Shivamogga WAQF Property Issue : ಶಿವಮೊಗ್ಗದಲ್ಲಿ ವಕ್ಫ್ ಆಸ್ತಿ ಎಂದು ಹೇಳಿಕೊಂಡು ಮೈದಾನಕ್ಕೆ ಬೇಲಿ !

ಶಿವಮೊಗ್ಗ – ವಕ್ಫ್ ಸಂಪತ್ತಿ ಎಂದು ದಾವೇ ಮಾಡುತ್ತಾ ಇಲ್ಲಿಯ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಮೈದಾನಕ್ಕೆ ಬೇಲಿ ಹಾಕಿರುವುದರಿಂದ ವಕ್ಫ್ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಇದೀಗ ವಿವಾದ ಭುಗಿಲೆದ್ದಿದೆ. ಈ ವೇಳೆ ಉಂಟಾದ ಉದ್ವಿಗ್ನತೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನಕುಮಾರ ಇವರು ಮಧ್ಯಪ್ರವೇಶಿಸಿ ಶಾಂತಗೊಳಿಸಿದರು.

1. ಜಿಲ್ಲಾಧಿಕಾರಿ ಕಚೇರಿ ಎದುರಿನ ಈದ್ಗಾ ಮೈದಾನದಲ್ಲಿ ಸೋಮವಾರ ಈದ್-ಉಲ್-ಫಿತರ್ ಪ್ರಯುಕ್ತ ವಿಶೇಷ ನಮಾಜ್ ವ್ಯವಸ್ಥೆ ಮಾಡಲಾಗಿತ್ತು. ಮರುದಿನ ಮೈದಾನದ ಮುಖ್ಯದ್ವಾರಕ್ಕೆ 10 ಅಡಿ ಎತ್ತರದ ಬೇಲಿ ಹಾಕಲಾಗಿತ್ತು.

2. ಮೈದಾನಕ್ಕೆ ಬೇಲಿ ಹಾಕಿದ್ದರಿಂದ ವಾಹನಗಳ ನಿಲುಗಡೆಗೆ ಅಡ್ಡಿಯಾಗಿದ್ದು, ಕೂಡಲೇ ಅದನ್ನು ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

3. ಈ ವೇಳೆ ವಿಶ್ವ ಹಿಂದೂ ಪರಿಷತ್ ಮತ್ತು ಭಾಜಪ ನಾಯಕರು ಬಂದು ಬೇಲಿ ತೆರವುಗೊಳಿಸುವಂತೆ ಒತ್ತಾಯಿಸಿದರು. ಮೈದಾನದ ಜಾಗವು ಮಹಾನಗರ ಪಾಲಿಕೆಗೆ ಸೇರಿದ್ದು, ಮುಸ್ಲಿಮರಿಗೆ ಅಲ್ಲಿ ನಮಾಜ್ ಮಾಡಲು ಮಾತ್ರ ಅನುಮತಿ ನೀಡಲಾಗಿದೆ, ಎಂದು ಅವರು ಪ್ರತಿಪಾದಿಸಿದರು.

4. “ಇದು ವಕ್ಫ್ ಬೋರ್ಡ್ ನ ಜಾಗ, ಸಾರ್ವಜನಿಕ ಸ್ಥಳವಲ್ಲ. ನಮಾಜ್ ಜೊತೆಗೆ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ” ಎಂದು ಮುಸ್ಲಿಮರು ಹೇಳಿದ್ದಾರೆ.

5. ಇದರಿಂದ ಅಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಕ್ರಮವಾಗಿ ಬೇಲಿ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿ ಬೇಲಿ ತೆರವುಗೊಳಿಸುವಂತೆ ಒತ್ತಾಯಿಸಿ ಜನರು ಅಲ್ಲಿಯೇ ಪ್ರತಿಭಟನೆ ಆರಂಭಿಸಿದರು.

ಸಂಪಾದಕೀಯ ನಿಲುವು

ಯಾವುದೇ ಭೂಮಿ ತನ್ನದು ಎಂದು ದಾವೆ ಮಾಡಿ ಅದನ್ನು ಕಬಳಿಸುವ ವಕ್ಫ್ ಬೋರ್ಡ್ ಗೆ ಸರಿಯಾದ ಪಾಠ ಕಲಿಸಲು ವಕ್ಫ ಕಾನೂನು ರದ್ದುಪಡಿಸುವುದು ಅವಶ್ಯಕವಾಗಿದೆ ಇದೇ ಇದರಿಂದ ಕಂಡು ಬರುತ್ತಿದೆ!