ಭಾರತದಲ್ಲಿ ಅನ್ಯ ಪಂಥದವರಿಗೆ ಹೋಲಿಸಿದರೆ ಮುಸಲ್ಮಾನರ ಜನನ ಪ್ರಮಾಣ ಹೆಚ್ಚು ! – ಪ್ಯೂ ರಿಸರ್ಚ್‌ನ ವರದಿ

ಮುಸಲ್ಮಾನರ ಜನನ ಪ್ರಮಾಣ ೨.೬, ಹಾಗೂ ಹಿಂದೂಗಳ ದರ ೨.೧ !

‘ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದ್ದರೂ ಅವರು ಎಂದಿಗೂ ಬಹುಸಂಖ್ಯಾತವಾಗುವುದಿಲ್ಲ, ಎಂದು ಹೇಳುವವರು ಈ ವಿಷಯದ ಬಗ್ಗೆ ಏಕೆ ಏನೂ ಕೂಡ ಮಾತನಾಡುವುದಿಲ್ಲ? ಯಾವ ದೇಶದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದಾರೋ, ಆ ದೇಶ ಎಂದಿಗೂ ಜಾತ್ಯಾತೀತವಾಗಲು ಸಾಧ್ಯವಿಲ್ಲ ಎಂದು ಜಾತ್ಯಾತೀತರಿಗೆ ಹಾಗೂ ಪುರೊ(ಅಧೊ)ಗಾಮಿಗಳ ಗಮನಕ್ಕೆ ಏಕೆ ಬರುವುದಿಲ್ಲ?

ವಾಶಿಂಗಟನ್ (ಅಮೇರಿಕಾ) – ಭಾರತೀಯ ಮುಸಲ್ಮಾನರ ಜನನ ಪ್ರಮಾಣವು ಅನ್ಯ ಮತದವರಿಗೆ ಹೋಲಿಸಿದರೆ ಬಹಳ ಜಾಸ್ತಿಯಿದೆ. ಮುಸಲ್ಮಾನರಲ್ಲಿ ವರ್ಷ ೧೯೯೨ರಲ್ಲಿ ಪ್ರತಿಯೊಬ್ಬ ಮಹಿಳಾ ಜನನ ಪ್ರಮಾಣವು ೪.೪ರಷ್ಟಿತ್ತು, ಹಾಗೂ ಅದು ವರ್ಷ ೨೦೧೫ರಲ್ಲಿ ಕಡಿಮೆಯಾಗಿ ೨.೬ ಆಗಿದೆ. ಆದರೂ ಭಾರತದಲ್ಲಿರುವ ದೊಡ್ಡ ಧಾರ್ಮಿಕ ಸಮೂಹದಲ್ಲಿ ಮುಸಲ್ಮಾನರ ಜನನ ಪ್ರಮಾಣವು ಸರ್ವಾಧಿಕವಿದೆ, ಹಾಗೂ ಅದೆ ಸಮಯದಲ್ಲಿ ಪ್ರತಿಯೊಂದು ಸಮುದಾಯದ ಜನನದರವು ಕಡಿಮೆಯಾಗಿದೆ ಎಂದು ಅಮೇರಿಕಾದ ‘ಪ್ಯೂ ರಿಸರ್ಚ್ನ ವರದಿಯಲ್ಲಿ ನೋಂದಿಸಲಾಗಿದೆ. ಸಪ್ಟಂಬರ ೨೧ ರಂದು ಈ ವರದಿಯನ್ನು ಪ್ರಕಟಿಸಲಾಗಿತ್ತು.

ಈ ವರದಿಗೆ ಅನುಸಾರವಾಗಿ

೧. ಮುಸಲ್ಮಾನ ಹಾಗೂ ಹಿಂದೂ ಪಂಥೀಯರ ಜನನ ಪ್ರಮಾಣದ ಅಂತರ ಕಡಿಮೆಯಾಗಿದೆ. ಹಿಂದೂಗಳ ಜನನ ಪ್ರಮಾಣವು ೨.೧ರಷ್ಟಿದೆ. ವರ್ಷ ೧೯೯೨ರಲ್ಲಿ ಹಿಂದೂಗಳ ಜನನ ಪ್ರಮಾಣವು ೩.೩ರಷ್ಟಿತ್ತು.

೨. ಜೈನ ಮತದವರ ಜನನ ಪ್ರಮಾಣವು ಎಲ್ಲದ್ದಕ್ಕಿಂತ ಕಡಿಮೆ ಅಂದರೆ ೧.೨ ರಷ್ಟಿದೆ

ಮುಸಲ್ಮಾನರ ಜನಸಂಖ್ಯೆಯಲ್ಲಿ ೫ ಪಟ್ಟಿನಷ್ಟು ಹೆಚ್ಚಳ !

ವರ್ಷ ೧೯೪೭ರಲ್ಲಿ ಭಾರತವು ಸ್ವತಂತ್ರವಾದಾಗ, ಹಿಂದೂಗಳ ಜನಸಂಖ್ಯೆ ೮೫ರಷ್ಟಿತ್ತು. ವರ್ಷ ೨೦೧೧ರ ಜನಗಣನೆಯಲ್ಲಿ ಅದು ೭೯.೮ರಷ್ಟಿತ್ತು ಅಂದರೆ ಶೇಕಡ ೫ ರಷ್ಟು ಕಡಿಮೆಯಾಗಿದೆ. ವರ್ಷ ೧೯೫೧ ರಿಂದ ೨೦೧೧ರ ಸಮಯದಲ್ಲಿ ಮುಸಲ್ಮಾನರ ಜನಸಂಖ್ಯೆಯು ಶೇಕಡ ೫ ಪಟ್ಟಿನಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ ಅವರ ಜನಸಂಖ್ಯೆಯು ೩ ಕೋಟಿ ೫೦ ಲಕ್ಷವಿತ್ತು, ಅದು ವರ್ಷ ೨೦೧೧ರಲ್ಲಿ ೧೭ ಕೋಟಿ ೨೦ ಲಕ್ಷವಾಗಿದೆ. ವರ್ಷ ೨೦೦೧ ರಿಂದ ೨೦೧೧ರವರೆಗೂ ಅಂದರೆ ೧೦ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆಯು ಶೇಕಡ ೧೩.೪ರಷ್ಟು ಆಗಿದೆ. ವರ್ಷ ೨೦೨೧ರಲ್ಲಿ ಅದು ಇನ್ನೂ ಹೆಚ್ಚಾಗಿದೆ ಎಂಬುದು ಸಂಖ್ಯಾವಾರು ಜನಗಣನೆಯ ಬಳಿಕ ತಿಳಿದು ಬರುವುದು.