ಯುರೋಪ್‍ನಲ್ಲಿನ ಲಿಥುವಾನಿಯಾ ದೇಶದಲ್ಲಿ ಚೀನಾ ನಿರ್ಮಿತ ಸಂಚಾರವಾಣಿಯನ್ನು ಉಪಯೋಗಿಸದಂತೆ ನಾಗರಿಕರಿಗೆ ಸೂಚನೆ

ಭಾರತ ಸರಕಾರವೂ ಈ ರೀತಿಯ ಸೂಚನೆಯನ್ನು ನಾಗರಿಕರಿಗೆ ನೀಡಬೇಕು !

ವಿಲನಿಯಸ (ಲಿಥುವಾನಿಯಾ) – ಯುರೋಪ್‍ನ ಲಿಥುವಾನಿಯಾ ದೇಶದ ಸರಕಾರವು ತನ್ನ ನಾಗರಿಕರಿಗೆ ಚೀನಾ ನಿರ್ಮಿತ ಸಂಚಾರವಾಣಿಯನ್ನು ಎಸೆಯಲು ಹೇಳಿ ಭವಿಷ್ಯದಲ್ಲಿ ಅದನ್ನು ಖರೀದಿಸಬಾರದು ಎಂದು ಸೂಚನೆ ನೀಡಿದೆ. ಸರಕಾರಿ ವರದಿಯಲ್ಲಿ ‘ಚೀನಾ ನಿರ್ಮಿತ ಸಂಚಾರವಾಣಿ ಮತ್ತು ಇತರ ಉಪಕರಣಗಳು ಅಪಾಯಕಾರಿಯಾಗಿರುವುದರಿಂದ ಅವುಗಳನ್ನು ಉಪಯೋಗಿಸಬಾರದು’, ಎಂದು ಹೇಳಲಾಗಿದೆ.

ಈ ದೇಶದ ಸೈಬರ್ ಭದ್ರತಾ ವ್ಯವಸ್ಥೆಯು, ಚೀನಾದ ‘ಶಾವೋಮಿ’ ಎಂಬ ಪ್ರಸಿದ್ಧ ಕಂಪನಿಯಿಂದ ಯೂರೋಪ್‍ನಲ್ಲಿ ಮಾರಾಟವಾಗುವ ಸಂಚಾರವಾಣಿಗಳಲ್ಲಿ ‘ತಿಬೆಟ್’, ‘ತೈವಾನ್’, ‘ಪ್ರಜಾಪ್ರಭುತ್ವ’ ಮುಂತಾದ ಶಬ್ದಗಳು ಉಪಯೋಗವಾದರೆ ಆ ಸಂಚಾರವಾಣಿಗಳಲ್ಲಿ ಪತ್ತೆ ಹಚ್ಚುವ ಯಂತ್ರವನ್ನು ಅಳವಡಿಸಲಾಗಿದೆ. ಟಿಬೆಟ್ ಮತ್ತು ತೈವಾನ್ ಈ ವಿಷಯವಾಗಿ ಜಗತ್ತಿನಾದ್ಯಂತ ಏನಾದರೂ ನಡೆದರೆ ಅದರ ಮಾಹಿತಿ ಪಡೆಯಲಿಕ್ಕಾಗಿ ಚೀನಾವು ಈ ರೀತಿಯಲ್ಲಿ ಪ್ರಯತ್ನಿಸುತ್ತಿದೆ ಎಂದು ಹೇಳಿದೆ.