ಸಕಾರಾತ್ಮಕ ಶಕ್ತಿಯನ್ನು ಪ್ರಕ್ಷೇಪಿಸುವ ಪಾರಂಪರಿಕ ತಾಣಗಳಿಗೆ ಭೇಟಿ ನೀಡುವುದು ಲಾಭದಾಯಕ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯದ ಸಂಶೋಧನೆಯ ನಿಷ್ಕರ್ಷ

ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಪರಿಷದ್‌ನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ನಿರೂಪಣೆ’ ಪ್ರಶಸ್ತಿ !

ಶ್ರೀ. ಶಾನ್ ಕ್ಲಾರ್ಕ್

ಜಗತ್ತಿನಾದ್ಯಂತದ ಅನೇಕ ಪ್ರವಾಸಿಗಳು ಪ್ರೇಕ್ಷಣೀಯ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ; ಆದರೆ ಆ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿದಾಗ ಅಲ್ಲಿ ವ್ಯಕ್ತಿಯ ಮೇಲೆ ಏನು ಪರಿಣಾಮವಾಗುತ್ತದೆ ಎಂಬುದರ ಬಗ್ಗೆ ನಾವು ಎಂದಿಗೂ ಯೋಚಿಸುವುದಿಲ್ಲ. ಈ ಬಗ್ಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯವು ವೈಜ್ಞಾನಿಕ ಸಂಶೋಧನೆ ನಡೆಸಿದೆ. ಈ ಸಂಶೋಧನೆಯಲ್ಲಿ, ಕೆಲವು ಪಾರಂಪರಿಕ ತಾಣಗಳಿಗೆ ನಾವು ಭೇಟಿ ನೀಡಿದಾಗ ನಮಗೆ ವಿವಿಧ ತೊಂದರೆಗಳ ಅರಿವಾಗುತ್ತದೆ ಅಥವಾ ನಮ್ಮಲ್ಲಿಯ ನಕಾರಾತ್ಮಕತೆ ಹೆಚ್ಚಾಗುತ್ತದೆ, ಆದರೆ ಕೆಲವು ಪಾರಂಪರಿಕ ತಾಣಗಳಿಗೆ ಭೇಟಿ ನೀಡಿದಾಗ ಒಳ್ಳೆದೆನಿಸುತ್ತದೆ, ಅಲ್ಲಿಂದ ಒಳ್ಳೆಯ ಅಂದರೆ ಸಕಾರಾತ್ಮಕ ಶಕ್ತಿ ಸಿಗುತ್ತದೆ, ನಾವು ಸಕಾರಾತ್ಮಕ ಶಕ್ತಿ ಪ್ರಕ್ಷೇಪಿತವಾಗುವ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡುವುದು ನಮಗೆ ಲಾಭದಾಯಕವಾಗಿದೆ, ಎಂಬುದನ್ನು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಅವರು ಶ್ರೀಲಂಕಾದಲ್ಲಿ ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನಾಲೆಜ್ ಮ್ಯಾನೇಜ್‌ಮೆಂಟ್’ ಆಯೋಜಿಸಿದ್ದ ‘ಎರಡನೇ ಅಂತಾರಾಷ್ಟ್ರೀಯ ಪುರಾತತ್ವ ಇಲಾಖೆ, ಇತಿಹಾಸ ಮತ್ತು ಪರಂಪರೆಯ ತಾಣಗಳು 2021’ ಈ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ಶ್ರೀ. ಕ್ಲಾರ್ಕ್ ಅವರು ’ಪಾರಂಪರಿಕ ಸ್ಥಳಗಳ ಕುರಿತು ಆಧ್ಯಾತ್ಮಿಕ ದೃಷ್ಟಿಕೋನಗಳು’ ಈ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಈ ಸಂಶೋಧನೆಗೆ ಈ ಅಂತರರಾಷ್ಟ್ರೀಯ ಪರಿಷದ್‌ನಲ್ಲಿ ‘ಅತ್ಯುತ್ತಮ ನಿರೂಪಣೆ – ಪ್ರಸಾರಮಾಧ್ಯಮ’ ಪ್ರಶಸ್ತಿ ಸಿಕ್ಕಿತು.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ ಈ ಶೋಧಪ್ರಬಂಧದ ಲೇಖಕರಾಗಿದ್ದಾರೆ ಹಾಗೂ ಶ್ರೀ. ಶಾನ್ ಕ್ಲಾರ್ಕ್ ಸಹ-ಲೇಖಕರಾಗಿದ್ದಾರೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯದ ವತಿಯಿಂದ ಇದುವರೆಗೆ ೧೫ ರಾಷ್ಟ್ರೀಯ ಮತ್ತು ೬೫ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷದ್‌ಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ. ಈ ಪೈಕಿ ೯ ಅಂತಾರಾಷ್ಟ್ರೀಯ ಪರಿಷದ್‌ನಲ್ಲಿ ‘ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ’ ಪಡೆದಿವೆ.

‘ಪಾರಂಪರಿಕ ತಾಣಗಳ ಬಗ್ಗೆ ಆಧ್ಯಾತ್ಮಿಕ ದೃಷ್ಟಿಕೋನ’ ಈ ಶೋಧಪ್ರಬಂಧದಲ್ಲಿ ಪಾರಂಪಾರಿಕ ಸ್ಥಳಗಳ ಪರಿಸರಗಳಲ್ಲಿನ ನೀರಿನ ನಮೂನೆಗಳ ಛಾಯಾಚಿತ್ರಗಳು ಹಾಗೂ ಪಾರಂಪರಿಕ ತಾಣಗಳ ಛಾಯಾಚಿತ್ರಗಳನ್ನು ಉಪಯೋಗಿಸಿ ಅವುಗಳ ಮೇಲೆ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆಯನ್ನು ಮಂಡಿಸುವಾಗ, ಶ್ರೀ. ಕ್ಲಾರ್ಕ್ ಇವರು ನೀರು ತುಂಬಿದ 5 ಗ್ಲಾಸ್‌ಗಳ ಛಾಯಾಚಿತ್ರಗಳನ್ನು ಎಲ್ಲರಿಗೂ ತೋರಿಸಿದರು ಮತ್ತು ಅವುಗಳಲ್ಲಿ ಶುದ್ಧ ನೀರು ಇರುವ 2 ಗ್ಲಾಸ್‌ಗಳನ್ನು ಹೇಗೆ ಆರಿಸಬೇಕು ಎಂದು ವಿವರಿಸಿದರು. ಎಲ್ಲಕ್ಕಿಂತ ಸ್ವಚ್ಛವಾಗಿ ಕಾಣುವ ಒಂದು ನೀರು ಭಾರತದ ತಾಜಮಹಲ್‌ನ ಪರಿಸರದಲ್ಲಿತ್ತು ಮತ್ತು ಸ್ವಲ್ಪ ಮಣ್ಣುನೀರು ತಾಜ್ ಮಹಲ್ ಬಳಿ ಹರಿಯುವ ಯಮುನಾ ನದಿಯದ್ದಿತ್ತು. ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣದಿಂದ ನಡೆಸಿದ ಪರೀಕ್ಷಣೆಯಲ್ಲಿ ಯಮುನಾ ನದಿಯ ನೀರಿನಲ್ಲಿ ಸಕಾರಾತ್ಮಕ ಶಕ್ತಿ ಇರುವುದು ಕಂಡುಬಂದಿದೆ; ಆದರೆ ತಾಜ್ ಮಹಲ್ ಪ್ರದೇಶದಲ್ಲಿನ ನೀರಿನಲ್ಲಿ ನಕಾರಾತ್ಮಕ ಶಕ್ತಿ ಇರುವುದು ಕಂಡುಬಂದಿದೆ. ಅದೇ ರೀತಿ 2019 ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದ ಸಮಯದಲ್ಲಿ, ರಾಜಯೋಗಿ (ಶಾಹಿ) ಸ್ನಾನದ ದಿನದಂದು 2 ಕೋಟಿ ಯಾತ್ರಿಕರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದರೂ ಅದರ ಸಕಾರಾತ್ಮಕತೆಯು ಹಿಂದಿನ ದಿನಕ್ಕೆ ಹೋಲಿಸಿದರೆ ಹೆಚ್ಚಾಗಿತ್ತು ಎಂಬುದು ಸಂಶೋಧನೆಯಲ್ಲಿ ಕಂಡು ಬಂದಿತು ಎಂದು ಶ್ರೀ. ಶಾನ್ ಕ್ಲಾರ್ಕ್ ಹೇಳಿದರು.

ಯಾವುದೇ ವಸ್ತುವಿನ ಅಥವಾ ವಾಸ್ತುವಿನ ಛಾಯಾಚಿತ್ರದಲ್ಲಿ ಆ ವಸ್ತುವಿನಲ್ಲಿನ ಅಥವಾ ವಾಸ್ತುವಿನಲ್ಲಿನ ಸೂಕ್ಷ್ಮ ಸ್ಪಂದನಗಳಿರುತ್ತವೆ ಮತ್ತು ಅವು ಛಾಯಾಚಿತ್ರಗಳಲ್ಲಿಯೂ ಪ್ರಕ್ಷೇಪಿತವಾಗುತ್ತವೆ. ಯು.ಎ.ಎಸ್. ಈ ಉಪಕರಣದ ಮೂಲಕ ಈ ಸೂಕ್ಷ್ಮ ಸ್ಪಂದನಗಳು ಸಕಾರಾತ್ಮವಾಗಿವೆಯೋ ಅಥವಾ ನಕಾರಾತ್ಮಕವಾಗಿದಯೋ ಹಾಗೆಯೇ ಅದರ ಪ್ರಭಾವಳಿಯು ಎಷ್ಟು ದೂರದವರೆಗೆ ಇದೆ, ಎಂದು ಅಳೆಯಲು ಬರುತ್ತದೆ. ಯು.ಎ.ಎಸ್. ಈ ಉಪಕರಣದ ಆಧಾರದಿಂದ ಐದು ಜಗಪ್ರಸಿದ್ಧ ಪಾರಂಪರಿಕ ತಾಣಗಳು ಮತ್ತು ಭಾರತದಲ್ಲಿನ ಪ್ರಸಿದ್ಧ ದೇವಸ್ಥಾನಗಳ ಛಾಯಾಚಿತ್ರಗಳಲ್ಲಿನ ಸಕಾರಾತ್ಮಕತೆ ಮತ್ತು ನಕಾರಾತ್ಮಕತೆಯನ್ನು ಅಳೆಯಲಾಯಿತು. ಈ ಸಂಶೋಧನೆಯಿಂದ ರೋಮ್‌ದಲ್ಲಿನ ‘ಕೊಲೊಸಿಯಮ್’ದ ಛಾಯಾಚಿತ್ರದ ನಕಾರಾತ್ಮಕತೆಯು 433 ಮೀಟರ್, ಭಾರತದಲ್ಲಿನ ‘ತಾಜ ಮಹಲ್’ದ ಛಾಯಾಚಿತ್ರದ ನಕಾರಾತ್ಮಕತೆಯು 376 ಮೀಟರ್, ಇಂಗ್ಲೆಂಡ್‌ನಲ್ಲಿನ ‘ಸ್ಟೊನಹೆನ್ಜ್’ನ ಛಾಯಾಚಿತ್ರದ ನಕಾರಾತ್ಮಕತೆಯು 348 ಮೀಟರ್, ಇಟಲಿಯಲ್ಲಿನ ‘ಲೀನಿಂಗ್ ಟಾವರ್ ಆಫ್ ಪಿಸಾ’ದ ಛಾಯಾಚಿತ್ರದ ನಕಾರಾತ್ಮಕತೆಯು 252 ಮೀಟರ್, ಇಜಿಪ್ತದಲ್ಲಿನ ‘ಪಿರ‍್ಯಾಮಿಡ್ಸ ಆಫ್ ಗಿಝಾ’ದ ಛಾಯಾಚಿತ್ರದ ನಕಾರಾತ್ಮಕತೆಯು 216 ಮೀಟರ್ ಇರುವುದಾಗಿ ಕಂಡುಬಂದಿತು. ಯು.ಎ.ಎಸ್. ಉಪಕರಣವನ್ನು ಉಪಯೋಗಿಸಿ ಇದುವರೆಗೆ ಅಳೆಯಲಾದ ಇವುಗಳಲ್ಲಿ ಅತ್ಯಧಿಕ ನಕಾರಾತ್ಮಕಗಳಿವೆ. ಮೇಲಿರುವ ಒಂದರಲ್ಲಿಯೂ ಪಾರಂಪರಿಕ ತಾಣಗಳಲ್ಲಿ ಸಕಾರಾತ್ಮಕ ಊರ್ಜೆಯು ಕಂಡುಬರಲಿಲ್ಲ. ಇದೇ ರೀತಿ ಆಂಧ್ರಪ್ರದೇಶದಲ್ಲಿನ ತಿರುಪತಿ ಬಾಲಾಜಿ ದೇವಸ್ಥಾನದ ಛಾಯಾಚಿತ್ರದ ಸಂಶೋಧನೆಯನ್ನೂ ಮಾಡಲಾಯಿತು. ಈ ಛಾಯಾಚಿತ್ರದಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾಲಯವು 271 ಮೀಟರ್‌ಕ್ಕಿಂತಲೂ ಹೆಚ್ಚಿತ್ತು, ನಕಾರಾತ್ಮಕ ಊರ್ಜೆಯು ಕಿಂಚಿತ್ತೂ ಇರಲಿಲ್ಲ.

ಸಕಾರಾತ್ಮಕ ಸ್ಥಳಗಳು ಸಕಾರಾತ್ಮಕತೆಯನ್ನು ಆಕರ್ಷಿಸುತ್ತವೆ, ಆದುದರಿಂದ ಅವುಗಳು ಶುಭಕರವಾಗಿರುತ್ತವೆ. ಹಾಗಾಗಿ ಆದಷ್ಟು ನಕಾರಾತ್ಮಕತೆಯನ್ನು ಪ್ರಕ್ಷೇಪಿಸುವ ಪಾರಂಪರಿಕ ತಾಣಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು, ಎಂಬುದು ಈ ಸಂಶೋಧನೆಯಿಂದ ತಿಳಿದು ಬರುತ್ತದೆ.