ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರವನ್ನು ತೊರೆಯಬೇಕು !

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳಿಂದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯ ಪ್ರಧಾನ ಕಚೇರಿಯ ಎದುರು ಪ್ರತಿಭಟನೆ ಮಾಡುತ್ತಾ ಬೇಡಿಕೆ

* ಈ ರೀತಿ ಪಾಕ್ ಆಕ್ರಮಿತ ಕಾಶ್ಮೀರದ ಜನರು ಯಾಕೆ ಬೇಡಿಕೆ ಮಾಡಬೇಕಾಗುತ್ತಿದೆ ? ಕಳೆದ ಅನೇಕ ದಶಕಗಳಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸವಾಗಿರುವವರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಅಲ್ಲಿ ಉಗ್ರರಿಗೆ ಪ್ರಶಿಕ್ಷಣ ನೀಡುವ ಕೇಂದ್ರಗಳಿವೆ ಎಂದು ಜಗಜ್ಜಾಹೀರಾಗಿರುವಾಗ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯು ಕುರುಡ, ಕಿವುಡ ಮತ್ತು ಮೂಕರಂತೆ ಏಕೆ ವರ್ತಿಸುತ್ತಿದೆ ? – ಸಂಪಾದಕರು 

* ಕೇವಲ ವಿಶ್ವಸಂಸ್ಥೆ ಅಷ್ಟೇ ಅಲ್ಲ, ಜಾಗತಿಕ ಸಮುದಾಯಕ್ಕೆ ಸಹ ಪಾಕ್ ಆಕ್ರಮಿತ ಕಾಶ್ಮೀರದ ಜನರ ಸ್ಥಿತಿ ತಿಳಿದಿದೆ; ಆದರೆ ಯಾರು ಅವರ ಸಹಾಯಕ್ಕಾಗಿ ಮುಂದೆ ಬರುತ್ತಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು 


ಜಿನೇವಾ (ಸ್ವಿಟ್ಜಲ್ರ್ಯಾಂಡ್) – ಇಲ್ಲಿಯ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯ ಪ್ರಧಾನ ಕಚೇರಿಯ ಹೊರಗೆ ಪಾಕ್ ಆಕ್ರಮಿತ ಕಾಶ್ಮೀರದ ರಾಜಕೀಯ ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ಆಂದೋಲನ ಮಾಡಿದರು. ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ಪ್ರಶಿಕ್ಷಣ ಕೊಡುವ ಕೇಂದ್ರಗಳನ್ನು ತೆರೆದಿದೆ, ಅವುಗಳನ್ನು ಮುಚ್ಚಬೇಕು, ಎಂದು ಕಾರ್ಯಕರ್ತರು ಒತ್ತಾಯಿಸಿದರು. ‘ಯುನೈಟೆಡ್ ಕಾಶ್ಮೀರ್ ಪೀಪಲ್ಸ್ ನ್ಯಾಷನಲ್ ಪಾರ್ಟಿ’, ‘ಸ್ವಿಸ್ ಕಾಶ್ಮೀರಿ ಹ್ಯುಮನ್ ರೈಟ್ಸ್’ ಮತ್ತು ‘ಜಮ್ಮು-ಕಾಶ್ಮೀರ ಇಂಟನ್ರ್ಯಾಷನಲ್ ಪೀಪಲ್ಸ್ ಅಲೈನ್ಸ್’ ಈ ಸಂಘಟನೆಗಳು ಜಂಟಿಯಾಗಿ ಈ ಆಂದೋಲನ ನಡೆಸಿದವು. ಈ ಸಮಯದಲ್ಲಿ ಈ ಕಾರ್ಯಕರ್ತರು ವಿಶ್ವ ಸಂಸ್ಥೆಗೆ ಮನವಿ ಸಲ್ಲಿಸಿದರು.

ಪಾಕ್ ಆಕ್ರಮಿತ ಕಾಶ್ಮೀರದಿಂದ ಚುನಾಯಿತ ನಾಯಕ ಸರ್ದಾರ್ ಶೌಕತ ಅಲಿ ಕಾಶ್ಮೀರಿ ಇವರು, ಪಾಕಿಸ್ತಾನವು ನಮ್ಮನ್ನು ಹಿಂಸಿಸಿದೆ. ನಮ್ಮ ಮೇಲಿನ ಪಾಕಿಸ್ತಾನದ ಅಧಿಕಾರವನ್ನು ತೆರವುಗೊಳಿಸಿ. ನಮ್ಮ ಸಂಸ್ಕೃತಿಗೆ ಹಾನಿಯನ್ನುಂಟು ಮಾಡಲಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ ಅಷ್ಟೇ ಅಲ್ಲ, ಬಲೂಚ ಮತ್ತು ಸಿಂಧ ಪ್ರಾಂತ ಇಲ್ಲಿಯೂ ಜನರೂ ಪಾಕಿಸ್ತಾನದಿಂದ ರೋಸಿಹೋಗಿದ್ದಾರೆ. ನಾವು ಪಾಕಿಸ್ತಾನಕ್ಕೆ ಹೆದರುವುದಿಲ್ಲ. ನಾವು ನಮ್ಮ ಐತಿಹಾಸಿಕ ಮೂಲಭೂತ ಅಧಿಕಾರಕ್ಕಾಗಿ ಸಂಘರ್ಷ ಮಾಡುತ್ತೇವೆ ಎಂದು ಹೇಳಿದರು.