ಪಾಕ್‍ನಿಂದ ಅತಿಕ್ರಮಣ ವಿರೋಧಿ ಕ್ರಮದಿಂದ ‘ಮುಸಲ್ಮಾನ ವಿರೋಧಿ ಹಿಂಸೆ’ ಎಂದು ತಪ್ಪಾಗಿ ಉಲ್ಲೇಖ !
ಭಾರತದ ಆಂತರಿಕ ಪ್ರಶ್ನೆಗಳಲ್ಲಿ ಮೇಲಿಂದ ಮೇಲೆ ಮೂಗು ತೂರಿಸುವ ಪಾಕಿಸ್ತಾನಕ್ಕೆ ಭಾರತವು ಅದಕ್ಕೆ ತಿಳಿಯುವಂಥ ಭಾಷೆಯಲ್ಲಿ ಉತ್ತರಿಸಬೇಕು ! – ಸಂಪಾದಕರು
ಇಸ್ಲಾಮಾಬಾದ – ಅಸ್ಸಾಂನಲ್ಲಿಯ ದರಾಂಗ ಜಿಲ್ಲೆಯ ಧೌಲಪುರದಲ್ಲಿ ಮತಾಂಧರು ಸರಕಾರಿ ಭೂಮಿಯ ಮೇಲೆ ಮಾಡಿದ್ದ ಅತಿಕ್ರಮಣವನ್ನು ತೆಗೆಯಲು ಹೋಗಿದ್ದ ಅತಿಕ್ರಮಣ ವಿರೋಧಿ ದಳ ಮತ್ತು ಪೊಲೀಸರ ಮೇಲೆ ಸಾವಿರಾರು ಮತಾಂಧರು ದಾಳಿ ಮಾಡಿದರು. ಇದರಲ್ಲಿ ಪೊಲೀಸರು ತಮ್ಮ ರಕ್ಷಣೆಗಾಗಿ ಗುಂಡನ್ನು ಹಾರಿಸಿದರು. ಇದರಲ್ಲಿ ಸದ್ದಾಮ್ ಹುಸೇನ್ ಮತ್ತು ಶೇಕ್ ಫರೀದ್ ಇವರು ಹತರಾದರು. ಮತಾಂಧರ ಮೇಲೆ ನಡೆಸಿರುವ ಕ್ರಮದಿಂದ ಪಾಕಿಸ್ತಾನವು ಕೂಗಲಾರಂಭಿಸಿದೆ. ಪಾಕ್ ಇಲ್ಲಿಯ ಭಾರತದ ಉಚ್ಚಾ ಆಯುಕ್ತರ ಜೊತೆಗೆ ಮಾತನಾಡಿ ‘ಅಸ್ಸಾಂನಲ್ಲಿ ಮುಸಲ್ಮಾನರನ್ನು ಗುರಿಯಾಗಿಸಲಾಗಿದೆ. ಭಾರತವು ಈ ‘ಮುಸಲ್ಮಾನ ವಿರೋಧಿ ಹಿಂಸೆ’ಯ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು’ ಹೇಳಿದೆ.
‘Investigate anti-Muslim violence’: Pakistan summons Indian diplomat over Assam eviction drivehttps://t.co/sDpM2gRwUg
— TIMES NOW (@TimesNow) September 25, 2021