ಗರ್ಭಿಣಿಯಾಗಿರುವಾಗ ನಿರಾಸೆಯಿಂದಿರುವ ಪೋಷಕರಿಂದಾಗಿ ಮಕ್ಕಳಲ್ಲಿಯೂ ಮಾನಸಿಕ ವ್ಯಾಧಿ ! – ಬ್ರಿಸ್ಟಲ್ ವಿಶ್ವವಿದ್ಯಾಲಯದ ಮಾನಸೋಪಚಾರ ತಜ್ಞರ ಅಭ್ಯಾಸ

ಇದರಿಂದ ಸಮಾಜದಲ್ಲಿನ ಪ್ರತಿಯೊಂದು ಘಟಕಕ್ಕೂ ಸಾಧನೆಯನ್ನು ಕಲಿಸುವುದು ಏಕೆ ಅಗತ್ಯವಿದೆ, ಎಂಬುದು ಗಮನಕ್ಕೆ ಬರುತ್ತದೆ ! ಹಿಂದೂ ಸಂಸ್ಕೃತಿಯಲ್ಲಿ ಗರ್ಭಿಣಿ ಮಹಿಳೆಗೆ ಧಾರ್ಮಿಕ ಗ್ರಂಥಗಳನ್ನು ಓದುವುದು, ಸಾಧನೆ ಮಾಡುವುದು, ಇತ್ಯಾದಿ ವಿಷಯಗಳನ್ನು ಮಾಡಲು ಹೇಳಲಾಗುತ್ತದೆ. ಈ ಅಭ್ಯಾಸದಿಂದ ಅದು ಏಕೆ ಅಗತ್ಯ ಎನ್ನುವುದು ಗಮನಕ್ಕೆ ಬರುತ್ತದೆ ! – ಸಂಪಾದಕರು 

ಲಂಡನ (ಬ್ರಿಟನ) – ಗರ್ಭಿಣಿ ಮಹಿಳೆಯು ನಿರಾಶೆಯಿಂದ ಇದ್ದಲ್ಲಿ ಅಂತಹವರ ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಆ ಮಕ್ಕಳು ದೊಡ್ಡವರಾದ ಮೇಲೆ ಅವರಲ್ಲಿ ನಿರಾಸೆಯ ಪ್ರಮಾಣವು ಬೇರೆ ಮಕ್ಕಳಿಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ, ಎಂದು ಬ್ರಿಟನನಲ್ಲಿನ ಬ್ರಿಸಟಲ ವಿಶ್ವವಿದ್ಯಾಲಯದಲ್ಲಿನ ಮಾನಸೋಪಚಾರ ತಜ್ಞರು ನಡೆಸಿದ ಒಂದು ಅಧ್ಯಯನದ ಆಧಾರದಲ್ಲಿ ದೃಢೀಕರಿಸಿದ್ದಾರೆ. ಈ ಅಧ್ಯಯನವು 14 ವರ್ಷಗಳವರೆಗೂ ನಡೆಯಿತು. ಆ ಸಮಯದಲ್ಲಿ 5 ಸಾವಿರಕ್ಕಿಂತ ಹೆಚ್ಚು ಮಕ್ಕಳನ್ನು ಅವರಿಗೆ 24 ವರ್ಷಗಳಾಗುವವರೆಗೂ ಅವರ ಮಾನಸಿಕ ಆರೋಗ್ಯದ ಕಡೆ ನಿಯಮಿತವಾಗಿ ಗಮನವಿಡಲಾಯಿತು.

1. ಮಾನಸೋಪಚಾರ ತಜ್ಞರ ಅಭಿಪ್ರಾಯದಂತೆ, ಒಂದು ವೇಳೆ ಮಹಿಳೆಗೆ ಪ್ರಸೂತಿಯ ಬಳಿಕ ಖಿನ್ನತೆ ಅನಿಸಿದರೆ, ಅದರಿಂದಲೂ ಮಕ್ಕಳ ಮೇಲೆ ಪರಿಣಾಮವಾಗಬಹುದು. ಗರ್ಭಾವಸ್ಥೆ ಹಾಗೂ ಮಗುವಿನ ಜನನದ ಬಳಿಕ ತಂದೆ-ತಾಯಿಯವರು ತಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯವಾಗಿದೆ.

2. ಪ್ರಸೂತಿಯ ಬಳಿಕ ನಿರಾಸೆಯನ್ನು ಎದುರಿಸಬೇಕಾಗಿ ಬಂದಂತಹ ಮಾತೆಯ ಮಕ್ಕಳು ಪ್ರಾಯಕ್ಕೆ ಬಂದಾಗ ನಿರಾಸೆಯ ಸ್ಥಿತಿ ಇನ್ನೂ ಹದೆಗೆಟ್ಟಿತು. ಇದರ ತುಲನೆಯಲ್ಲಿ ಗರ್ಭಾವಸ್ಥೆಯಲ್ಲಿರುವಾಗ ಮಾನಸಿಕ ತೊಂದರೆಯಾದ ಮಹಿಳೆಯ ಮತ್ತು ಅವರ ಮಕ್ಕಳಿಗಾದ ನಿರಾಸೆಯ ಮಟ್ಟ ಸರಾಸರಿಯಾಗಿತ್ತು. ಯಾವ ಮಕ್ಕಳ ಮಾತೆಗೆ ಗರ್ಭಾವಸ್ಥೆ ಹಾಗೂ ಪ್ರಸೂತಿ ಎರಡೂ ಕಾಲದಲ್ಲಿಯೂ ನಿರಾಸೆಯಿತ್ತೋ, ಅಂತಹ ಮಕ್ಕಳಿಗೆ ಸರ್ವಾಧಿಕ ಮಾನಸಿಕ ತೊಂದರೆಯಾಯಿತು.

3. ‘ರಾಯಲ ಕಾಲೇಜ ಆಫ ಸಾಯಕ್ಯಾಟ್ರಿಸ್ಟ್’ ಎಂಬ ಮಾನಸೋಪಚಾರ ತಜ್ಞರ ಸಂಘಟನೆಯ ಡಾ. ಜೊಆನ ಬ್ಲಾಕರವರು ಹೀಗೆಂದದರು, ತಂದೆ- ತಾಯಿಯ ಮೇಲೆ ಯಾವ ರೀತಿಯ ಪರಿಣಾಮವಾಯಿತೋ, ಅದೇ ರೀತಿ ಮಕ್ಕಳು ಕೂಡ ಭವಿಷ್ಯದಲ್ಲಿ ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲಿ ಒಳ್ಳೆಯ ವಿಷಯವೆಂದರೆ ಅದರ ಮೇಲೆ ಉಪಚಾರ ನಡೆಸಬಹುದು. ಕೇವಲ ಬೇಗನೇ ಸಹಾಯ ನೀಡುವ ಅಗತ್ಯವಿರುತ್ತದೆ.

4. ‘ರಾಯಲ ಕಾಲೇಜ ಆಫ್ ಸಾಯಕ್ಯಾಟ್ರಿಸ್ಟ್’ನ ಪ್ರಚಲಿತ ಅಂದಾಜಿಗನುಸಾರ ಕೊರೊನಾದ ಕಾಲದಲ್ಲಿ 16 ಸಾವಿರಕ್ಕಿಂತ ಹೆಚ್ಚು ಮಹಿಳೆಯರಿಗೆ ಪ್ರಸೂತಿಯ ನಂತರ ಅಗತ್ಯವಾಗಿರುವ ಸಹಾಯ ಸಿಗಲಿಲ್ಲ. ಆದ್ದರಿಂದ ಅವರು ನಿರಾಸೆಯನ್ನು ಎದುರಿಸಬೇಕಾಯಿತು.

5. ಈ ಸಂಶೋಧನೆಯ ಗುಂಪಿನಲ್ಲಿದ್ದ ಡಾ. ಪ್ರಿಯಾ ರಾಜಗುರು ತಮ್ಮ ಅಭಿಪ್ರಾಯವನ್ನು ಮಂಡಿಸುವಾಗ, ತಂದೆಯ ನಿರಾಸೆಯಿಂದಲೂ ಮಕ್ಕಳ ಮೇಲೆ ಪರಿಣಾಮವಾಗುತ್ತದೆ; ಆದರೆ ಇದು ಕೇವಲ ಒಂದು ಅವಸ್ಥೆಯಲ್ಲಿನ ನಿರಾಸೆಯಾಗಿರುವುದರಿಂದ ಮಕ್ಕಳ ಮೇಲಾಗುವ ಪರಿಣಾಮವು ಅಲ್ಪವಾಗಿರುುತ್ತದೆ. ಪ್ರಾಯಕ್ಕೆ ಬಂದ ಮಕ್ಕಳ ಮಾನಸಿಕ ಆರೋಗ್ಯ ಚೆನ್ನಾಗಿರಲು ಪೋಷಕರು ಮಕ್ಕಳ ಜನನದ ಮೊದಲಿನಿಂದಲೇ ಪ್ರಯತ್ನಿಸಬೇಕಾಗುವುದು ಎಂದರು.

6. ಪ್ರತೀದಿನ ದೇಶದಲ್ಲಿ 2 ಸಾವಿರಕ್ಕಿಂತ ಹೆಚ್ಚು ಪ್ರಾಯಕ್ಕೆ ಬಂದ ಮಕ್ಕಳು ನ್ಯಾಶನಲ್ ಹೆಲ್ತ ಸರ್ವೀಸನ (ಎನ್.ಎಚ್.ಎಸ್.ನ) ಮಾನಸಿಕ ಆರೋಗ್ಯ ಸೇವೆಯ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಮಾನಸಿಕ ಆರೋಗ್ಯವು ಎಷ್ಟು ಹದೆಗೆಟ್ಟಿದೆ, ಎಂಬ ಬಗ್ಗೆ ಅಂದಾಜು ಸಿಗುತ್ತದೆ.

ಎನ್.ಎಚ್.ಎಸ್.ನ ಅಂಕಿಅಂಶಗಳಿಗನುಸಾರ ಕೇವಲ ಏಪ್ರಿಲ್ ನಿಂದ ಜೂನನ ಸಮಯ ಮಿತಿಯಲ್ಲಿ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ 1 ಲಕ್ಷ 90 ಸಾವಿರ ಸಂಖ್ಯೆಯ ಕಿಶೋರರನ್ನು ಎನ್.ಎಚ್ಚ.ಎಸ್. ಮಾನಸಿಕ ಆರೋಗ್ಯ ಸೇವೆಯ ಬಳಿಗೆ ಕಳುಹಿಸಿಕೊಡಲಾಯಿತು. ‘ರಾಯಲ್ ಕಾಲೇಜ್ ಆಫ್ ಸೈಕ್ಯಾಟ್ರಿಸ್ಟ್’ನ ಮಾನಸೋಪಚಾರ ತಜ್ಞರ ಅಭಿಪ್ರಾಯದಂತೆ ಆ ಮಕ್ಕಳ ಮೇಲೆ ಮೊದಲಿನಿಂದಲೂ ಒತ್ತಡವಿತ್ತು. ಕೊರೊನಾದಿಂದ ಅದು ಇನ್ನೂ ಹೆಚ್ಚಾಯಿತು.