ಭಾರತ ಸಹಿತ 12 ದೇಶಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನಗೆ ‘ರಾಜ್ಯಕರ್ತ’ ಎಂದು ಮಾನ್ಯತೆ ಕೊಡಲು ವಿರೋಧ

ಕೇವಲ 12 ದೇಶಗಳು ಮಾತ್ರ ಏಕೆ ? ಜಗತ್ತಿನಾದ್ಯಂತದ ಎಲ್ಲಾ ದೇಶಗಳು ತಾಲಿಬಾನನನ್ನು ವಿರೋಧಿಸಿ ಅದರ ಆಡಳಿತ ಬಂದರೆ ಅಫ್ಘಾನಿಸ್ತಾನವನ್ನೂ ಸಹ ಬಹಿಷ್ಕರಿಸಬೇಕು.

ತಾಲೀಬಾನ್ ಅಧಿಕಾರವನ್ನು ಪಡೆಯಲು ಪ್ರಯತ್ನಿಸಿದರೆ ಅಫ್ಘಾನಿಸ್ತಾನವು ಸಂಪೂರ್ಣವಾಗಿ ನಶಿಸಿಹೋಗುವ ಅಪಾಯ ! – ವಿಶ್ವ ಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್

ವಿಶ್ವ ಸಂಸ್ಥೆಯು ಇಂತಹ ಹೇಳಿಕೆಗಳನ್ನು ನೀಡುವುದಕ್ಕಿಂತ ತಾಲಿಬಾನನ್ನು ಸಂಪೂರ್ಣವಾಗಿ ನಾಶ ಮಾಡಲು ಏಕೆ ಪ್ರಯತ್ನಿಸುವುದಿಲ್ಲ ?

ಅಮೇರಿಕಾವು ಅಫ್ಘಾನಿಸ್ತಾನದ ದೂತವಾಸದಲ್ಲಿರುವ ಸಿಬ್ಬಂದಿಗಳನ್ನು ವಾಪಸ್ಸು ಕರೆದುಕೊಂಡು ಬರಲು 3 ಸಾವಿರ ಸೈನಿಕರನ್ನು ಕಳುಹಿಸಲಿದೆ !

ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಅತ್ಯಧಿಕ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿರುವ ಭಯದಿಂದ ಅಮೇರಿಕಾವು ಅಫ್ಘಾನಿಸ್ತಾನದಲ್ಲಿರುವ ತನ್ನ ನಾಗರಿಕರನ್ನು ಕರೆತರುವ ತಯಾರಿ ಮಾಡಿದೆ.

ಪಾಕ್‍ಗೆ ದೋಷಪೂರ್ಣ ‘ಜೆಎಫ್- 17’ ಯುದ್ಧ ವಿಮಾನವನ್ನು ಕೊಟ್ಟು ಮೋಸ ಮಾಡಿದ ಚೀನಾ !

ಚೀನಾ ಪಾಕ್‍ಗೆ ನೀಡಿದ ‘ಜೆಎಫ್-17’ ಈ ಯುದ್ಧ ವಿಮಾನದಲ್ಲಿ ಅನೇಕ ತಾಂತ್ರಿಕ ಅಡಚಣೆಗಳು ಕಂಡುಬಂದಿವೆ. ಚೀನಾದಿಂದ ಸಿಕ್ಕಿರುವ ಈ ವಿಮಾನವು ಪಾಕ್‍ಗಾಗಿ ತಲೆನೋವಾಗಿ ಪರಿಣಮಿಸಿದೆ.

ಪಾಕ್‍ನಲ್ಲಿನ ಧ್ವಂಸ ಮಾಡಿದ್ದ ದೇವಸ್ಥಾನವನ್ನು ಪಾಕಿಸ್ತಾನ ಸರಕಾರದಿಂದ ದುರಸ್ತಿ ಮಾಡಿ ದೇವಸ್ಥಾನವನ್ನು ಪುನಃ ಹಿಂದೂಗಳಿಗೆ ಒಪ್ಪಿಸಿತು

ಆಗಸ್ಟ್ 4 ರಂದು ಮುಸಲ್ಮಾನರ ಸಮೂಹವು ಧ್ವಂಸ ಮಾಡಿದ್ದ ಶ್ರೀ ಗಣಪತಿ ದೇವಸ್ಥಾನವನ್ನು ಪಾಕ್ ಸರಕಾರವು ದುರಸ್ತಿ ಮಾಡಿದ ನಂತರ ಆ ದೇವಸ್ಥಾನವನ್ನು ಪುನಃ ಹಿಂದೂಗಳಿಗೆ ಒಪ್ಪಿಸಲಾಯಿತು.

ಭಾರತವು ಅಫ್ಘಾನ್ ಸೈನ್ಯಕ್ಕೆ ಉಡುಗೊರೆಯಾಗಿ ನೀಡಿದ್ದ ಎಂಐ-24 ಹೆಲಿಕಾಪ್ಟರ್ ತಾಲಿಬಾನಿನ ವಶದಲ್ಲಿ

ಅಫ್ಘಾನಿಸ್ತಾನದಲ್ಲಿನ ಕಾಂಡುಜದಲ್ಲಿಯ ಒಂದು ಛಾಯಾಚಿತ್ರದಲ್ಲಿ ಈ ಹೆಲಿಕಾಪ್ಟರ್ ತಾಲಿಬಾನರ ಯುದ್ಧದ ಹೆಲಿಕಾಪ್ಟರ್ ಪಕ್ಕದಲ್ಲಿ ಕಂಡು ಬರುತ್ತಿದೆ.

ಪಾಕ್‍ನ ಸಿಂಧ್ ಪ್ರಾಂತದಲ್ಲಿ ಮತಾಂಧರಿಂದ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಮತಾಂತರ

ಪಾಕಿಸ್ತಾನದಲ್ಲಿನ ಹಿಂದೂಗಳ ಮೇಲಾಗುವ ದೌರ್ಜನ್ಯಗಳ ಬಗ್ಗೆ ಭಾರತದಲ್ಲಿನ ಯಾವುದೇ ಜಾತ್ಯತೀತವಾದಿ, ಪ್ರಗತಿ(ಅಧೋಗತಿ)ಪರರು ಮತ್ತು ಸರ್ವಧರ್ಮಸಮಭಾವ ಹೇಳುವವರು ಬಾಯಿ ಬಿಡುವುದಿಲ್ಲ, ಇದನ್ನು ಗಮನದಲ್ಲಿಟ್ಟುಕೊಳ್ಳಿ !

೨೧೦೦ ರ ವೇಳೆಗೆ, ಮುಂಬಯಿ ಸೇರಿದಂತೆ ಭಾರತದ ಕರಾವಳಿಯ ೧೨ ನಗರಗಳು ನೀರಿನಲ್ಲಿ ಮುಳುಗಲಿವೆ !

ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ವರದಿಯ ಪ್ರಕಾರ, ಹವಾಮಾನದ ಬದಲಾವಣೆಯಿಂದಾಗುವ ವಿಪತ್ತಿನಿಂದಾಗಿ ಮುಂದಿನ ೮೦ ವರ್ಷಗಳಲ್ಲಿ ಅಂದರೆ ೨೧೦೦ರಲ್ಲಿ ಭಾರತದ ಕರಾವಳಿಯಲ್ಲಿ ಮುಂಬಯಿ ಸೇರಿದಂತೆ ೧೨ ನಗರಗಳು ೩ ಅಡಿಗಳಷ್ಟು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ

ಪಾಕಿಸ್ತಾನದಲ್ಲಿ ಧರ್ಮನಿಂದನೆ ಪ್ರಕರಣದಲ್ಲಿ ೮ ವರ್ಷದ ಹಿಂದೂ ಹುಡುಗನಿಗೆ ಗಲ್ಲು ಶಿಕ್ಷೆಯಾಗುವ ಸಾಧ್ಯತೆ

ಪಾಕಿಸ್ತಾನದ ಒಂದು ಮದರಸಾದಲ್ಲಿನ ಗ್ರಂಥಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧಿತನಾದ ೮ ವರ್ಷದ ಹಿಂದೂ ಹುಡುಗನಿಗೆ ಧರ್ಮನಿಂದನೆಯ ಕಾನೂನಿನಡಿ ಗಲ್ಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಕರಾಚಿ (ಪಾಕಿಸ್ತಾನ)ಯಲ್ಲಿ ಶ್ರೀ ಗಣಪತಿ ದೇವಾಲಯದ ಧ್ವಂಸದ ವಿರುದ್ಧ ಹಿಂದೂಗಳ ಪ್ರತಿಭಟನೆ !

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕೆಲವು ದಿನಗಳ ಹಿಂದೆ ಶ್ರೀ ಗಣಪತಿ ದೇವಸ್ಥಾನವನ್ನು ಧ್ವಂಸ ಮಾಡಿರುವುದನ್ನು ವಿರೋಧಿಸಿ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಹಿಂದೂಗಳು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ, ಅವರು ‘ಜೈ ಶ್ರೀರಾಮ್’ ಮತ್ತು ‘ಹರ್ ಹರ್ ಮಹದೇವ್’ ಘೋಷಣೆಯನ್ನೂ ಕೂಗಿದರು.