ಬಾಂಗ್ಲಾದೇಶದಲ್ಲಿ ದೇವಸ್ಥಾನಗಳ ಮೇಲೆ ದಾಳಿಯಾದ ೬ ತಿಂಗಳ ನಂತರ ಬಂಧಿಸಲ್ಪಟ್ಟ ಹಿಫಾಜತ – ಎ – ಇಸ್ಲಾಮ್‌ನ ಮತಾಂಧ ನಾಯಕ

ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮಾಡುವ, ಹಾಗೂ ದಂಗೆಗಳನ್ನು ಎಬ್ಬಿಸುವ ಮತಾಂಧನನ್ನು ಆರು ತಿಂಗಳ ನಂತರ ಬಂಧಿಸುವ ಬಾಂಗ್ಲಾದೇಶದ ಪೊಲೀಸರು ! ಇದರಿಂದ ಅಲ್ಲಿಯ ಹಿಂದೂಗಳಿಗೆ ನ್ಯಾಯ ಸಿಗಬಹುದು ಎಂಬ ಅಪೇಕ್ಷೆಯೇ ಬೇಡ ! – ಸಂಪಾದಕರು

ಢಾಕಾ – ಬಾಂಗ್ಲಾದೇಶದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮಾರ್ಚ್ ೨೬ ರಂದು ದಿನದಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಹೋಗಿದ್ದರು. ಆ ಸಮಯದಲ್ಲಿ ಮತಾಂಧರು ಅನೇಕ ಹಿಂದೂ ದೇವಸ್ಥಾನಗಳನ್ನು ಮೇಲೆ ದಾಳಿ ನಡೆಸಿದ್ದರು. ಅದರಲ್ಲಿ ಹಿಫಾಜತ – ಎ – ಇಸ್ಲಾಮಿ ಈ ಸಂಘಟನೆಯ ಕೈವಾಡ ಇತ್ತು. ಆ ಸಮಯದಲ್ಲಾದ ಹಿಂಸಾಚಾರದಲ್ಲಿ ನೂರಾರು ಜನರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಹಿಫಾಜತ – ಎ – ಇಸ್ಲಾಮ್‌ನ ನಾಯಕ ರಿಜ್ವಾನ್ ರಫೀಕ್‌ನನ್ನು ಸೆಪ್ಟೆಂಬರ್ ೧೭ ರಂದು ಬಂಧಿಸಲಾಯಿತು.

ಈ ಹಿಂಸಾಚಾರದ ಸಮಯದಲ್ಲಿ ಮಗುರಾ ಜಿಲ್ಲೆಯ ಮಹಂಮದಪುರದಲ್ಲಿಯ ೪೦೦ ವರ್ಷದ ಪ್ರಾಚೀನ ಅಷ್ಟಗ್ರಾಮ ಮಹಾಸ್ಮಶಾನದಲ್ಲಿನ ದೇವಸ್ಥಾನ ಮತ್ತು ರಾಧಾಗೋವಿಂದ ಆಶ್ರಮವನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚಲಾಗಿತ್ತು. ಅದರಲ್ಲಿ ರಥ ಮತ್ತು ದೇವತೆಗಳ ಮೂರ್ತಿಗಳು ಸುಟ್ಟು ಭಸ್ಮವಾಗಿದ್ದವು.