸ್ಪಷ್ಟವಾಗುತ್ತದೆ.

‘ಪ್ರಾಚೀನ ಕಾಲದಲ್ಲಷ್ಟೇ ಅಲ್ಲ, ಆದರೆ ಇಂದಿಗೂ ವಿಶ್ವಕಲ್ಯಾಣಕ್ಕಾಗಿ ನಿರಂತರ ಕಾರ್ಯನಿರತರಾಗಿರುವ ಋಷಿಗಳ ಚರಣಗಳಲ್ಲಿ ಶರಣಾಗತಭಾವದಿಂದ ಕೋಟಿ ಕೋಟಿ ಕೃತಜ್ಞರಾಗಿದ್ದೇವೆ !’

– ಆಧುನಿಕ ವೈದ್ಯೆ (ಡಾ.) ಸೌ. ನಂದಿನಿ ಸಾಮಂತ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (22.5.2017)

ವಿ-ಅಂಚೆ :  [email protected]