|
ಜಲಗಾಂವ (ಮಹಾರಾಷ್ಟ್ರ) – ಫೈಜಪುರದಲ್ಲಿ ಅಕ್ರಮ ಕಸಾಯಿಖಾನೆಯನ್ನ ಪೊಲೀಸರು ಧ್ವಂಸಗೊಳಿಸಿದ್ದಾರೆ. ಶೇಖ ನಯೀಮ ಉಪಾಖ್ಯ ನಮ್ಮಾ ಅಬ್ದುಲ ರಹೀಮ ಖುರೇಷಿ ಅವರ ಮನೆಯ ಪಕ್ಕದಲ್ಲಿ ತಗಡಿನ ಶೆಡನಲ್ಲಿ ಅಕ್ರಮ ಕಸಾಯಿಖಾನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ಅಲ್ಲಿ ದಾಳಿ ನಡೆಸಿದರು. ಈ ವೇಳೆ ಇಕ್ರಮ ಶೇಖ ನಯೀಮ ಖುರೇಷಿ, ವಾಸೀಮ ಶೇಖ ಅಬ್ದುಲ ರಹೀಮ ಖುರೇಷಿ ಮತ್ತು ಶೇಖ ಮುಸ್ತಕಿಮ್ ಶೇಖ್ ಕಲೀಮ್ ಅವರನ್ನು ಬಂಧಿಸಿ ಅವರಿಂದ 220 ಕೆಜಿ ಹಸುವಿನ ಮಾಂಸ ಮತ್ತು 23 ಕೆಜಿ ತೂಕದ ಎತ್ತಿನ ಚರ್ಮ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಪಾದಕೀಯ ನಿಲುವುರಾಜ್ಯಾದ್ಯಂತ ಇಂತಹ ಕ್ರಮಗಳು ನಡೆದರೆ ಗೋವುಗಳ ಹತ್ಯೆಯನ್ನು ತಡೆಯಬಹುದು! |