ಔತಣಕೂಟದಲ್ಲಿ ಮಾದಕ ದ್ರವ್ಯಗಳ ಬಳಕೆ
ಇಂತಹ ವಾರ್ತೆಗಳನ್ನು ಭಾರತೀಯ ಪ್ರಸಾರಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತವೆ. ಏಕೆಂದರೆ ಇವರ ಬರವಣಿಗೆಯಲ್ಲಿ ಪಾದ್ರಿಗಳ ವ್ಯಕ್ತಿತ್ವ ಹಾಗಿಲ್ಲ ಮತ್ತು ಭಾರತೀಯರಿಗೆ ಅವರು ಹಾಗೆ ತೋರಿಸುವುದು ಇಷ್ಟಪಡುವುದಿಲ್ಲ ! – ಸಂಪಾದಕರು
ರೋಮ್ (ಇಟಲಿ) – ಇಲ್ಲಿನ ಫ್ರಾನ್ಸಿಸ್ಕೋ ಸ್ಪಾಗಾನೆಸಿ ಎಂಬ 40 ವರ್ಷದ ಪಾದ್ರಿಯನ್ನು ಚರ್ಚ್‍ನ 86 ಲಕ್ಷ ರೂಪಾಯಿ ಕದ್ದಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಕದ್ದಿರುವ ಹಣದಿಂದ ಪಾದ್ರಿಯು ತನ್ನ ಮನೆಯಲ್ಲಿ ಸಲಿಂಗ ಕಾಮ ಸಂಬಂಧ ಇರುವವರ `ಲೈಂಗಿಕ ಸಂಬಂಧದ ಔತಣಕೂಟ’ (ಸೆಕ್ಸ್ ಪಾರ್ಟಿ) ಏರ್ಪಡಿಸಿದ್ದನು. ಹಾಗೆಯೇ ಔತಣಕೂಟಕ್ಕಾಗಿ ಅವನು ಮಾದಕ ದ್ರವ್ಯಗಳನ್ನು ಸಹ ಖರೀದಿಸಿದ್ದನು. ‘ಡೈಲಿ ಮೇಲ್’ ಎಂಬ ಇಂಗ್ಲೆಂಡ್‍ನ ದೈನಿಕವು ಈ ವಾರ್ತೆಯನ್ನು ಪ್ರಕಟಿಸಿದೆ. ಈ ಪಾದ್ರಿಯು ಇಲ್ಲಿಯ ಪ್ರೆಟೋ ಚರ್ಚ್‍ನಲ್ಲಿ ಕಾರ್ಯನಿರತನಾಗಿದ್ದನು. ಈ ಪ್ರಕರಣದಲ್ಲಿ ಪೋಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
Italian priest allegedly stole church funds for drugs, gay sex parties https://t.co/s5cxrjHiOH pic.twitter.com/xp0ss32PRp
— New York Post (@nypost) September 22, 2021
ಮಾದಕ ದ್ರವ್ಯಗಳ ಬಗ್ಗೆ ಪೊಲೀಸರಿಂದ ವಿಚಾರಣೆ ನಡೆಯುತ್ತಿರುವಾಗ ಪೊಲೀಸರಿಗೆ ಈ ಪಾದ್ರಿಯ ಮಾಹಿತಿ ಸಿಕ್ಕಿತು. ಮತ್ತು ಅದರಿಂದ ಈ ಪ್ರಕರಣವು ಬಹಿರಂಗವಾಯಿತು. ಪಾದ್ರಿಯ ಜೊತೆ ವಾಸಿಸುವ ಅವನ ಸಹಚರನು ಮಾದಕ ದ್ರವ್ಯಗಳ ಮಾರಾಟದಲ್ಲಿ ಸಹಭಾಗಿ ಆಗಿದ್ದನು. ಅವನ ಮಾಹಿತಿಯು ಪೊಲೀಸರಿಗೆ ದೊರಕಿತ್ತು. ಈ ಸಹಚರನು ನೆದಲ್ರ್ಯಾಂಡ್ ನಿಂದ ‘ಜಿಹೆಚ್‍ಬಿ’ ಹೆಸರಿನ ಮಾದಕ ದ್ರವ್ಯವನ್ನು ತರಿಸಿದ್ದನು. ಪೊಲೀಸರು ನಡೆಸಿರುವ ವಿಚಾರಣೆಯ ವೇಳೆ ಈ ಮಾದಕ ದ್ರವ್ಯವು ಈ ಸಹಾಯಕ ವರೆಗೂ ಮತ್ತು ನಂತರ ಪಾದ್ರಿಯವರೆಗೂ ತಲುಪಿತು. ಪೊಲೀಸರಿಗೆ ಪಾದ್ರಿಯ ಮನೆಯಲ್ಲಿಯೂ ಜಿಹೆಚ್‍ಬಿ ಮಾದಕ ದ್ರವ್ಯ ಸಿಕ್ಕಿದೆ.