ಪಾಕಿಸ್ತಾನವು ಬಲುಚಿ ಜನರ ಮೇಲೆ ಕಳೆದ 74 ವರ್ಷದಿಂದ ನಡೆಸುತ್ತಿರುವ ದೌರ್ಜನ್ಯ ನೋಡಿದರೆ ಈ ಘಟನೆ ಬಹಳ ಚಿಕ್ಕದಾಗಿದೆ; ಆದರೆ ಇದರಿಂದ ಜಗತ್ತು ಈ ಜನರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಹಸ್ತಕ್ಷೇಪ ಮಾಡಬೇಕಾಗಬಹುದು ! – ಸಂಪಾದಕರು
ಗ್ವಾದರ್ (ಪಾಕಿಸ್ತಾನ) – ಪಾಕಿಸ್ತಾನದ ಬಲುಚಿಸ್ತಾನ ಪ್ರಾಂತದಲ್ಲಿ ಗ್ವಾದರ್ ನಗರದಲ್ಲಿ ಬಲುಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಘಟನೆಯ ಕಾರ್ಯಕರ್ತರು ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಇವನ ಪ್ರತಿಮೆಯನ್ನು ಬಾಂಬ್‍ನಿಂದ ಧ್ವಂಸ ಮಾಡಿದ್ದಾರೆ. ಇಲ್ಲಿಯ ಸಮುದ್ರದಡದಲ್ಲಿ ಈ ಪ್ರತಿಮೆಯಿತ್ತು. ಇದೇ ವರ್ಷ ಜೂನ್ ತಿಂಗಳಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಈ ಪ್ರತಿಮೆಯ ಮೊದಲು ಹಾಗೂ ಸ್ಫೋಟದ ನಂತರ ಧ್ವಂಸ ಆಗಿರುವ ಛಾಯಾಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಪಾಕಿಸ್ತಾನದಲ್ಲಿ ನಿಷೇಧ ಹೇರಿದ ‘ಬಲೋಚ್ ರಿಪಬ್ಲಿಕನ್ ಆರ್ಮಿ’ಯ ವಕ್ತಾರ ಬಬಗರ್ ಬಲೋಚ ಇವರು ಟ್ವೀಟ್ ಮಾಡಿ ಈ ಸ್ಫೋಟದ ಹೊಣೆಯನ್ನು ಸ್ವೀಕರಿಸಿದ್ದಾರೆ.
Pakistan: Baloch freedom fighters blow up statue of Mohammad Ali Jinnah in Gwadarhttps://t.co/ShbVwrYixi
— OpIndia.com (@OpIndia_com) September 27, 2021
1. ಗ್ವಾದರ ಉಪಆಯುಕ್ತ ಮೇಜರ (ಸೇವಾನಿವೃತ್ತ) ಅಬ್ದುಲ್ ಕಬೀರ ಖಾನ್ ಇವರ ಮಾಹಿತಿಯನುಸಾರ ಈ ಪ್ರಕರಣದ ವಿಚಾರಣೆಗಾಗಿ ಒಂದು ಉನ್ನತ ಮಟ್ಟದ ಸಮಿತಿಯ ರಚಿಸಲಾಗುತ್ತಿದೆ. ಅವರು, ಜಿನ್ನಾ ಇವರ ಪ್ರತಿಮೆಯನ್ನು ಕೆಡವಿದ ಜನರು ಪ್ರವಾಸಿಗಳೆಂದು ಈ ಪರಿಸರಕ್ಕೆ ನುಗ್ಗಿದ್ದರು. ಈ ಪ್ರಕರಣದಲ್ಲಿ ಈವರೆಗೆ ಯಾರನ್ನು ಬಂಧಿಸಲಾಗಿಲ್ಲ; ಆದರೆ ಬೇಗನೆ ವಿಚಾರಣೆಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
2. ಬಲೂಚಿಸ್ತಾನಕ್ಕೆ ಸ್ವಾತಂತ್ರ್ಯ ನೀಡಬೇಕು ಮತ್ತು ಆ ಭಾಗದಲ್ಲಿನ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು, ಅದಕ್ಕಾಗಿ ಸ್ಥಾಪಿತ ಸರಕಾರದ ವಿರುದ್ಧ ಬಲುಚಿ ಜನರು ಸಂಘರ್ಷ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಈ ಪ್ರತಿಮೆ ಧ್ವಂಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.