ಶಾಂತಿಯುತ ಚುನಾವಣೆ ನಡೆಸಲು ನಾವು ಭಾರತವನ್ನೇ ಪಾಕಿಸ್ತಾನ್ ಆಕ್ರಮಿತ ಕಾಶ್ಮೀರಕ್ಕೆ ಆಹ್ವಾನಿಸುತ್ತೇವೆ ! – ಪ್ರತಿಪಕ್ಷಗಳಿಂದ ಇಮ್ರಾನ್ ಖಾನ್ ಸರಕಾರಕ್ಕೆ ಟೀಕೆ

ಈ ಹಿಂಸಾಚಾರದ ನಂತರ ಪ್ರತಿಪಕ್ಷದ ಅಭ್ಯರ್ಥಿಗಳು ಇಮ್ರಾನ್ ಖಾನ್ ಅವರನ್ನು ಟೀಕಿಸುತ್ತಾ ‘ಭಾರತವು ನಿಮಗಿಂತ ಉತ್ತಮವಾಗಿದೆ ಮತ್ತು ಮತದಾನದ ಸಮಯದಲ್ಲಿ ಕನಿಷ್ಠಪಕ್ಷ ಹಿಂಸಾಚಾರವಾದರೂ ಆಗುವುದಿಲ್ಲ. ಇಲ್ಲಿ ಚುನಾವಣೆ ನಡೆಸಲು ನಾವು ಅವರನ್ನು ಆಹ್ವಾನಿಸುತ್ತೇವೆ’, ಎಂದು ಅವರು ಹೇಳಿದರು.

ತಡವಾಗುವ ಮುಂಚೆ ನಮ್ಮನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಹೊರತೆಗೆಯಿರಿ !

ಅಫಘಾನಿಸ್ತಾನದ ತಾಲಿಬಾನ್‍ಗಳಿಂದ ಭಯಭೀತರಾಗಿರುವ ಹಿಂದೂಗಳು ಮತ್ತು ಸಿಖ್ಖರು `ತಡವಾಗುವ ಮುಂಚೆ ನಮ್ಮನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಿರಿ’ ಎಂದು ಕಳಕಳಿಯ ಮನವಿಯನ್ನು ಜಗತ್ತಿಗೆ ಮಾಡಿದ್ದಾರೆ.

ವೀಡಿಯೋಗಳನ್ನು ವೀಕ್ಷಿಸಿ : ಕಳೆದ ೧೦೦೦ ವರ್ಷಗಳಲ್ಲೇ ಗರಿಷ್ಠ ಮಳೆ : ಚೀನಾದಲ್ಲಿ ಲಕ್ಷಾಂತರ ಜನರು ನಿರಾಶ್ರಿತರು !

ಇಲ್ಲಿಯ ಹವಾಮಾನ ಇಲಾಖೆಯ ಪ್ರಕಾರ ಹೆನಾನ್ ಪ್ರಾಂತ್ಯದಲ್ಲಿ ಕಳೆದ ೧೦೦೦ ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಿದೇಶಿ ಸುದ್ದಿ ಜಾಲತಾಣ ‘ಟೆಲಿಗ್ರಾಫ್’ನ ಮಾಹಿತಿಯ ಪ್ರಕಾರ, ಇದುವರೆಗೆ ೨೫ ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ತಾಲಿಬಾನಿಯರು ಮೊದಲು ದಾನಿಶ್ ಸಿದ್ದಕಿಯ ಮೇಲೆ ಗುಂಡು ಹಾರಿಸಿದರು ನಂತರ ಆತ ಭಾರತೀಯನಾಗಿದ್ದಾನೆಂಬ ಕೋಪದಿಂದ ಆತನ ತಲೆಯನ್ನು ವಾಹನದಡಿಯಲ್ಲಿ ಹೊಸಕಿ ಹಾಕಿದರು ! – ಅಫ್ಘಾನ್ ಕಮಾಂಡರನು ನೀಡಿದ ಮಾಹಿತಿ

ಭಾರತದ ವಾರ್ತಾಛಾಯಾಚಿತ್ರಕಾರ ಹಾಗೂ ‘ಪುಲಿತ್ಜರ’ ಪ್ರಶಸ್ತಿ ವಿಜೇತ ದಾನಿಶ್ ಸಿದ್ದಕಿಯವರನ್ನು ಕೆಲವು ದಿನಗಳ ಹಿಂದೆ ಅಫಘಾನಿಸ್ತಾನದಲ್ಲಿ ಹತ್ಯೆ ಮಾಡಲಾಗಿತ್ತು. ಗುಂಡು ತಗಲಿದ್ದರಿಂದ ಆತ ಸಾವನ್ನಪ್ಪಿದನು ಎಂದು ಹೇಳಲಾಗುತ್ತದೆ.

ಪಾಕಿಸ್ತಾನದಲ್ಲಿ ೧೮ ವರ್ಷ ಆಗುವ ಮೊದಲೇ ಧರ್ಮವನ್ನು ಬದಲಾಯಿಸುವುದರ ಮೇಲೆ ನಿಷೇಧ ಹೇರುವ ಪ್ರಸ್ತಾವನೆಗೆ ಓರ್ವ ಸಚಿವರಿಂದ ವಿರೋಧ

ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಸಿನೆಟ ಸಂಸದೀಯ ಸಮಿತಿಯ ಸದಸ್ಯ ಕಾದರಿಯವರು, ೧೮ ವರ್ಷ ಆಗುವ ಮೊದಲು ಧರ್ಮವನ್ನು ಬದಲಾಯಿಸುವುದು ಆ ವ್ಯಕ್ತಿಯ ಇಚ್ಛೆಯ ಮೇಲೆ ಅವಲಂಬಿಸಿರುತ್ತದೆ. ಆತನನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಯಾರಾದರು ೧೪ ವರ್ಷ ಆದನಂತರ ಬೇರೆ ಧರ್ಮವನ್ನು ಸ್ವೀರಿಸಲು ಬಯಸಿದ್ದರೆ, ಅದರ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲ.

ಪಾಕಿಸ್ತಾನದಲ್ಲಿಅಫ್ಘಾನಿಸ್ತಾನದ ರಾಯಭಾರಿಯವರ ಮಗಳ ಅಪಹರಣ !

ಅಫ್ಘಾನಿಸ್ತಾನದ ರಾಯಭಾರಿ ನಜೀಬುಲ್ಲಾ ಅಲಿಖಿಲ ಅವರ ಪುತ್ರಿ ಸಿಲಸಿಲಾ ಅಲಿಖಿಲ ಇವಳು ಜುಲೈ ೧೬ ರಂದು ಮನೆಗೆ ತೆರಳುತ್ತಿದ್ದಾಗ ಕೆಲವರು ಆಕೆಯನ್ನು ಅಪಹರಿಸಿದರು. ಅಪಹರಣಕಾರರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ರಷ್ಯಾ ರಾಷ್ಟ್ರಪತಿ ಪುತಿನ ಇವರ ವಿರುದ್ಧ ರಸ್ತೆಗಿಳಿದ ಲಕ್ಷಗಟ್ಟಲೆ ರಷ್ಯನ್ ನಾಗರಿಕರು

ವಿರೋಧ ಪಕ್ಷದ ನೇತಾರ ಅಲೆಕ್ಸಿ ನವಲ್ನಿ ಇವರನ್ನು ಬಂಧಿಸಿದ ನಂತರ ರಷ್ಯಾದಲ್ಲಿ ರಾಷ್ಟ್ರಪತಿ ವ್ಲಾದಿಮೀರ್ ಪುತಿನ್ ಇವರ ವಿರುದ್ಧ ಲಕ್ಷಗಟ್ಟಲೆ ಜನರು ರಾಜಧಾನಿ ಮಾಸ್ಕೋದಲ್ಲಿ ರಸ್ತೆಗಿಳಿದಿದ್ದಾರೆ.